ಸೂರತ್: ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 100 ಟಿ-20 ಪಂದ್ಯವಾಡುವ ಮೂಲಕ ಭಾರತ ಪರ ಅತ್ಯಧಿಕ ಟಿ-20 ಪಂದ್ಯವನ್ನಾಡಿದ ಕ್ರಿಕೆಟರ್ ಎನಿಸಿಕೊಂಡರು.
ಸೂರತ್ನಲ್ಲಿ ಆಫ್ರಿಕನ್ನರ ವಿರುದ್ಧ ಕೊನೆಯ ಟಿ-20 ಪಂದ್ಯವಾಡಿದ ಹರ್ಮನ್ ಪ್ರೀತ್ ಕೌರ್ 100 ಪಂದ್ಯಗಳನ್ನಾಡಿದ ಏಕೈಕ ಭಾರತೀಯ ಕ್ರಿಕೆಟರ್ ಎನಿಸಿಕೊಂಡರು. ವಿಶೇಷವೆಂದರೆ ಭಾರತ ಪುರುಷರ ತಂಡದ ಮಾಜಿ ನಾಯಕ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡ ಇನ್ನೂ 100 ಟಿ-20 ಪಂದ್ಯಗಳನ್ನಾಡಿಲ್ಲ.
ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ 98 ಪಂದ್ಯಗಳನ್ನಾಡಿದ್ದರೆ, ಕೊಹ್ಲಿ 72 ಟಿ-20 ಪಂದ್ಯಗಳನ್ನಾಡಿದ್ದಾರೆ. ಸುರೇಶ್ ರೈನಾ ಕೂಡ 78 ಪಂದ್ಯಗಳನ್ನಾಡಿದ್ದಾರೆ. ಇನ್ನು ಮಹಿಳೆಯರಲ್ಲಿ ಭಾರತ ತಂಡದ ಏಕದಿನ ತಂಡದ ನಾಯಕಿ ಮಿಥಾಲಿರಾಜ್ 89 ಟಿ-20 ಪಂದ್ಯಗಳನ್ನಾಡಿ ನಿವೃತ್ತಿ ಹೊಂದಿದ್ದಾರೆ.
ಕೌರ್ 100 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 89 ಇನ್ನಿಂಗ್ಸ್ಗಳಿಂದ 2004 ರನ್ ಬಾರಿಸಿದ್ದಾರೆ. ಇದರಲ್ಲಿ1 ಶತಕ 6 ಅರ್ಧಶತಕ ಕೂಡ ಸೇರಿದೆ.
-
A special cap for captain @ImHarmanpreet to mark her 100th T20I for #TeamIndia #INDvSA 🇮🇳🇮🇳👏🇮🇳 pic.twitter.com/Sp6KFUca9o
— BCCI Women (@BCCIWomen) October 4, 2019 " class="align-text-top noRightClick twitterSection" data="
">A special cap for captain @ImHarmanpreet to mark her 100th T20I for #TeamIndia #INDvSA 🇮🇳🇮🇳👏🇮🇳 pic.twitter.com/Sp6KFUca9o
— BCCI Women (@BCCIWomen) October 4, 2019A special cap for captain @ImHarmanpreet to mark her 100th T20I for #TeamIndia #INDvSA 🇮🇳🇮🇳👏🇮🇳 pic.twitter.com/Sp6KFUca9o
— BCCI Women (@BCCIWomen) October 4, 2019