ETV Bharat / sports

ಗಂಗೂಲಿ ಭಾರತದ ಶ್ರೇಷ್ಠ ನಾಯಕ, ಧೈರ್ಯವಂತ ಬ್ಯಾಟ್ಸ್​ಮನ್​: ಶೋಯಬ್ ಅಖ್ತರ್​ ಗುಣಗಾನ - Gangulywas bravest batsman

ಭಾರತ ತಂಡ 90ರ ದಶಕದಲ್ಲಿ ಅಷ್ಟೇನೂ ಬಲಿಷ್ಠವಾಗಿರಲಿಲ್ಲ. ಆದರೆ ಗಂಗೂಲಿ ನಾಯಕತ್ವವಹಿಸಿಕೊಂಡ ಮೇಲೆ ಯಶಸ್ಸಿನ ಉತ್ತುಂಗಕ್ಕೇರಿತ್ತು. 2002ರಲ್ಲಿ ಚಾಂಪಿಯನ್​ ಟ್ರೋಫಿ ಗೆದ್ದು ಕೊಟ್ಡರೆ, 2003ರ ವಿಶ್ವಕಪ್​ನಲ್ಲಿ ಫೈನಲ್​ ಪ್ರವೇಶಿಸುವಂತೆ ಮಾಡಿದ್ದರು ಎಂದು ಅಖ್ತರ್​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗಂಗೂಲಿ-ಅಖ್ತರ್
ಗಂಗೂಲಿ-ಅಖ್ತರ್
author img

By

Published : Jun 9, 2020, 4:10 PM IST

Updated : Jun 9, 2020, 4:16 PM IST

ನವದೆಹಲಿ: ಭಾರತ ಕಂಡ ನಾಯಕರಲ್ಲಿ ಸೌರವ್​ ಗಂಗೂಲಿ ಶ್ರೇಷ್ಠ ನಾಯಕ ಎಂದು ಪಾಕಿಸ್ತಾನದ ಶೋಯಬ್​ ಅಖ್ತರ್​ ಅಭಿಪ್ರಾಯಪಟ್ಟಿದ್ದಾರೆ.

ಮ್ಯಾಚ್​ ಫಿಕ್ಸಿಂಗ್ ಭೂತದಿಂದ ನರಳುತ್ತಿದ್ದ ಭಾರತ ತಂಡವನ್ನು ಬಲಶಾಲಿಯಾಗಿ ಕಟ್ಟಿದ್ದಲ್ಲದೆ, ವಿದೇಶಗಳಲ್ಲಿ ಟೆಸ್ಟ್​ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಅದರಲ್ಲೂ ಗಂಗೂಲಿ ನೇತೃತ್ವದಲ್ಲಿ ಪಾಕ್ ನೆಲದಲ್ಲಿ ಟೆಸ್ಟ್​ ಸರಣಿಯನ್ನು ಗೆದ್ದಿರುವ ವಿಚಾರವನ್ನು ಅವರು ಹೆಲೊ ಆ್ಯಪ್​ ಸಂದರ್ಶನದಲ್ಲಿ ಗುಣಗಾನ ಮಾಡಿದ್ದಾರೆ.

ಭಾರತ ತಂಡ 90ರ ದಶಕದಲ್ಲಿ ಅಷ್ಟೇನೂ ಬಲಿಷ್ಠವಾಗಿರಲಿಲ್ಲ. ಆದರೆ ಗಂಗೂಲಿ ನಾಯಕತ್ವವಹಿಸಿಕೊಂಡ ಮೇಲೆ ಯಶಸ್ಸಿನ ಉತ್ತುಂಗಕ್ಕೇರಿತ್ತು. ಅವರು 2002ರಲ್ಲಿ ಚಾಂಪಿಯನ್​ ಟ್ರೋಫಿ ಗೆದ್ದು ಕೊಟ್ಟರೆ, 2003ರ ವಿಶ್ವಕಪ್​ನಲ್ಲಿ ಫೈನಲ್​ ಪ್ರವೇಶಿಸುವಂತೆ ಮಾಡಿದ್ದರು ಎಂದು ಅಖ್ತರ್​ ಹೇಳಿದ್ದಾರೆ.

ನನ್ನ ಪ್ರಕಾರ, ಭಾರತ ತಂಡದ ಶ್ರೇಷ್ಠ ನಾಯಕರಲ್ಲಿ ಸೌರವ್​ ಗಂಗೂಲಿ ಕೂಡಾ ಒಬ್ಬರು. ಧೋನಿ ಕೂಡ ಉತ್ತಮ ನಾಯಕ. ಆದರೆ 90ರ ದಶಕದಲ್ಲಿ ಭಾರತ ತಂಡ ನಮ್ಮೆದುರು ಆಡಿದಾಗ ಅದು ಗೆಲ್ಲುವ ತಂಡವೆಂದು ನನಗೆಂದೂ ಅನ್ನಿಸಿರಲಿಲ್ಲ. ಆದರೆ ಗಂಗೂಲಿ ನಾಯಕರಾದ ಮೇಲೆ ಭಾರತ ಪಾಕಿಸ್ತಾನವನ್ನು ಮಣಿಸುವಷ್ಟು ಸಾಮರ್ಥ್ಯ ಪಡೆದಿತ್ತು. ಗಂಗೂಲಿ ಭಾರತ ತಂಡದಲ್ಲಿ ಅನೇಕ ಬದಲಾವಣೆ ತಂದರು. ಯುವ ಆಟಗಾರರಿಗೆ ಆದ್ಯತೆ ನೀಡಿ ಬಲಿಷ್ಠ ತಂಡವನ್ನು ಕಟ್ಟಿದರು ಎಂದು ಅಖ್ತರ್​ ಹೇಳಿದ್ದಾರೆ.

ಗಂಗೂಲಿ ನಾಯಕತ್ವ ವಹಿಸಿಕೊಂಡ ನಂತರ ಹರ್ಭಜನ್​ ಸಿಂಗ್, ಜಹೀರ್ ಖಾನ್​, ಎಂ.ಎಸ್. ಧೋನಿ, ಯುವರಾಜ್ ಸಿಂಗ್​ ರಂತಹ ಯುವ ಆಟಗಾರರಿಗೆ ಅವಕಾಶ ಸಿಕ್ಕಿತು. ಗಂಗೂಲಿ ಬೆಂಬಲಿಸಿದ ಅಷ್ಟೂ ಆಟಗಾರರು ವಿಶ್ವಶ್ರೇಷ್ಠ ಕ್ರಿಕೆಟಿಗರು ಎನ್ನುವುದರಲ್ಲಿ ಎರಡು ಮಾತಿಲ್ಲ. ಧೋನಿ ಎರಡು ವಿಶ್ವಕಪ್​ ಗೆದ್ದುಕೊಟ್ಟಿದ್ದರೂ ಭಾರತ ತಂಡಕ್ಕೆ ಅಡಿಪಾಯ ಹಾಕಿದವರು ಗಂಗೂಲಿ ಎಂದು ಅಖ್ತರ್​ ಅಭಿಪ್ರಾಯಪಟ್ಟಿದ್ದಾರೆ.

ಗಂಗೂಲಿ ಬ್ಯಾಟಿಂಗ್​ ಕೌಶಲ್ಯದ ಬಗ್ಗೆ ಮಾತನಾಡಿರುವ ಅಖ್ತರ್​, ಗಂಗೂಲಿ ಹೆದರಿಕೆಯುಳ್ಳ ಬ್ಯಾಟ್ಸ್​ಮನ್ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ನಾನು ನೋಡಿರುವ ಹಾಗೆ ಅವರಷ್ಟು ಧೈರ್ಯವಂತ ಬ್ಯಾಟ್ಸ್​ಮನ್ ಮತ್ತೊಬ್ಬರಿರಲಿಲ್ಲ. ಅವರಿಗೆ ಬೌನ್ಸರ್​ ಪ್ರಯೋಗ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ, ಆದರೂ ಅವರು ಎದೆಗುಂದದೆ ಬ್ಯಾಟಿಂಗ್ ನಡೆಸುತ್ತಿದ್ದರು. ಆರಂಭಿಕನಾಗಿಯೇ ಕಣಕ್ಕಿಳಿದು ಸಾಕಷ್ಟು ರನ್​ಗಳಿಸಿದ್ದಾರೆ ಎಂದು ಅಖ್ತರ್​ ವಿವರಿಸುತ್ತಾ ಹೋದರು.

Last Updated : Jun 9, 2020, 4:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.