ಡಬ್ಲಿನ್: ಸ್ಕಾಟ್ಲೆಂಡ್ನ ಆರಂಭಿಕ ಬ್ಯಾಟ್ಸ್ಮನ್ ಜಾರ್ಜ್ ಮುನ್ಸೆ ನೆದರ್ಲೆಂಡ್ ವಿರುದ್ಧ 41 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ 2ನೇ ವೇಗದ ಶತಕ ದಾಖಲಿಸಿದ್ರು.
ಸೋಮವಾರ ನಡೆದ ಪಂದ್ಯದಲ್ಲಿ ಮುನ್ಸೆ ನಾಯಕ ಕೊಯಟ್ಜರ್ ಜೊತೆಗೆ ಮೊದಲ ವಿಕೆಟ್ಗೆ 200 ರನ್ಗಳ ಸೇರಿಸುವ ಮೂಲಕ ಟಿ-20ಯಲ್ಲಿ ಮೊದಲ ವಿಕೆಟ್ಗೆ ಮೂರನೇ ಗರಿಷ್ಠ ಜೊತೆಯಾಟದ ದಾಖಲೆ ಬರೆದರು.
ನೆದರ್ಲ್ಯಾಂಡ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಮುನ್ಸೆ, 41 ಎಸೆತಗಳಲ್ಲಿ ಶತಕ ದಾಖಲಿಸಿ 2ನೇ ವೇಗದ ಶತಕ ದಾಖಲಿಸಿದ್ರು. ಪಂದ್ಯದಲ್ಲಿ ಅವರು 56 ಎಸೆತಗಳಲ್ಲಿ 14 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 127 ರನ್ ಪೇರಿಸಿದ್ರು.
ಭಾರತದ ರೋಹಿತ್ ಶರ್ಮಾ ಹಾಗೂ ಡೇವಿಡ್ ಮಿಲ್ಲರ್ ಅಂತಾರಾಷ್ಟ್ರೀಯ ಟಿ-20ಯಲ್ಲಿ ವೇಗದ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಇವರಿಬ್ಬರೂ ತಲಾ 35 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು.
ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ 252 ರನ್ ಗಳಿಸಿದ್ರೆ, ನೆದರ್ಲ್ಯಾಂಡ್ 194 ರನ್ಗಳನ್ನಷ್ಟೇ ಗಳಿಸಲು ಶಕ್ತವಾಗಿ 58 ರನ್ಗಳಿಂದ ಸೋಲೊಪ್ಪಿಕೊಂಡಿತು.