ಕೋಲ್ಕತ್ತಾ: ಭಾರತ ತಂಡವನ್ನು ಪ್ರತಿನಿಧಿಸಿರುವ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಾರ್ಥೀವ್ ಪಟೇಲ್ ರಿಷಭ್ ಪಂತ್ ಅವರನ್ನು ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ.
ಈ ಟಿವಿ ಭಾರತ್ ನಡೆಸಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ರಿಷಭ್ ಪಂತ್ ಪ್ತಿಭಾವಂತ ಕ್ರಿಕೆಟರ್ ಆಗಿರುವುದರಿಂದಲೇ ರಾಷ್ಟ್ರೀಯ ತಂಡಕ್ಕೆ ಬೇಗ ಆಯ್ಕೆಯಾಗಿದ್ದಾರೆ. ಆದರೆ, ದೊಡ್ಡಮಟ್ಟದ ಕ್ರಿಕೆಟ್ ಆಡುವಾಗ ಒತ್ತಡ ಅಗುವುದು ಸಾಮಾನ್ಯ ಎಂದು ಪಂತ್ರನ್ನು ಹೊಗಳಿದ್ದಾರೆ.
ತನ್ನ ರಾಷ್ಟ್ರವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರಿಕೆಟಿಗನು ಒತ್ತಡದಲ್ಲಿರುತ್ತಾನೆ ಎಂದು ಹೇಳುವ ಮೂಲಕ 34 ವರ್ಷದ ಪಂತ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಜನವರಿ 3ರಿಂದ ಪಶ್ಚಿಮ ಬಂಗಾಳದ ವಿರುದ್ಧ ಗುಜರಾತ್ ಸೆಣಸಾಡಲಿದೆ. ಪಾರ್ಥೀವ್ ಪಟೇಲ್ ಗುಜರಾತ್ ತಂಡದ ನೇತೃತ್ವವಹಿಸಲಿದ್ದಾರೆ.
ಗುಜರಾತ್ ತಂಡ ಆಡಿರುವ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 8 ವಿಕೆಟ್ಗಳಿಂದ ಹಾಗೂ ಎರಡನೇ ಪಂದ್ಯದಲ್ಲಿ ಕೇರಳ ವಿರುದ್ಧ ಗುಜರಾತ್ 90 ರನ್ಗಳ ಜಯ ಸಾಧಿಸಿತ್ತು. ಇನ್ನು ಬೆಂಗಾಲ್ ತನ್ನ ಮೊದಲ ಪಂದ್ಯದಲ್ಲಿ ಕೇರಳ ವಿರುದ್ಧ 8 ವಿಕೆಟ್ಗಳಿಂದ ಜಯ ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ ಆಂಧ್ರಪ್ರದೇಶದ ವಿರುದ್ಧ ಡ್ರಾ ಸಾಧಿಸಿತ್ತು.