ETV Bharat / sports

ಗೌತಮ್​​ ಗಂಭೀರ್​​​​​ ಡಿಡಿಸಿಎ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಅವಕಾಶವಿಲ್ಲವಂತೆ... ಕಾರಣ? - ವಿನೋದ್​ ತಿಹರ

ಡಿಡಿಸಿಎ ಅಧ್ಯಕ್ಷ  ಚುನಾವಣೆಗೆ ಸ್ಪರ್ಧಿಸಲು ಗೌತಮ್​ ಗಂಭೀರ್​ ಅರ್ಹತೆ ಹೊಂದಿಲ್ಲ ಎಂದು ಎಂದು ಡಿಡಿಸಿಎ ಪ್ರಧಾನ ಕಾರ್ಯದರ್ಶಿ ವಿನೋದ್​ ತಿಹರ ತಿಳಿಸಿದ್ದಾರೆ.

DDCA President Post
DDCA President Post
author img

By

Published : Dec 30, 2019, 7:53 PM IST

ನವದೆಹಲಿ: ಭಾರತದ ಮಾಜಿ ಆರಂಭಿಕ ಬ್ಯಾಟ್ಸ್​ಮನ್​ ಗೌತಮ್​ ಗಂಭೀರ್​ ಡಿಡಿಸಿಎ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಲೋಧ ಸಮಿತಿಯ ನಿಯಮಗಳ ಪ್ರಕಾರ ಅರ್ಹತೆ ಹೊಂದಿಲ್ಲ ಎಂದು ಡಿಡಿಸಿಎ ಪ್ರಧಾನ ಕಾರ್ಯದರ್ಶಿ ವಿನೋದ್​ ತಿಹರ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಡಿಡಿಸಿಎ ಅಧ್ಯಕ್ಷ ಹುದ್ದೆಗೆ ಹಿರಿಯ ಪತ್ರಕರ್ತ ರಜತ್​ ಶರ್ಮಾ ರಾಜೀನಾಮೆ ನೀಡಿದ್ದರು. ಇದಾದ ನಂತರ ಭಾನುವಾರ ಡಿಡಿಸಿಎ ವಾರ್ಷಿಕ ಸಭೆಯಲ್ಲಿ ಗಲಾಟೆ ನಡೆದ ಬೆನ್ನಲ್ಲೇ ಗೌತಮ್​ ಗಂಭೀರ್​ರನ್ನು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಕೆಲವು ಡಿಡಿಸಿಎ ಅಧಿಕಾರಿಗಳು ಕೇಳಿಕೊಂಡಿದ್ದರು.

ಆದರೆ​ ಡಿಡಿಸಿಎ ಅಧ್ಯಕ್ಷ ಚುನಾವಣೆಗೆ ಗಂಭೀರ್ ಹೆಸರು ಕೇಳಿಬಂದಿರುವುದಕ್ಕೆ ಪ್ರತಿಕ್ರಿಯಿಸಿರುವ ವಿನೋದ್​ ತಿಹರ, "ಡೆಲ್ಲಿ ಕ್ರಿಕೆಟ್​ ಸಂಸ್ಥೆಗೆ ಗಂಭೀರ್​ ಸೇವೆ ಸಲ್ಲಿಸಲು ಬಯಸುವುದಾದರೆ ಅವರು ತಮ್ಮ ಸಂಸದ ಪದವಿಯನ್ನು ತ್ಯಜಿಸಿದರೆ ಮಾತ್ರ ಸಾಧ್ಯ" ಎಂದು ಸ್ಪಷ್ಟಪಡಿಸಿದ್ದಾರೆ.

ಭಾನುವಾರ ನಡೆದ ಡಿಡಿಸಿಎ ವಾರ್ಷಿಕ ಸಭೆಯಲ್ಲಿ ಅಧಿಕಾರಿಗಳು ಪರಸ್ಪರ ಕೈ ಕೈ ಕೈಮಿಲಾಯಿಸಿಕೊಂಡಿದ್ದರು. ಈ ವರ್ತನೆಯನ್ನು ಗಂಭೀರ್​ ಟ್ವೀಟ್​ ಮೂಲಕ ಖಂಡಿಸಿದ್ದರು. ಡಿಡಿಸಿಎಯನ್ನು ರದ್ದು ಮಾಡಿ, ಗಲಾಟೆ ಮಾಡಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ಬಳಿಕ ಡೆಲ್ಲಿ ಕ್ರಿಕೆಟ್​ ಸಂಸ್ಥೆಯ ಜವಾಬ್ದಾರಿಯನ್ನು ಗಂಭೀರ್​ಗೆ ನೀಡುವಂತೆ ಕೆಲವು ಡಿಡಿಸಿಎ ಅಧಿಕಾರಿಗಳು ಒತ್ತಾಯಿಸಿದ್ದರು.

ಆದರೆ ವಿನೋದ್​ ಶರ್ಮಾ ಹೇಳಿಕೆ ಗೌತಮ್​ ಗಂಭೀರ್​ ಸೇರಿದಂತೆ ಅವರ ಬೆಂಬಲಿಗರಿಗೆ ನಿರಾಶೆ ತರಿಸಿದೆ. ದೆಹಲಿ ವಿಧಾನಸಭೆ ಚುನಾವಣೆ ಬಳಿಕ ಡಿಡಿಸಿಎ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಡಿಡಿಸಿಎ ಅಧಿಕಾರಿಗಳು ಮನವಿ ಮಾಡಿದ್ದಾರೆಂದು ತಿಳಿದುಬಂದಿದ್ದು, ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ ಎಂದು ಕಾದು ನೋಡಬೇಕಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.