ETV Bharat / state

ತಕ್ಷಣವೇ ಸಿ.ಟಿ.ರವಿ ಬಿಡುಗಡೆಗೆ ಆದೇಶಿಸಿ 'ಜನಪ್ರತಿನಿಧಿಗಳಾಗಿ ಆರೋಪಿ‌, ದೂರುದಾರರ ವರ್ತನೆ ದುರದೃಷ್ಟಕರ‌' ಎಂದ ಹೈಕೋರ್ಟ್‌ - C T RAVI CASE

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಸಿದ ಆರೋಪ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಸಿ.ಟಿ.ರವಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದ್ದು, ಬಿಗ್ ರಿಲೀಫ್‌ ಸಿಕ್ಕಿದೆ.

ಸಿ.ಟಿ.ರವಿ, ಬೆಂಗಳೂರಿನ ಕೋರ್ಟ್
ಸಿ.ಟಿ.ರವಿ (ETV Bharat)
author img

By ETV Bharat Karnataka Team

Published : 5 hours ago

Updated : 5 hours ago

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪದ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿ, ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಇಂದು ಆದೇಶಿಸಿದೆ.

ಜಾಮೀನು ಕೋರಿ ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಪೀಠ ಈ ಆದೇಶ ಮಾಡಿತು.

ಹೈಕೋರ್ಟ್‌ ಹೇಳಿದ್ದೇನು?: ಅರ್ಜಿದಾರರ ಅವಹೇಳನಕಾರಿ ಪದ ಬಳಕೆ ಆರೋಪಕ್ಕೆ ಕೇವಲ ಮೂರು‌ ವರ್ಷ ಮಾತ್ರ ಶಿಕ್ಷೆ ವಿಧಿಸಬಹುದು. ಅಲ್ಲದೇ, ಏಳು ವರ್ಷಕ್ಕಿಂತಲೂ ಮೇಲ್ಪಟ್ಟ ಶಿಕ್ಷೆ ಇದ್ದಲ್ಲಿ ಮಾತ್ರ ಬಂಧಿಸಿ ವಿಚಾರಣೆ ನಡೆಸಬೇಕಾಗಿದೆ. ಹೀಗಾಗಿ ಅರ್ಜಿದಾರರು ಮಧ್ಯಂತರ ಜಾಮೀನು ಪಡೆಯಲು ಅರ್ಹರು ಎಂದು ನ್ಯಾಯಪೀಠ ಹೇಳಿತು.

ಅರ್ಜಿದಾರರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಹೀಗಾಗಿ, ವಿಚಾರಣೆಯನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇಲ್ಲ‌ ಎಂದಿರುವ ಪೀಠ, ತನಿಖೆಗೆ ಸಹಕರಿಸಬೇಕೆಂದು ಷರತ್ತು ವಿಧಿಸಿ ಬಿಡುಗಡೆಗೆ ಆದೇಶಿಸಿತು.

ಪೊಲೀಸರು ನೋಟಿಸ್ ನೀಡದೆ ಏಕೆ ಬಂಧಿಸಿದರು‌?, ‌ಅವರ ವಿರುದ್ಧದ ಆರೋಪಕ್ಕೆ ಗರಿಷ್ಠ 3 ವರ್ಷ ಮಾತ್ರ ಶಿಕ್ಷೆಗೆ ಅವಕಾಶವಿದೆ. ಈ ರೀತಿಯ ಆರೋಪ ಹೊತ್ತವರನ್ನು ಬಂಧಿಸಿ ವಿಚಾರಣೆ ನಡೆಸುವ ಅಗತ್ಯವೇನು ಎಂದು ಪೀಠ ಪ್ರಶ್ನಿಸಿತು.

"ಜನಪ್ರತಿನಿಧಿಗಳಾಗಿ ಆರೋಪಿ‌ ಮತ್ತು ದೂರುದಾರರ ವರ್ತನೆ ದುರದೃಷ್ಟಕರ‌": ಅಲ್ಲದೆ, ಕಾರಣ ತಿಳಿಸದೇ ಹೇಗೆ ಬಂಧಿಸಿದ್ದೀರಿ?. ಗಂಭೀರ ಪ್ರಕರಣಗಳಲ್ಲಿ ಬಂಧಿಸದ ಎಷ್ಟೋ ಉದಾಹರಣೆಗಳಿವೆ. ಅಲ್ಲದೆ, ಪೊಲೀಸ್ ಕಸ್ಟಡಿಯಲ್ಲಿ ಆರೋಪಿಗೆ ಗಾಯಗಳಾಗಿವೆ. ಇದಕ್ಕೆ ಪೊಲೀಸರು ಹೇಗೆ ವಿವರಣೆ ನೀಡುತ್ತಾರೆ ಎಂದು ಪೀಠ ಕೇಳಿತು. ಜನಪ್ರತಿನಿಧಿಗಳಾಗಿ ಆರೋಪಿ‌ ಮತ್ತು ದೂರುದಾರರ ವರ್ತನೆ ದುರದೃಷ್ಟಕರ‌ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

"ಬಂಧನವೇ ಕಾನೂನು ಬಾಹಿರ"- ಸಿ.ಟಿ.ರವಿ ಪರ ವಕೀಲರ ವಾದ: ಸಿ.ಟಿ.ರವಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ ಚೌಟಾ, "ಸಿಟಿ ರವಿ ಅವರನ್ನು ಬಂಧಿಸುವ ಮುನ್ನ ಯಾವುದೇ ನೋಟಿಸ್ ನೀಡಿಲ್ಲ. ಹೀಗಾಗಿ ಅವರ ಬಂಧನವೇ ಕಾನೂನು ಬಾಹಿರ" ಎಂದು ಪೀಠಕ್ಕೆ ವಿವರಣೆ ನೀಡಿದರು. "ಅಲ್ಲದೆ, ಬಂಧನಕ್ಕೆ ಕಾರಣಗಳನ್ನೂ ನೀಡಿಲ್ಲ. ಎಲ್ಲಾ ಕಾನೂನುಗಳನ್ನೂ ಉಲ್ಲಂಘಿಸಿ ಬಂಧಿಸಲಾಗಿದೆ. ಬಂಧನದ ವೇಳೆ ಗಾಯಗಳಾಗಿವೆ.‌ ಈ ಸಂಬಂಧ ಸಿಟಿ ಸ್ಕ್ಯಾನ್‌ ಮಾಡಿಸಲಾಗಿದೆ. ಆದ್ದರಿಂದ ಅವರಿಗೆ ಜಾಮೀನು ನೀಡಬೇಕು" ಎಂದು ಕೋರಿದರು.

ಸರ್ಕಾರದ ಪರ ವಕೀಲರ ವಾದ: "ಪೊಲೀಸ್ ವಶದಲ್ಲಿರುವ ಅವರು ಎಲ್ಲೆಡೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಪೊಲೀಸರು ಬೇಡಿದರೂ ಅವರು ತನಿಖೆಗೆ ಸಹಕರಿಸಿಲ್ಲ. ಪ್ರಕರಣ ಸಂಬಂಧ ನಮಗೆ ತನಿಖಾಧಿಕಾರಿಗಳಿಂದ ಯಾವುದೇ ಮಾಹಿತಿ ಇಲ್ಲ. ಈ ಹಂತದಲ್ಲಿ ಜಾಮೀನು ನೀಡಬಾರದು" ಎಂದು ಸರ್ಕಾರದ ಪರ ವಕೀಲರು ಪೀಠಕ್ಕೆ ವಿವರಿಸಿದರು.

"ಆರೋಪಿ ಈಗಾಗಲೇ ಜಾಮೀನು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆದು ವಿಚಾರಣಾ ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳಲಿದೆ. ಹೀಗಾಗಿ, ಅರ್ಜಿದಾರರ ಬಿಡುಗಡೆಗೆ ಆದೇಶಿಸಬಾರದು. ಪೊಲೀಸರು ಹಲ್ಲೆ ನಡೆಸಿದ್ದರಿಂದ ಗಾಯಗಳಾಗಿವೆ ಎಂದು ಸಿ.ಟಿ.ರವಿ ವಕೀಲರು ವಾದಿಸಿದ್ದಾರೆ. ಚಿಕಿತ್ಸೆಯ ವಿವರವನ್ನು ವೈದ್ಯಾಧಿಕಾರಿ ಸರಿಯಾಗಿ ನಮೂದಿಸಿಲ್ಲ. ಹೀಗಾಗಿ ಜಾಮೀನು ನೀಡಬಾರದು" ಎಂದು ವಾದ ಮಂಡಿಸಿದರು.

ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಏನಾಯ್ತು?: ಇದೇ ವೇಳೆ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲೂ ಇದೇ ಪ್ರಕರಣದ ವಿಚಾರಣೆ ನಡೆಯಿತು.

ಇಲ್ಲಿ ಸಿ.ಟಿ.ರವಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ''ಬಂಧನದ ಕಾರಣದ ಕುರಿತು ಕಕ್ಷಿದಾರರಿಗೆ, ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೇ ದೂರುದಾರರು ಓರ್ವ ಸಚಿವೆಯಾಗಿದ್ದಾರೆ, ಅವರಿಗೆ ಬೆದರಿಕೆ ಹಾಕಲು ಸಾಧ್ಯವೇ? ದೂರುದಾರರ ಬೆಂಬಲಿಗರೇ ತಮ್ಮ ಕಕ್ಷಿದಾರರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ'' ಎಂದರು.

"ಅಲ್ಲದೆ ಕಕ್ಷಿದಾರರು ಪ್ರಕರಣದ ಸಾಕ್ಷಿನಾಶ ಮಾಡಬಹುದೆಂದು ಹೇಳಿದ್ದಾರೆ. ಆದರೆ ಸಾಕ್ಷಿಗಳೆಲ್ಲಾ ಆಡಳಿತ ಪಕ್ಷದವರೇ ಆಗಿರುವಾಗ ಸಾಕ್ಷಿ ನಾಶ ಹೇಗೆ ಸಾಧ್ಯ? ಸದನದ ವಸ್ತುಗಳನ್ನು ಹಾನಿ ಮಾಡಿದರೆ ಅದನ್ನು ಪ್ರಶ್ನಿಸಬಹುದೇ ವಿನಹ ಸದನದ ಮಾತುಗಳಿಗೆ ಪ್ರಕರಣ ದಾಖಲಿಸುವ ಅವಕಾಶ ನೀಡಿದರೆ ಸದಸ್ಯರು ಸ್ವತಂತ್ರವಾಗಿ ಮಾತನಾಡುವ ಅವಕಾಶ ಕಳೆದುಕೊಳ್ಳುತ್ತಾರೆ. ಒಬ್ಬರಿಗೊಬ್ಬರ ವಿರುದ್ಧ ಪ್ರಕರಣ ದಾಖಲು ಮಾಡುತ್ತಾ ಹೋಗುತ್ತಾರೆ. ಆದ್ದರಿಂದ ಪ್ರಕರಣದಲ್ಲಿ ಸಿ.ಟಿ.ರವಿ ಅವರಿಗೆ ಮಧ್ಯಂತರ ಜಾಮೀನು ನೀಡಬೇಕು" ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಎಸ್.ಶ್ಯಾಮ್ ಸುಂದರ್, ''ಆರೋಪಿ ಅಸಾಂವಿಧಾನಿಕ ಪದ ಬಳಕೆ ಮಾಡಿ ಸುಮಾರು ಬಾರಿ ದೂರುದಾರರನ್ನು ಕರೆದಿದ್ದಾರೆ. ಓರ್ವ ಶಾಸಕ ಮಹಿಳೆಯನ್ನು ಹಾಗೆ ಕರೆದಿದ್ದಾರೆ'' ಎಂದು ಸೀತಾ ಸೊರೇನ್ ಪ್ರಕರಣ ಉಲ್ಲೇಖಿಸಿ ವಾದ ಮಂಡಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಬೆಳಗಾವಿಯಲ್ಲಿ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಸಿ.ಟಿ.ರವಿ ಅವರನ್ನು ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ಆದೇಶವನ್ನು ಮಧ್ಯಾಹ್ನಕ್ಕೆ ಕಾಯ್ದಿರಿಸಿತ್ತು. ಮಧ್ಯಾಹ್ನ ವಿಚಾರಣೆ ನಡೆಸಿ, ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ವರ್ಗಾಯಿಸಿ ಆದೇಶಿಸಿತ್ತು.

ಇದನ್ನೂ ಓದಿ: ಸಿ.ಟಿ.ರವಿ ಪ್ರಕರಣ: ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​ಗೆ ವರ್ಗಾವಣೆ

ಇದನ್ನೂ ಓದಿ: ಸದನದಲ್ಲಿ ಅವಾಚ್ಯ ಪದ ಬಳಕೆ ವಿಚಾರ ಯಾರೂ ಖಂಡಿಸದೇ ಇರುವುದು ನೆನೆದು ಗದ್ಗದಿತರಾದ ಲಕ್ಷ್ಮಿ ಹೆಬ್ಬಾಳ್ಕರ್

Last Updated : 5 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.