ETV Bharat / sports

’ಗವಾಸ್ಕರ್​ ಈಗಲೂ ನನ್ನ ಹೀರೋ ಆಗಿಯೇ ಉಳಿದಿದ್ದಾರೆ’: ಸಚಿನ್​ ತೆಂಡೂಲ್ಕರ್​

ಲೆಜೆಂಡರಿ ಸುನೀಲ್​ ಗವಾಸ್ಕರ್​ 1971 ಮಾರ್ಚ್​ 6ರಂದು ವೆಸ್ಟ್​ ಇಂಡೀಸ್​ ವಿರುದ್ಧ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಇಂದು ಅವರು ಕ್ರಿಕೆಟ್​ ವೃತ್ತಿ ಜೀವನ ಆರಂಭವಾಗಿ 50 ವರ್ಷ ತುಂಬಿದ ಹಿನ್ನಲೆ ತಮಗೆ ಮಾದರಿಯಾಗಿದ್ದ ಕ್ರಿಕೆಟಿಗನಿಗೆ ಸಚಿನ್​ ಟ್ವೀಟ್​ನಲ್ಲಿ ಹೃದಯಸ್ಪರ್ಶಿ ಸಂದೇಶವನ್ನು ಅರ್ಪಣೆ ಮಾಡಿದ್ದಾರೆ.

ಸಚಿನ್​ ತೆಂಡೂಲ್ಕರ್​ - ಸುನೀಲ್ ಗವಾಸ್ಕರ್​
ಸಚಿನ್​ ತೆಂಡೂಲ್ಕರ್​ - ಸುನೀಲ್ ಗವಾಸ್ಕರ್​
author img

By

Published : Mar 6, 2021, 3:56 PM IST

ಮುಂಬೈ: ಇಂದು ಕ್ರಿಕೆಟರ್​ ಆಗಬಯಸುವ ಕೋಟ್ಯಂತರ ಯುವ ಪೀಳಿಗೆಗೆ ಸಚಿನ್ ತೆಂಡೂಲ್ಕರ್​ ಸ್ಪೂರ್ತಿಯಾಗಿದ್ದಾರೆ. ಆದರೆ, ಕ್ರಿಕೆಟ್​ ದೇವರಿಗೆ ಅವರು ಕ್ರಿಕೆಟ್​ ಆರಂಭಿಸಿದ ದಿನಗಳಲ್ಲಿ ಸುನೀಲ್ ಗವಾಸ್ಕರ್​ ಪ್ರೇರಣೆಯಾಗಿದ್ದರು. ಇಂದು ಲಿಟ್ಲ್​ ಮಾಸ್ಟರ್​ ಗವಾಸ್ಕರ್​ ಕ್ರಿಕೆಟ್​ ಜಗತ್ತಿಗೆ ಕಾಲಿಟ್ಟು 50 ವರ್ಷ ತುಂಬಿದ್ದು, ಸಚಿನ್​ ವಿಶೇಷ ಸಂದೇಶದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಲೆಜೆಂಡರಿ ಸುನೀಲ್​ ಗವಾಸ್ಕರ್​ 1971 ಮಾರ್ಚ್​ 6ರಂದು ವೆಸ್ಟ್​ ಇಂಡೀಸ್​ ವಿರುದ್ಧ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಇಂದು ಅವರು ಕ್ರಿಕೆಟ್​ ವೃತ್ತಿ ಜೀವನ ಆರಂಭವಾಗಿ 50 ವರ್ಷ ತುಂಬಿದ ಹಿನ್ನಲೆ ತಮಗೆ ಮಾದರಿಯಾಗಿದ್ದ ಕ್ರಿಕೆಟಿಗನಿಗೆ ಸಚಿನ್​ ಟ್ವೀಟ್​ನಲ್ಲಿ ಹೃದಯಸ್ಪರ್ಶಿ ಸಂದೇಶವನ್ನು ಅರ್ಪಣೆ ಮಾಡಿದ್ದಾರೆ.

" 50 ವರ್ಷಗಳ ಹಿಂದೆ ಈ ದಿನ ಅವರು ಕ್ರಿಕೆಟ್​ ಜಗತ್ತಿಗೆ ಬಿರುಗಾಳಿಯಂತೆ ಪ್ರವೇಶಿಸಿದ್ದರು. ಅವರು ತಮ್ಮ ಚೊಚ್ಚಲ ಸರಣಿಯಲ್ಲಿ ಬರೋಬ್ಬರಿ 774 ರನ್ ಗಳಿಸಿದ್ದರು. ಅವರು ಅಂದು ಬೆಳೆಯುತ್ತಿದ್ದ ನನ್ನಂತಹ ಪ್ರತಿಯೊಬ್ಬರಿಗೂ ನಾಯಕನಾಗಿದ್ದರು' ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

ಭಾರತ ನಂತರ ವೆಸ್ಟ್​ ಇಂಡೀಸ್ ವಿರುದ್ಧ ಸರಣಿ ಗೆದ್ದಿತು. ನಂತರ ಇಂಗ್ಲೆಂಡ್​ನಲ್ಲಿ ಕೂಡ. ನಂತರ ಭಾರತದಲ್ಲಿ ಕ್ರೀಡೆ ಹೊಸ ಅರ್ಥ ಪಡೆದುಕೊಂಡಿತು. ನಾನೊಬ್ಬ ಯುವಕನಾಗಿ ಅಂದು ಅವರಂತೆ ಆಗಬೇಕೆಂದು ಪ್ರಯತ್ನಿಸಿದ್ದೆ. ಆ ಭಾವೆನ ಎಂದಿಗೂ ಬದಲಾಗುವುದಿಲ್ಲ. ಅವರು ಇಂದಿಗೂ ನನ್ನ ಹೀರೋ ಆಗಿದ್ದಾರೆ. ನಿಮಗೆ 50ನೇ ಅಂತಾರಾಷ್ಟ್ರೀಯ ಕ್ರಿಕೆಟ್​ ವರ್ಷದ ಶುಭಾಶಯಗಳು ಗವಾಸ್ಕರ್​" ಎಂದು ಟ್ವೀಟ್​ ಬರೆದುಕೊಂಡಿದ್ದಾರೆ.

ಜೊತೆಗೆ 1971ರ ಆ ತಂಡ ದೇಶಕ್ಕೆ ಅಪಾರ ಗೌರವವನ್ನು ತಂದುಕೊಟ್ಟಿದೆ. ಎಲ್ಲಾ 1971ರ ಬಳಗಕ್ಕೆ 50ಬೇ ವಾರ್ಷಿಕೋತ್ಸವದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಸಚಿನ್​ ಅಲ್ಲದೇ, ಹರ್ಭಜನ್​ ಸಿಂಗ್, ಬಿಸಿಸಿಐ ಅಧ್ಯಕ್ಷ ಗಂಗೂಲಿ, ಕಾರ್ಯದರ್ಶಿ ಜಯ್​ ಶಾ, ಮಾಜಿ ವೇಗಿ ಆರ್​ಪಿ ಸಿಂಗ್ ಸೇರಿದಂತೆ ಹಲವಾರು ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಕ್ರಿಕೆಟ್​ ದಂತಕತೆಗೆ ಶುಭಕೋರಿದ್ದಾರೆ.

ಇದನ್ನು ಓದಿ:ಟೆಸ್ಟ್​ ಕ್ರಿಕೆಟ್​​ ಪಾದಾರ್ಪಣೆಗೆ 50 ವರ್ಷದ ಸಂಭ್ರಮ.. ಗವಾಸ್ಕರ್​ಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದ ಬಿಸಿಸಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.