ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ದೆಹಲಿಯಲ್ಲಿರುವ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ಗೆ ಅರುಣ್ ಜೇಟ್ಲಿ ಹೆಸರಿಡುವಂತೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.
ಆಗಸ್ಟ್ 24 ರಂದು ಅನಾರೋಗ್ಯದಿಂದ ಏಮ್ಸ್ನಲ್ಲಿ ನಿಧನರಾದ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಹೆಸರನ್ನು ನವದೆಹಲಿಯ ವಿಶ್ವದರ್ಜೆಯ ಕ್ರೀಡಾಂಗಣವಾದ ಫಿರೋಜ್ ಶಾ ಕೊಟ್ಲಾ ಸ್ಟೇಡಿಯಂಗೆ ಮರು ನಾಮಕರಣ ಮಾಡಲಾಗಿತ್ತು.
ಈ ನಿರ್ಧಾರಕ್ಕೆ ಸಂತೋಷ ವ್ಯಕ್ತಪಡಿಸಿರುವ ಗಂಭೀರ್, ಅರುಣ್ ಜೇಟ್ಲಿ ಡೆಲ್ಲಿ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ 13ಕ್ಕೂ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು, ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂ ಅನ್ನು ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರು. ಅವರ ಹೆಸರನ್ನು ಸ್ಟೇಡಿಯಂಗಿಡಲು ಅವರು ಅರ್ಹರಾಗಿದ್ದರು. ಆದರೆ, ಇದು ಅವರು ಬದುಕಿದ್ದಾಗ ಆಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಇದು ಜೇಟ್ಲಿಯವರಿಗೆ ನೀಡಿರುವ ಸರಿಯಾದ ಉಡುಗೊರೆ ಎಂದಿದ್ದಾರೆ.
ಇನ್ನು ತಮ್ಮ ಕ್ಷೇತ್ರದಲ್ಲಿರುವ 2010 ರ ಕಾಮನ್ವೆಲ್ತ್ ಆತಿಥ್ಯವಹಿಸಿದ್ದ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನ್ನು ಕೂಡ ಅರುಣ್ ಜೇಟ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಎಂದು ಮರುನಾಮಕರಣ ಮಾಡವಂತೆ ಅದರ ಒಡೆತನವಿರುವ DDA (ಡೆಲ್ಲಿ ಡೆವೆಲಪ್ಮೆಂಟ್ ಅಥಾರಿಟಿಗೆ ಮನವಿ ಸಲ್ಲಿಸುತ್ತೇನೆ. ಇದರಿಂದ ಎಲ್ಲರೂ ಸಂತೋಷವಾಗಲಿದೆ. ಅದರಲ್ಲೂ ಈಸ್ಟ್ ಡೆಲ್ಲಿಯ ಜನತೆ ಖುಷಿಯಾಗಲಿದ್ದಾರೆ ಎಂದಿದ್ದಾರೆ ಗಂಭೀರ್.