ಲಾಹೋರ್ : ಇಂಗ್ಲೆಂಡ್ ಪ್ರವಾಸಕ್ಕಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಪಾಕಿಸ್ತಾನದ ಯುವ ಕ್ರಿಕೆಟರ್ ಹೈದರ್ ಅಲಿ, ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ನನ್ನ ರೋಲ್ ಮಾಡೆಲ್ ಎಂದು ಹೇಳಿದ್ದಾರೆ.
ಅಂಡರ್-19 ಆಟಗಾರರಾಗಿರುವ ಅಲಿ, 2019-20 ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ 2020-21ರ ಸೀಸನ್ಗೂ ಆಯ್ಕೆಯಾಗಿದ್ದಾರೆ. ಕಳೆದ ಜೂನ್ನಲ್ಲಿ ನಡೆದ ಅಂಡರ್ -19 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟು 317 ರನ್ ಗಳಿಸಿ ಮಿಂಚಿದ್ದ ಅಲಿ, ಪಾಕಿಸ್ತಾನ ಸೂಪರ್ ಲೀಗ್ ಪೇಶ್ವರ್ ಝಲ್ಮಿ ಪರ ಒಂಬತ್ತು ಪಂದ್ಯಗಳಲ್ಲಿ 239 ರನ್ ಗಳಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲಿ, ರೋಲ್ ಮಾಡೆಲ್‌ಗಳಿಗೆ ಸಂಬಂಧಿಸಿದಂತೆ, ನನ್ನ ರೋಲ್ ಮಾಡೆಲ್ ರೋಹಿತ್ ಶರ್ಮಾ. ನಾನು ಅವರನ್ನು ಒಬ್ಬ ಆಟಗಾರನಾಗಿ ನಿಜವಾಗಿಯೂ ಇಷ್ಟಪಡುತ್ತೆ. ಅವರಂತೆ ಆಕ್ರಮಣಕಾರಿ ಆರಂಭವನ್ನು ಭಯಸುತ್ತೇನೆ ಎಂದು ಹೇಳಿದ್ದಾರೆ.
ಅವರು ಎಲ್ಲ ಮೂರು ಸ್ವರೂಪದ ಪಂದ್ಯಗಳಿಗೂ ಹೊಂದಿಕೊಳ್ಳುವಂತಹ ಆಟಗಾರ. ಅವರು 50 ರನ್ ಪಡೆದಾಗ 100 ಮತ್ತು ನೂರು ಪಡೆದಾಗ 150 - 200 ರ ಬಗ್ಗೆ ಯೋಜನೆ ಮಾಡುತ್ತಾರೆ. ಅದನ್ನೇ ನಾನೂ ಮಾಡಲು ಭಯಸುತ್ತೇನೆ. ದೊಡ್ಡ ಗುರಿಯ ಬಗ್ಗೆ ಯೋಚಿಸುವ ಮತ್ತು ಅಲ್ಲಿಗೆ ತಲುಪಿದಾಗ ಇನ್ನೂ ದೊಡ್ಡ ಗುರಿಯನ್ನು ಬೆನ್ನಟ್ಟಿ ಆಟ ಮುಗಿಸುವ ಅವರೇ ನಿಜವಾದ ಪಂದ್ಯ ವಿಜೇತ ಎಂದು ರೋಹಿತ್ ಶರ್ಮಾ ಅವರನ್ನು ಹಾಡಿ ಹೊಗಳಿದ್ದಾರೆ.