ETV Bharat / sports

ಟೆಸ್ಟ್​​ನಲ್ಲಿ ಮಯಾಂಕ್​ ಜತೆ ಈ ಪ್ಲೇಯರ್​ ಆರಂಭಿಕರಾಗಿ ಕಣಕ್ಕಿಳಿಯಲಿ: ಹರ್ಜಭನ್​​ ಸಲಹೆ! - ನ್ಯೂಜಿಲ್ಯಾಂಡ್​ ವಿರುದ್ಧ ಟೆಸ್ಟ್​

ನ್ಯೂಜಿಲ್ಯಾಂಡ್​ ವಿರುದ್ಧ ಎರಡು ಟೆಸ್ಟ್​ ಪಂದ್ಯಗಳ ಸರಣಿ ಆಡಲು ಟೀಂ ಇಂಡಿಯಾ ಸಜ್ಜುಗೊಳ್ಳುತ್ತಿದ್ದು, ಕನ್ನಡಿಗ ಮಯಾಂಕ್​​ ಅಗರವಾಲ್​ ಜತೆ ಈ ಪ್ಲೇಯರ್​ ಇನ್ನಿಂಗ್ಸ್​ ಆರಂಭಿಸಲಿ ಎಂದು ಹರ್ಭಜನ್​ ಸಿಂಗ್​​ ಅಭಿಪ್ರಾಯ ಹೊರಹಾಕಿದ್ದಾರೆ.

Mayank Agarwal
ಮಯಾಂಕ್​ ಅಗರವಾಲ್​​
author img

By

Published : Feb 12, 2020, 2:52 PM IST

ಮುಂಬೈ: ನ್ಯೂಜಿಲ್ಯಾಂಡ್​ ವಿರುದ್ಧ ಟಿ-20 ಸರಣಿ ಕ್ಲೀನ್​ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ, ತದನಂತರ ನಡೆದ ಏಕದಿನ ಕ್ರಿಕೆಟ್​ನಲ್ಲಿ ವೈಟ್​ವಾಶ್​ ಮುಖಭಂಗ ಅನುಭವಿಸಿ ಇದೀಗ ಟೆಸ್ಟ್​ ಸರಣಿ ಆಡಲು ಸಜ್ಜುಗೊಳ್ತಿದೆ.

ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯಲು ಕನ್ನಡಿಗ ಮಯಾಂಕ್​ ಅಗರವಾಲ್​ ಸನ್ನದ್ಧವಾಗಿದ್ದು, ಅವರೊಂದಿಗೆ ಯಂಗ್​ ಬ್ಯಾಟ್ಸ್​ಮನ್​ ಶುಬ್ಮನ್​ ಗಿಲ್​​ ಇನ್ನಿಂಗ್ಸ್​ ಆರಂಭಿಸಲಿ ಎಂದು ಟೀಂ ಇಂಡಿಯಾ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಅಭಿಪ್ರಾಯ ಪಟ್ಟಿದ್ದಾರೆ.

Shubman Gill
ಶುಬ್ಮನ್​ ಗಿಲ್​​

ಇಂಡಿಯಾ ಎ ಹಾಗೂ ದೇಶಿಯ ಕ್ರಿಕೆಟ್​​ನಲ್ಲಿ ಈಗಾಗಲೇ ಅದ್ಭುತ ಪ್ರದರ್ಶನ ನೀಡಿರುವ ಗಿಲ್​ ನ್ಯೂಜಿಲ್ಯಾಂಡ್​ ಎ ತಂಡದ ವಿರುದ್ಧ ಮಿಂಚು ಹರಿಸಿದ್ದು, ಅಜೇಯ 204ರನ್​ಗಳಿಕೆ ಮಾಡಿದ್ದಾರೆ. ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ರೋಹಿತ್​ ಶರ್ಮಾ ಗಾಯಗೊಂಡಿರುವ ಕಾರಣ ಅವರ ಸ್ಥಾನಕ್ಕೆ ಗಿಲ್​ ಅವಕಾಶ ಪಡೆದುಕೊಳ್ಳಲಿ ಎಂದು ಭಜ್ಜಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದೆ ಕೂಡ ಟೀಂ ಇಂಡಿಯಾ ರಿಸರ್ವ್​ ಓಪರ್​ ಆಗಿ ಆಯ್ಕೆಯಾಗಿದ್ದ ಗಿಲ್​ ಇಲ್ಲಿಯವರೆಗೆ ಯಾವುದೇ ರೀತಿಯ ಅವಕಾಶ ಪಡೆದುಕೊಂಡಿಲ್ಲ. ಹೀಗಾಗಿ ಅವರಿಗೆ ನ್ಯೂಜಿಲ್ಯಾಂಡ್​ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಚಾನ್ಸ್​ ನೀಡಬೇಕು ಎಂದು ಸ್ಪಿನ್ನರ್​ ಅಭಿಪ್ರಾಯ ಪಟ್ಟಿದ್ದಾರೆ. ಫೆ.21ರಿಂದ ನ್ಯೂಜಿಲ್ಯಾಂಡ್​ ವಿರುದ್ಧ ಟೀಂ ಇಂಡಿಯಾ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಲಿದ್ದು, ಅದಕ್ಕೂ ಮುಂಚಿತವಾಗಿ ಮೂರು ದಿನಗಳ ಟೆಸ್ಟ್​​ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಪಡೆ ಭಾಗಿಯಾಗಲಿದೆ. ಎರಡನೇ ಟೆಸ್ಟ್​ ಫೆ.29ರಂದು ನಡೆಯಲಿದೆ.

ಟೆಸ್ಟ್ ​ ತಂಡ ಇಂತಿದೆ : ವಿರಾಟ್​​ ಕೊಹ್ಲಿ(ಕ್ಯಾಪ್ಟನ್​), ಮಯಾಂಕ್​ ಅಗರವಾಲ್​,ಪೃಥ್ವಿ ಶಾ,ಶುಬ್ಮನ್​ ಗಿಲ್​, ಚೇತೇಶ್ವರ್​ ಪೂಜಾರಾ, ರಹಾನೆ(ಉಪನಾಯಕ), ಹನುಮ ವಿಹಾರಿ, ವೃದ್ಧಿಮಾನ್​ ಸಾಹಾ(ವಿ,ಕೀ), ರಿಷಭ್​ ಪಂತ್​(ವಿ,ಕೀ), ಆರ್​.ಅಶ್ವಿನ್​, ರವೀಂದ್ರ ಜಡೇಜಾ, ಜಸ್​ಪ್ರೀತ್​ ಬುಮ್ರಾ,ಉಮೇಶ್​ ಯಾದವ್​,ಮೊಹಮ್ಮದ್​ ಶಮಿ,ನವದೀಪ್​ ಸೈನಿ ಹಾಗೂ ಇಶಾಂತ್​ ಶರ್ಮಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.