ETV Bharat / sports

ಭಜ್ಜಿಯ ಸಾರ್ವಕಾಲಿಕ​ 11​ರ ಪಟ್ಟಿಯಲ್ಲಿ ವಿಶ್ವದ ಅತ್ಯುತ್ತಮ ಭಾರತೀಯ ಕ್ರಿಕೆಟರ್‌ಗಳಿಗೆ ಜಾಗವಿಲ್ಲ!

ಭಾರತ ಕ್ರಿಕೆಟ್​ ಚರಿತ್ರೆಯಲ್ಲಿ ಸೌರವ್​ ಗಂಗೂಲಿ, ಎಂ.ಎಸ್.​ ಧೋನಿ ಹಾಗೂ ವಿರಾಟ್​ ಕೊಹ್ಲಿ ಸಾಧನೆ ಅದ್ಭುತವಾಗಿದೆ. ಈ ಮೂವರು ಭಾರತ ಕ್ರಿಕೆಟ್​ ಕಂಡ ಶ್ರೇಷ್ಠ ನಾಯಕರಾಗಿದ್ದಾರೆ. ದಾದಾ ಭಾರತಕ್ಕೆ ಬಲಿಷ್ಠ ತಂಡವನ್ನು ಕಟ್ಟಿಕೊಟ್ಟರೆ, ಧೋನಿ ಕೆಲವು ಬದಲಾವಣೆಗಳೊಂದಿಗೆ ಭಾರತಕ್ಕೆ ಮರೀಚಿಕೆಯಾಗಿದ್ದ ಐಸಿಸಿ ವಿಶ್ವಕಪ್​ ಸಹಿತ, ಟಿ20 ವಿಶ್ವಕಪ್​ ಹಾಗೂ ಚಾಂಪಿಯನ್​ ಟ್ರೋಫಿಗಳನ್ನು ಗೆದ್ದು ಕೊಟ್ಟಿದ್ದಾರೆ.

Harbhajan Singh Dream team
ಭಜ್ಜಿಯ ಆಲ್​ಟೈಮ್​ ಇಲವೆನ್
author img

By

Published : Mar 7, 2020, 6:16 PM IST

ಮುಂಬೈ: ಭಾರತದ ಶ್ರೇಷ್ಠ ಸ್ಪಿನ್ನರ್​ಗಳಲ್ಲಿ ಒಬ್ಬರಾದ ಹರ್ಭಜನ್​ ಸಿಂಗ್​ ತಮ್ಮ ಕನಸಿನ ತಂಡವನ್ನು ಪ್ರಕಟಿಸಿದ್ದು, ಅದರಲ್ಲಿ ಭಾರತದ ಶ್ರೇಷ್ಠ ಕ್ರಿಕೆಟಿಗರಾದ ಸೌರವ್​ ಗಂಗೂಲಿ, ಧೋನಿ ಹಾಗೂ ಕೊಹ್ಲಿಯವರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದ್ದಾರೆ.

ಭಾರತ ಕ್ರಿಕೆಟ್​ ಚರಿತ್ರೆಯಲ್ಲಿ ಸೌರವ್​ ಗಂಗೂಲಿ, ಎಂ.ಎಸ್.ಧೋನಿ ಹಾಗೂ ವಿರಾಟ್​ ಕೊಹ್ಲಿ ಸಾಧನೆ ಅದ್ಭುತವಾಗಿದೆ. ಈ ಮೂವರು ಭಾರತ ಕ್ರಿಕೆಟ್​ ಕಂಡ ಶ್ರೇಷ್ಠ ನಾಯಕರಾಗಿದ್ದಾರೆ. ದಾದಾ ಭಾರತಕ್ಕೆ ಬಲಿಷ್ಠ ತಂಡವನ್ನು ಕಟ್ಟಿಕೊಟ್ಟರೆ, ಧೋನಿ ಕೆಲವು ಬದಲಾವಣೆಗಳೊಂದಿಗೆ ಭಾರತಕ್ಕೆ ಮರೀಚಿಕೆಯಾಗಿದ್ದ ಐಸಿಸಿ ವಿಶ್ವಕಪ್​ ಸಹಿತ, ಟಿ20 ವಿಶ್ವಕಪ್​ ಹಾಗೂ ಚಾಂಪಿಯನ್​ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ.

ಇನ್ನು ವಿರಾಟ್​ ಕೊಹ್ಲಿ ಮೂರು ವಿಭಾಗದ ಕ್ರಿಕೆಟ್​ನಲ್ಲಿ ಸಹಸ್ರಾರು ರನ್​ಗಳಿಸುತ್ತಾ ರನ್​ಮಷಿನ್​ ಎಂಬ ಬಿರುದು ಪಡೆದಿದ್ದಾರೆ. ಅಲ್ಲದೆ ಮೂರು ಪ್ರಕಾರದ ತಂಡವನ್ನು ಕಳೆದ 5 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಾ ಬಂದಿದ್ದಾರೆ. ಮೂವರ ನಾಯಕತ್ವದಲ್ಲೂ ಆಡಿರುವ ಭಜ್ಜಿ ಈ ಮೂವರು ಆಟಗಾರರನ್ನೇ ತಮ್ಮ ಕನಸಿನ ತಂಡದಲ್ಲಿ ಸೇರಿಸಿಲ್ಲದಿರುವುದು ಅಭಿಮಾನಿಗಳಿಗೆ ಅಚ್ಚರಿ ತರಿಸಿದೆ.

ಆದರೆ ಹರ್ಭಜನ್ ಸಿಂಗ್ ತಮ್ಮ ತಂಡದಲ್ಲಿ ಕ್ರಿಕೆಟ್ ದಿಗ್ಗಜ್ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ವೀರೇಂದ್ರ ಸೆಹ್ವಾಗ್ ಅವರನ್ನು ತಂಡದಲ್ಲಿ ಸೇರಿಸಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾದ ನಾಲ್ವರು, ದಕ್ಷಿಣ ಆಫ್ರಿಕಾದ ಇಬ್ಬರು, ಶ್ರೀಲಂಕಾ ಹಾಗೂ ಪಾಕಿಸ್ತಾನದಿಂದ ತಲಾ ಒಬ್ಬರನ್ನು ತಂಡದಲ್ಲಿ ಘೋಷಿಸಿದ್ದಾರೆ. ಆಶ್ಚರ್ಯವೆಂದರೆ ವಿಂಡೀಸ್​ ದಿಗ್ಗಜ ಬ್ರಿಯಾನ್​ ಲಾರ ಕೂಡ ಇವರ ತಂಡದಲ್ಲಿಲ್ಲ.

ಹರ್ಭಜನ್ ಸಿಂಗ್ ಭಾರತದ ಪರ 103 ಟೆಸ್ಟ್ ಪಂದ್ಯಗಳಲ್ಲಿ 417 ವಿಕೆಟ್, 236 ಏಕದಿನ ಪಂದ್ಯಗಳಿಂದ 269 ವಿಕೆಟ್​, 28 ಟಿ20 ಪಂದ್ಯಗಳಿಂದ 25 ವಿಕೆಟ್​ ಪಡೆದಿದ್ದಾರೆ.

ಭಜ್ಜಿ ಕನಸಿನ ತಂಡ:

ವೀರೇಂದ್ರ ಸೆಹ್ವಾಗ್, ಮ್ಯಾಥ್ಯೂ ಹೇಡನ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಜಾಕ್ ಕಾಲಿಸ್, ರಿಕ್ಕಿ ಪಾಂಟಿಂಗ್, ಕುಮಾರ್ ಸಂಗಕ್ಕಾರ, ಶಾನ್ ಪೋಲಾಕ್, ಶೆನ್ ವಾರ್ನ್, ವಾಸೀಂ ಅಕ್ರಮ್, ಗ್ಲೇನ್ ಮೆಕ್​ಗ್ರಾತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.