ETV Bharat / sports

ನಿಮ್ಮ ಕ್ರಿಕೆಟ್ ಬದುಕೇನು ಕೊನೆಯಾಗಿಲ್ಲ... ಧವನ್​ಗೆ  ಧೈರ್ಯ ತುಂಬಿ, ಪಂತ್​ಗೆ ಶುಭಕೋರಿದ ಗಂಭೀರ್​

ಹೆಬ್ಬೆರಳು ಗಾಯಕ್ಕೊಳಗಾಗಿ ಚೇತರಿಕೆ ಕಾಣದ ಹಿನ್ನಲೆ ವಿಶ್ವಕಪ್​ನಿಂದ ಹೊರಬಿದ್ದ ಧವನ್​ರನ್ನು ಸಂತೈಸಿರುವ ಗಂಭೀರ್​​​ ಮತ್ತೊಬ್ಬ ದೆಹಲಿ ಯುವ ಪ್ರತಿಭೆ ರಿಷಭ್​ ಪಂತ್​ರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಗಂಭೀರ್​
author img

By

Published : Jun 20, 2019, 11:31 AM IST

Updated : Jun 20, 2019, 4:06 PM IST

ಲಂಡನ್​: ಕಳೆದ ಕೆಲವು ವರ್ಷಗಳಿಂದ ಐಸಿಸಿ ಟೂರ್ನಮೆಂಟ್​ನಲ್ಲಿ ಭಾರತ ಆಧಾರ ಸ್ಥಂಭವಾಗಿದ್ದ ಎಡಗೈ ಬ್ಯಾಟ್ಸ್​ಮನ್​ ಶಿಖರ್​ ಧವನ್​ 2019ರ ವಿಶ್ವಕಪ್​ನಿಂದ ಗಾಯದಿಂದ ಹೊರಬಿದ್ದ ಹಿನ್ನೆಲೆ ಮಾಜಿ ಆಟಗಾರ ಗೌತಮ್​ ಗಂಭಿರ್​ ಗೆಳೆಯನಿಗೆ ಹೃದಯ ಸ್ಪರ್ಶಿ ಸಂದೇಶ ರವಾನಿಸಿದ್ದಾರೆ.

ಜೂನ್​ 9 ರಂದು ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಎಡಗೈ ಹೆಬ್ಬೆರಳಿಗೆ ಗಾಯಕ್ಕೊಳಗಾಗಿದ್ದ ಶಿಖರ್ ಧವನ್​ಗೆ ಚೇತರಿಕೆಗಾಗಿ 3 ವಾರಗಳ ವಿಶ್ರಾಂತಿ ನೀಡಲಾಗಿತ್ತು. ಆದರೆ, ವೈದ್ಯರ ಗಮನದಲ್ಲಿದ್ದ ಧವನ್ ಕಳೆದ 10 ದಿನಗಳಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ವಿಶ್ವಕಪ್​ನಿಂದಲೇ ಹೊರಬಿದ್ದಿದ್ದರು. ಇವರ ಜಾಗಕ್ಕೆ ಸ್ಟ್ಯಾಂಡ್​ ಬೈ ಆಟಗಾರನಾಗಿದ್ದ ರಿಷಭ್​​ ಪಂತ್​ ಇದೀಗ ತಂಡ ಸೇರಿಕೊಂಡಿದ್ದಾರೆ.

  • Disappointed to know that @SDhawan25 will no longer take part in @cricketworldcup, he looked so much a part. My thoughts are with u brotherman but don’t worry not the end of the world. And best wishes to @RishabPant777. I’d urge that we don’t put any undue pressure on Rishabh.

    — Gautam Gambhir (@GautamGambhir) June 19, 2019 " class="align-text-top noRightClick twitterSection" data=" ">

ಧವನ್​ ಕುರಿತು ಟ್ವೀಟ್​ ಮಾಡಿರುವ ಗಂಭಿರ್​ " ಶಿಖರ್​ ಧವನ್​ ಸಂಪೂರ್ಣ ವಿಶ್ವಕಪ್​ನ ಭಾಗವಾಗಿಲ್ಲದಿರುವುದು ನಿಜಕ್ಕೂ ನಿರಾಶಾದಾಯಕ ವಿಚಾರವಾಗಿದೆ. ಆತ ತಂಡಕ್ಕೆ ತುಂಬಾ ಅಗತ್ಯವುಳ್ಳನಾಗಿದ್ದ. ನನ್ನ ಆಲೋಚನೆಯ ಪ್ರಕಾರ ನೀನು ಚಿಂತಿಸಬೇಡ, ನನಗನ್ನಿಸಿದ ಹಾಗೆ ಇದು ಕ್ರಿಕೆಟ್​​ನ​​​ ಕೊನೆಯ ದಿನಗಳಲ್ಲ' ಎಂದು ಧವನ್​ರ ಕ್ರಿಕೆಟ್​ ಜೀವನ ಇಷ್ಟಕ್ಕೆ ಮುಗಿದಿಲ್ಲ ಎಂಬರ್ಥದಲ್ಲಿ ಟ್ವೀಟ್​ ಮಾಡಿದ್ದಾರೆ.

ಜೊತೆಗೆ ಅದೇ ಟ್ವೀಟ್​ನಲ್ಲಿ ಧವನ್​ ಬದಲಿಗೆ ಅವಕಾಶ ಪಡೆದಿರುವ ರಿಷಭ್​ ಪಂತ್​ಗೆ ಶುಭ ಕೋರಿದ್ದು, ನಾವು ರಿಷಭ್​ ಪಂತ್​ಗೆ ಒತ್ತಡ ಹೇರುವುದು ಬೇಡ ಎಂದು ತಿಳಿಸಿದ್ದಾರೆ.

ಧವನ್​ 2013ರ ಚಾಂಪಿಯನ್​ ಟ್ರೋಫಿ, 2014ರ ಏಷ್ಯಾಕಪ್​, 2015 ರ ವಿಶ್ವಕಪ್​,2017ರ ಚಾಂಪಿಯನ್​ ಟ್ರೋಫಿ, 2018 ರ ವಿಶ್ವಕಪ್​ನಲ್ಲಿ ಭಾರತ ತಂಡ ಗರಿಷ್ಠ ಸ್ಕೋರರ್​ ಆಗಿದ್ದರು. ಇವರ ಅನುಪಸ್ಥಿತಿ ನಿಜಕ್ಕೂ ತಂಡಕ್ಕೆ ಆಘಾತ ತಂದಿದೆ.

Intro:Body:Conclusion:
Last Updated : Jun 20, 2019, 4:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.