ಮುಂಬೈ: ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಬೆನ್ನು ನೋವಿನ ಸಮಸ್ಯೆಯಿಂದ ಲಂಡನ್‌ನಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದು, ಇದೀಗ ಪುನಶ್ಚೇತನದ ಹಂತದಲ್ಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕೈಯಲ್ಲಿ ಬ್ಯಾಟ್ ಹಿಡಿದು ತರಬೇತಿ ಆರಂಭಿಸಿದ್ದ ಹಾರ್ದಿಕ್ ಪಾಂಡ್ಯಾ ಇದೀಗ ಜಿಮ್ನಲ್ಲಿ ಸಖತ್ ಆಗಿ ಬೆವರು ಹರಿಸ್ತಿದ್ದಾರೆ.
-
Stronger every day 🤙💥 pic.twitter.com/1olUp3omEs
— hardik pandya (@hardikpandya7) December 11, 2019 " class="align-text-top noRightClick twitterSection" data="
">Stronger every day 🤙💥 pic.twitter.com/1olUp3omEs
— hardik pandya (@hardikpandya7) December 11, 2019Stronger every day 🤙💥 pic.twitter.com/1olUp3omEs
— hardik pandya (@hardikpandya7) December 11, 2019
ಮುಂದಿನ ವರ್ಷ ವಿಶ್ವಕಪ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್ ಆರಂಭಗೊಳ್ಳಲಿರುವ ಕಾರಣ ತಂಡಕ್ಕೆ ಕಮ್ಬ್ಯಾಕ್ ಮಾಡುವ ಪ್ಲಾನ್ ಹಾಕಿಕೊಂಡಿದ್ದು, ಅದಕ್ಕಾಗಿ ಶೇ.100ರಷ್ಟು ಸಿದ್ಧತೆ ನಡೆಸಿದ್ದಾರೆ. ಇದೀಗ ತಾವು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ.
-
Looking forward to that big return ... more power to you 💪🏽.
— Suniel Shetty (@SunielVShetty) December 11, 2019 " class="align-text-top noRightClick twitterSection" data="
">Looking forward to that big return ... more power to you 💪🏽.
— Suniel Shetty (@SunielVShetty) December 11, 2019Looking forward to that big return ... more power to you 💪🏽.
— Suniel Shetty (@SunielVShetty) December 11, 2019
ಹಾರ್ದಿಕ್ ಪಾಂಡ್ಯಾ ಶೇರ್ ಮಾಡಿರುವ ವಿಡಿಯೋ ತುಣುಕಿಗೆ ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಸ್ಪೂರ್ತಿ ನೀಡುವ ಸಂದರೆ ರವಾನೆ ಮಾಡಿದ್ದಾರೆ. 2018 ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಏಷ್ಯಾ ಕಪ್ ವೇಳೆ ಹಾರ್ದಿಕ್ ಪಾಂಡ್ಯಗೆ ಬೆನ್ನು ನೋವು ಉಲ್ಬಣಗೊಂಡಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಹಾರ್ದಿಕ್ ಪಾಂಡ್ಯ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಅಲ್ಲಿಂದ ಬಳಿಕ ತಮ್ಮ ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವುದಕ್ಕೆ ತರಬೇತಿಯನ್ನು ಆರಂಭಿಸಿದ್ದಾರೆ.