ಮುಂಬೈ: "ಶ್ರೇಷ್ಠ ಕ್ರಿಕೆಟಿಗರಾದ ಸುನೀಲ್ ಗವಾಸ್ಕರ್ ಮತ್ತು ವೆಸ್ಟ್ ಇಂಡೀಸ್ನ ವಿವಿಯನ್ ರಿಚರ್ಡ್ಸ್ ನನ್ನ ಬ್ಯಾಟಿಂಗ್ ಹೀರೋಗಳಾಗಿದ್ದರು. ಆದರೆ ನನ್ನ ತಂದೆ ರಮೇಶ್ ತೆಂಡೂಲ್ಕರ್ ಅವರೇ ನಿಜ ಜೀವನದ ಹೀರೋ" ಎಂದು ವಿಶ್ವ ಕ್ರಿಕೆಟ್‌ಗ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಬಣ್ಣಿಸಿದ್ದಾರೆ.
"ನಾನು ಯುವಕನಾಗಿದ್ದಾಗ ಕ್ರಿಕೆಟಿಗನಾಗಲು ಬಯಸುತ್ತಿದ್ದೆ. ಮುಂದೆ ನನ್ನ ದೇಶಕ್ಕಾಗಿ ಆಡುವ ಬಯಕೆ ಹೊಂದಿದ್ದೆ. ನನಗೆ ಇಬ್ಬರು ಹೀರೋಗಳಿದ್ದರು. ಒಬ್ಬರು ನಮ್ಮದೇ ದೇಶದ ಕ್ರಿಕೆಟಿಗ ಸುನೀಲ್ ಗವಾಸ್ಕರ್. ಇವರು ಹಲವಾರು ವರ್ಷಗಳಿಂದ ಭಾರತದ ಪರ ಆಡಿದ್ದರು ಮತ್ತು ಉತ್ತಮ ಪ್ರದರ್ಶನ ನೀಡಿದರು. ಅವರು ನನ್ನ ಬ್ಯಾಟಿಂಗ್ ಹೀರೋ" ಎಂದು ಸಚಿನ್ ಹೇಳಿದ್ದಾರೆ.
"ಗವಾಸ್ಕರ್ ಜೊತೆ ವೆಸ್ಟ್ ಇಂಡೀಸ್ ತಂಡದ ದಂತಕತೆ ವಿವಿಯನ್ ರಿಚರ್ಡ್ಸ್ ಅವರು ಕೂಡಾ ನನ್ನ ಬ್ಯಾಟಿಂಗ್ ಹೀರೋ. ಆದರೆ ಸಾಮಾನ್ಯವಾಗಿ ಜೀವನದಲ್ಲಿ ನನ್ನ ಹೀರೋ ನನ್ನ ತಂದೆ ರಮೇಶ್ ತೆಂಡೂಲ್ಕರ್ ಎಂದು ಹೇಳುತ್ತೇನೆ. ತಂದೆಯೊಂದಿಗೆ ತುಂಬಾ ಸಮಯ ಕಳೆದಿದ್ದೇನೆ ಅವರು ಸೌಮ್ಯ, ಶಾಂತ, ಒಳ್ಳೆಯ ಸ್ವಭಾವದ ವ್ಯಕ್ತಿ. ಆದ್ದರಿಂದ, ನಾನು ಕೂಡ ಅವರಂತೆ ಆಗಬೇಕೆಂಬುದು ನನ್ನ ಕನಸು" ಎಂದಿದ್ದಾರೆ.