ETV Bharat / sports

ಭಾರತ ತಂಡ ಕಂಡ ಶ್ರೇಷ್ಠ ನಾಯಕ ಇವರಂತೆ? ಯಾರು?ಏಕೆ ಗೊತ್ತಾ?

ಐಸಿಸಿ ನಡೆಸಿದ ಇನ್​ಸ್ಟಾಗ್ರಾಂ ಲೈವ್​ ಕಾರ್ಯಕ್ರಮದ ವೇಳೆ ಭಾರತದ ಶ್ರೇಷ್ಠ ನಾಯಕ ಯಾರು ಎಂಬ ಚರ್ಚೆಯಲ್ಲಿ ಪೊಲಾಕ್​ ಜೊತೆ ವಿವರಣೆ ನೀಡಿರುವ ಹರ್ಷ ಬೋಗ್ಲೆ ಸೌರವ್​ ಗಂಗೂಲಿ ಹೆಸರನ್ನು ಆಯ್ಕೆ ಮಾಡಿದ್ದಾರೆ.

ಹರ್ಷ ಬೊಗ್ಲೆ
ಹರ್ಷ ಬೊಗ್ಲೆ
author img

By

Published : Apr 29, 2020, 4:24 PM IST

ಮುಂಬೈ: ಭಾರತ ತಂಡ ಕಪಿಲ್​ ದೇವ್​, ಸೌರವ್​ ಗಂಗೂಲಿ, ಮಹೇಂದ್ರ ಸಿಂಗ್​ ಧೋನಿ ಹಾಗೂ ಕೊಹ್ಲಿ ಸೇರಿದಂತೆ ಹಲವಾರು ಆಟಗಾರರು ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಇಷ್ಟು ಜನರಲ್ಲಿ ಯಾರು ಶ್ರೇಷ್ಠ ನಾಯಕ ಎಂದು ಆಯ್ಕೆ ಮಾಡುವಾಗ ಮಾತ್ರ ಗೊಂದಲ ಸೃಷ್ಠಿಯಾಗುತ್ತದೆ. ಆದರೆ 20 ಕ್ಕೂ ಹೆಚ್ಚು ವರ್ಷಗಳ ಕಾಲ ವೀಕ್ಷಕ ವಿವರಣೆಗಾರ ಹಾಗೂ ಕ್ರಿಕೆಟ್​ ವಿಶ್ಲೇಷಕನಾಗಿ ಸೇವೆ ಸಲ್ಲಿಸಿರುವ ಹರ್ಷ ಬೊಗ್ಲೆ ಕೆಲವು ಕಾರಣ ನೀಡಿ ಒಬ್ಬರನ್ನು ಆಯ್ಕೆ ಮಾಡಿದ್ದಾರೆ.

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ

ಐಸಿಸಿ ನಡೆಸಿದ ಇನ್​ಸ್ಟಾಗ್ರಾಂ ಲೈವ್​ ಕಾರ್ಯಕ್ರಮದ ವೇಳೆ ಭಾರತದ ಶ್ರೇಷ್ಠ ನಾಯಕ ಯಾರು ಎಂಬ ಚರ್ಚೆಯಲ್ಲಿ ಪೊಲಾಕ್​ ಜೊತೆ ವಿವರಣೆ ನೀಡಿರುವ ಹರ್ಷ ಬೋಗ್ಲೆ ಸೌರವ್​ ಗಂಗೂಲಿ ಹೆಸರನ್ನು ಆಯ್ಕೆ ಮಾಡಿದ್ದಾರೆ.

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ

ಭಾರತ ತಂಡಕ್ಕೆ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ಧೋನಿ ಮೇಲ್ನೋಟಕ್ಕೆ ಅತ್ಯುತ್ತಮ ನಾಯಕ ಎಂದು ಕಂಡುಬರುತ್ತದೆ. ಆದರೆ ಧೋನಿಗಿಂತಲೂ ಸೌರವ್​ ಭಾರತ ತಂಡದ ಶ್ರೇಷ್ಠ ನಾಯಕ ಎಂಬುದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ.

ದಾದಾ ನಾಯಕರಾದ ಕಾಲದಲ್ಲಿ ಭಾರತ ಕ್ರಿಕೆಟ್​ ಮ್ಯಾಚ್​ ಫಿಕ್ಸಿಂಗ್ ಭೂತದಿಂದ ಕಂಗಾಲಾಗಿತ್ತು. ಈ ಸಂದರ್ಭದಲ್ಲಿ ನಾಯಕನಾಗಿ ಆಯ್ಕೆಯಾದ ಸಚಿನ್​ ತೆಂಡೂಲ್ಕರ್​ ತಂಡವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಲಿಲ್ಲ. ಈ ಸಂದರ್ಭದಲ್ಲಿ ನಾಯಕತ್ವ ವಹಿಸಿಕೊಂಡ ಗಂಗೂಲಿ ಭಾರತ ಕ್ರಿಕೆಟ್ ಅನ್ನೇ ಬದಲಾಯಿಸಿದರು.

ಹರ್ಭಜನ್​ ಸಿಂಗ್, ಜಹೀರ್​ ಖಾನ್​ ರಂತಹ ಬೌಲರ್​ಗಳನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡರು. ಹಾಗೆಯೇ ಯುವರಾಜ್ ಸಿಂಗ್​, ಸೆಹ್ವಾಗ್​, ಮೊಹಮ್ಮದ್​ ಕೈಫ್​ ಅಂತಹ ಯುವ ಬ್ಯಾಟ್ಸ್​ಮನ್​ಗಳನ್ನು ಆಯ್ಕೆ ಮಾಡಿಕೊಂಡು ಬಲಿಷ್ಠ ತಂಡ ಕಟ್ಟಿದರಲ್ಲದೇ 2003 ವಿಶ್ವಕಪ್​ನಲ್ಲಿ ತಂಡವನ್ನು ಫೈನಲ್​ಗೇರಿಸುವಲ್ಲಿ ಯಶಸ್ವಿಯಾದರು.

ಅಲ್ಲದೇ ನಾಯಕನಾಗಿ ತಂಡವನ್ನು ಮುನ್ನಡೆಸಿದರೆಲ್ಲದೆ ತಮ್ಮ ಮೂರನೇ ಕ್ರಮಾಂಕವನ್ನು ಕೂಡ ಯುವ ಆಟಗಾರರಿಗೆ ಬಿಟ್ಟುಕೊಟ್ಟರು. ಹೀಗೆ ಇವರು ತಂಡವನ್ನು ಕಟ್ಟಿದ್ದಲ್ಲದೆ, ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಟ್ಟು ಭಾರತ ತಂಡವನ್ನು ವಿಶ್ವದ ಬಲಿಷ್ಠ ತಂಡವನ್ನಾಗಿ ಮಾಡಿದ್ದರು ಎಂದು ಬೊಗ್ಲೆ ವಿವರಿಸಿದ್ದಾರೆ.

ಭಾರತಕ್ಕೆ ಮೂರು ಐಸಿಸಿ ವಿಶ್ವಕಪ್​ ಗೆದ್ದುಕೊಟ್ಟ ನಾಯಕ ಎಂಎಸ್​ ಧೋನಿಯನ್ನು ತಂಡಕ್ಕೆ ಆಯ್ಕೆ ಮಾಡಿದ್ದಲ್ಲದೆ, ಅವರಿಗೆ ತಮ್ಮ ಮೂರನೇ ಕ್ರಮಾಂಕವನ್ನು ಬಿಟ್ಟುಕೊಡುವ ಮೂಲಕ ಧೋನಿ ಭಾರತ ತಂಡದಲ್ಲಿ ನೆಲೆಯೂರಲು ನೆರವಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.