ETV Bharat / sports

ನಾನು ಯಾವುದೇ ಟಿ20 ಲೀಗ್​ಗೆ ಲಭ್ಯನಾಗಿರುತ್ತೇನೆಂದು ಖಚಿತಪಡಿಸಿಲ್ಲ.. ಇರ್ಫಾನ್ ಪಠಾಣ್​

ಎಸ್​ಎಲ್​ಸಿಯ ಅಗ್ರ 70 ವಿದೇಶಿ ಆಟಗಾರರ ಲಿಸ್ಟ್​ನಲ್ಲಿ ಪಠಾಣ್​ ಹೆಸರಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ಹಿರಿಯ ವೇಗಿ ಬಿಸಿಸಿಐನಿಂದಲೂ ಅನುಮತಿ ಪಡೆದಿದ್ದಾರೆ ಎಂಬುದಾಗಿಯೂ ಸುದ್ದಿಯಾಗಿತ್ತು..

ಇರ್ಫಾನ್ ಪಠಾಣ್​
ಇರ್ಫಾನ್ ಪಠಾಣ್​
author img

By

Published : Aug 3, 2020, 5:09 PM IST

ನವದೆಹಲಿ : ಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಪಠಾಣ್ ಹೆಸರು ನೋಂದಾಯಿಸಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿರುವ ಬೆನ್ನಲ್ಲೇ ತಾವು ಯಾವುದೇ ಟಿ20 ಲೀಗ್​ನಲ್ಲಿ ಭಾಗವಹಿಸುತ್ತೇನೆ ಎಂದು ಈವರೆಗೂ ಖಚಿತಪಡಿಸಿಲ್ಲ ಎಂದು ಭಾರತ ತಂಡದ ಮಾಜಿ ಆಲ್​ರೌಂಡರ್​ ಇರ್ಫಾನ್​ ಪಠಾಣ್​ ತಿಳಿಸಿದ್ದಾರೆ.

ಇದೇ ತಿಂಗಳ 28ರಿಂದ ಆರಂಭವಾಗಲಿರುವ ಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಭಾರತ ತಂಡದ ಮಾಜಿ ಆಟಗಾರ ಪಠಾಣ್​ ಆಡಲಿದ್ದಾರೆ. ಎಸ್​ಎಲ್​ಸಿಯ ಅಗ್ರ 70 ವಿದೇಶಿ ಆಟಗಾರರ ಲಿಸ್ಟ್​ನಲ್ಲಿ ಪಠಾಣ್​ ಹೆಸರಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ವರದಿಯಲ್ಲಿ ಹಿರಿಯ ವೇಗಿ ಬಿಸಿಸಿಐನಿಂದಲೂ ಅನುಮತಿಪಡೆದಿದ್ದಾರೆ. ಒಂದು ಪ್ರಾಂಚೈಸಿ ಪಠಾಣ್‌ರನ್ನು ಕೊಳ್ಳಲು ಈಗಾಗಲೇ ಸಿದ್ಧವಾಗಿದೆ ಎಂದು ತಿಳಿದು ಬಂದಿತ್ತು.

ಆದರೆ, ಈ ಕುರಿತು ತಮ್ಮ ಟ್ವಿಟರ್​ನಲ್ಲಿ ಪಠಾಣ್​ 'ಭವಿಷ್ಯದಲ್ಲಿ ನಾನು ವಿಶ್ವದಾದ್ಯಂತ ನಡೆಯುವ ಟಿ20 ಲೀಗ್​ಗಳಲ್ಲಿ ಆಡಲು ಬಯಸುತ್ತೇನೆ. ಆದರೆ, ಪಸ್ತುತ ಯಾವುದೇ ಲೀಗ್​ಗೆ ನಾನು ಲಭ್ಯನಿರುತ್ತೇನೆ ಎಂದು ಖಚಿತಪಡಿಸಿಲ್ಲ' ಎಂದು ಪಠಾಣ್​ ತಿಳಿಸಿದ್ದಾರೆ.

ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್​ ಲೀಗ್ ಆಗಸ್ಟ್​ 28ರಿಂದ ಆರಂಭಗೊಳ್ಳಲಿದೆ. 23 ಪಂದ್ಯಗಳ ಈ ಟೂರ್ನಿಯಲ್ಲಿ ಕೊಲಂಬೊ, ಕ್ಯಾಂಡಿ, ಗಾಲೆ, ದಂಬುಲ್ಲಾ ಹಾಗೂ ಜಫ್ನಾ ನಗರಗಳ ಹೆಸರಿನಲ್ಲಿ 5 ಪ್ರಾಂಚೈಸಿಗಳು ಟೂರ್ನಿಯಲ್ಲಿ ಭಾಗವಹಿಸಲಿವೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.