ETV Bharat / sports

ಜಿಂಬಾಬ್ವೆ ವಿರುದ್ಧ ವಿಶ್ವ ದಾಖಲೆಯ ಜಯದೊಂದಿಗೆ ಟಿ20 ಸರಣಿ ಗೆದ್ದ ಪಾಕಿಸ್ತಾನ

author img

By

Published : Nov 8, 2020, 8:33 PM IST

135 ರನ್​ಗಳ ಗುರಿ ಪಡೆದಿದ್ದ ಪಾಕಿಸ್ತಾನ 15.1 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿದ್ದಲ್ಲದೆ, ಜಿಂಬಾಬ್ವೆ ವಿರುದ್ಧ ಸತತ13 ಪಂದ್ಯ ಗೆಲ್ಲುವ ಮೂಲಕ ಒಂದೇ ತಂಡದ ವಿರುದ್ಧ ಗರಿಷ್ಠ ಪಂದ್ಯ ಗೆದ್ದ ವಿಶ್ವದಾಖಲೆ ಬರೆಯಿತು.

ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದ ಪಾಕಿಸ್ತಾನ
ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದ ಪಾಕಿಸ್ತಾನ

ರಾವಲ್ಪಿಂಡಿ: ಹೈದರ್​ ಅಲಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡ 2ನೇ ಪಂದ್ಯದಲ್ಲಿ 8 ವಿಕೆಟ್​ಗಳ ಜಯ ಸಾಧಿಸುವ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನ ಇನ್ನು ಒಂದು ಪಂದ್ಯ ಬಾಕಿಯುಳಿದಿರುವಂತೆ ವಶಪಡಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ಜಿಂಬಾಬ್ವೆ ತಂಡ 20 ಓವರ್​ಗಳಲ್ಲಿ 134 ರನ್​ಗಳಿಸಿತ್ತು. ರ್ಯಾನ್ ಬರ್ಲ್​ 32 ರನ್​ಗಳಿಸಿದರೆ, ಮಾಧೆವೆರೆ 24 ರನ್​ಗಳಿಸಿದ್ದರು.

135 ರನ್​ಗಳ ಗುರಿ ಪಡೆದಿದ್ದ ಪಾಕಿಸ್ತಾನ 15.1 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿದ್ದಲ್ಲದೆ, ಜಿಂಬಾಬ್ವೆ ವಿರುದ್ಧ ಸತತ13 ಪಂದ್ಯ ಗೆಲ್ಲುವ ಮೂಲಕ ಒಂದೇ ತಂಡದ ವಿರುದ್ಧ ಗರಿಷ್ಠ ಪಂದ್ಯ ಗೆದ್ದ ವಿಶ್ವದಾಖಲೆ ಬರೆಯಿತು.

  • 🇵🇰 Congratulations to Pakistan who have won their T20I series v Zimbabwe 👏

    Fifties for Haider Ali and Babar Azam have secured them a comfortable 8️⃣-wicket win in the 2nd T20I #PAKvZIM pic.twitter.com/sHUwZvQ0wb

    — ICC (@ICC) November 8, 2020 " class="align-text-top noRightClick twitterSection" data=" ">

ಬಾಬರ್ ಅಜಮ್ 28 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 51 ರನ್​ಗಳಿಸಿದರೆ, ಯುವ ಬ್ಯಾಟ್ಸ್​ಮನ್​ ಹೈದರ್ ಅಲಿ 43 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್​ ಸಹಿತ ಔಟಾಗದೆ 66 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದಕ್ಕೂ ಮುನ್ನ ಬೌಲಿಂಗ್​ನಲ್ಲೂ ಮಿಂಚಿದ್ದ ಪಾಕ್​ ವೇಗಿ ಹ್ಯಾರೀಸ್​ ರವೂಫ್ 31ಕ್ಕೆ 3, ಉಸ್ಮಾನ್ ಕಾದಿರ್​ 23ಕ್ಕೆ 3 ವಿಕೆಟ್​ ಪಡೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.