ಅಹಮದಾಬಾದ್: ಶುಕ್ರವಾರ ನಡೆದ ಟಿ20 ಸರಣಿಯಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಲು ನಮಗೆ ಪರಿಸ್ಥಿತಿಗಳು ಅನುಕೂಲಕರವಾಗಿದ್ದವು ಎಂದು ವೇಗಿ ಜೋಫ್ರಾ ಆರ್ಚರ್ ಹೇಳಿದ್ದಾರೆ.
ಮೊಣಕೈ ಗಾಯದಿಂದ ಹಿಂತಿರುಗಿದ ಆರ್ಚರ್ ಇಂಗ್ಲೆಂಡ್ ಪರ 4 ಓವರ್ಗಳಿಗೆ 23 ರನ್ ನೀಡಿ ಮೂರು ವಿಕೆಟ್ ಪಡೆದು ಭಾರತ ತಂಡದ ಸೋಲಿಗೆ ಕಾರಣರಾದರು.
ನಾವು ಮೊದಲು ಬೌಲಿಂಗ್ ಮಾಡಲು ಉತ್ಸುಕರಾಗಿದ್ದೆವು. ಏಕೆಂದರೆ ನಾವು ಕೆಲ ದಿನಗಳಿಂದಲು ರಾತ್ರಿ ಅಭ್ಯಾಸ ನಡೆಸುವಾಗ ಸ್ವಲ್ಪ ಇಬ್ಬನಿ ಇತ್ತು. ಪರಿಸ್ಥಿತಿಗಳನ್ನು ಅರಿತು ಬೌಲಿಂಗ್ ಮಾಡುವುದರಿಂದ ನಮಗೆ ಸ್ವಲ್ಪ ಅನುಕೂಲವಾಯಿತು. ನಿಧಾನವಾಗಿ ವಿಕೆಟ್ ಪಡೆಯುವುದರ ಮೂಲಕ ತಂಡದ ಉತ್ತಮ ಪ್ರದರ್ಶನಕ್ಕೆ ಕಾರಣವಾಯಿತು ಎಂದು ಆರ್ಚರ್ ಪಂದ್ಯದ ನಂತರದ ಸುದ್ದಿಗಾರರಿಗೆ ತಿಳಿಸಿದರು.
ಭಾರತ ತಂಡ ಕೇವಲ 20 ರನ್ಗಳಿಗೆ ತನ್ನ ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ ಸೇರಿದಂತೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ವಿರಾಟ್ ಕೊಹ್ಲಿ ಅಪಾಯಕಾರಿ ಬ್ಯಾಟ್ಸ್ಮನ್. ತಂಡದ ನಾಯಕ ಕೊಹ್ಲಿ ರನ್ ಗಳಿಸುವ ನಿರೀಕ್ಷೆಯಲ್ಲಿದ್ದರು. ಹಿಂದಿನ ಇನಿಂಗ್ಸ್‌ನಲ್ಲಿ ಹಲವು ಬಾರಿ ಕೊಹ್ಲಿಯ ಆಟವನ್ನು ನಾವು ನೋಡಿದ್ದರಿಂದ ನಮಗೆ ಅವರ ವಿಕೆಟ್ ಪಡೆಯಲು ಬೋನಸ್ ಆಯಿತು ಎಂದು ಆರ್ಚರ್ ಹೇಳಿದರು.
ಇದು ಸರಣಿಯ ಮೊದಲ ಪಂದ್ಯವಾಗಿದೆ. ನಮಗೆ ಇನ್ನೂ ನಾಲ್ಕು ಪಂದ್ಯಗಳಿವೆ. ಅದು ಬೇರೆ ಭಾರತ ತಂಡ ವರ್ಲ್ಡ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಆರ್ಚರ್ ಹೇಳಿದರು.
ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 124 ರನ್ ಕಲೆ ಹಾಕಿತ್ತು. ಇದನ್ನು ಬೆನ್ನತ್ತಿದ್ದ ಇಂಗ್ಲೆಂಡ್ ತಂಡ 15.3 ಓವರ್ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 130 ರನ್ ಕಲೆ ಹಾಕಿ ಜಯಗಳಿಸಿತ್ತು. ಭಾನುವಾರ ಎರಡನೇ ಟಿ20 ಪಂದ್ಯ ಮೊಟೇರಾ ಸ್ಟೇಡಿಯಂನಲ್ಲಿ ನಡೆಯಲಿದೆ.