ನವದೆಹಲಿ: ಕಳೆದೆರಡು ಪಂದ್ಯಗಳಿಂದ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸಂಜು ಸಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಇವರ ಆಟಕ್ಕೆ ಮನಸೋತಿರುವ ಸಂಸದ ಹಾಗೂ ಕಾಂಗ್ರೆಸ್ ನಾಯಕ ಶಿಶಿ ತರೂರ್ ಸಾಮ್ಸನ್ ಮುಂದಿನ ಧೋನಿ ಎಂದು ಟ್ವೀಟ್ ಮಾಡಿದ್ದಾರೆ.
ಭಾನುವಾರದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದ್ದ ಸಾಮ್ಸನ್ ಕೇವಲ 42 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್ಗಳ ಸಹಿತ 85 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ಕೇವಲ 32 ಎಸೆತಗಳಲ್ಲಿ 74 ರನ್ ಸಿಡಿಸಿದ್ದರು.
ಪಂಜಾಬ್ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಶಶಿ ತರೂರ್ ಸಾಮ್ಸನ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇವರು ಮುಂದಿನ ಧೋನಿ ಎಂದು ಹೇಳಿದ್ದಾರೆ. ಆದರೆ, ಇದಕ್ಕೇ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ಗಂಭೀರ್ ಸಾಮ್ಸನ್ ಮುಂದಿನ ಯಾರೋ ಆಗುವುದು ಬೇಡ, ಅವರು ಭಾರತೀಯ ಕ್ರಿಕೆಟ್ನಲ್ಲಿ ಸಂಜು ಸಾಮ್ಸನ್ ಆಗಿರಲಿ ಎಂದು ಅವರು ತಿಳಿಸಿದ್ದಾರೆ.
-
Sanju Samson doesn’t need to be next anyone. He will be ‘the’ Sanju Samson of Indian Cricket. https://t.co/xUBmQILBXv
— Gautam Gambhir (@GautamGambhir) September 27, 2020 " class="align-text-top noRightClick twitterSection" data="
">Sanju Samson doesn’t need to be next anyone. He will be ‘the’ Sanju Samson of Indian Cricket. https://t.co/xUBmQILBXv
— Gautam Gambhir (@GautamGambhir) September 27, 2020Sanju Samson doesn’t need to be next anyone. He will be ‘the’ Sanju Samson of Indian Cricket. https://t.co/xUBmQILBXv
— Gautam Gambhir (@GautamGambhir) September 27, 2020
" ಇದೊಂದು ರಾಜಸ್ಥಾನ್ ರಾಯಲ್ಸ್‌ಗೆ ನಂಬಲಾಗದ ಗೆಲುವು! ಸಂಜು ಸ್ಯಾಮ್ಸನ್ ಕಳೆದ ಒಂದು ದಶಕದಿಂದ ಗೊತ್ತಿದೆ. ಆತ 14ರ ವಯಸ್ಸಿನಲ್ಲಿದ್ದಾಗ ನೀನು ಭವಿಷ್ಯದ ಎಂಎಸ್ ಧೋನಿ ಆಗುವೆ ಎಂದು ಹೇಳಿದ್ದೆ. ಈಗ ಆ ದಿನ ಬಂದಿದೆ. ಇವರ ಐಪಿಎಲ್ನ ಎರಡು ಅದ್ಭುತ ಇನಿಂಗ್ಸ್‌ಗಳಿಂದ ವಿಶ್ವ ದರ್ಜೆಯ ಬ್ಯಾಟ್ಸ್‌ಮನ್ ಆಗಮಿಸಿರುವುದು ತಿಳಿಯುತ್ತಿದೆ"ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್," ಸಂಜು ಸಾಮ್ಸನ್ಗೆ ಮುಂದಿನ ಬೇರೆ ಯಾರೋ ಆಗುವ ಅಗತ್ಯವಿಲ್ಲ. ಅವರು ಭಾರತ ಕ್ರಿಕೆಟ್ನ ಸಂಜು ಸಾಮ್ಸನ್ ಆಗಿರಲಿ" ಎಂದು ಟ್ವೀಟ್ ಮಾಡಿದ್ದಾರೆ.
ಕಳೆದೆರಡು ವರ್ಷಗಳಿಂದ ಗಂಭೀರ್ ಸಂಜು ಸಾಮ್ಸನ್ ಅವರು ಭಾರತ ತಂಡಕ್ಕೆ ಆಯ್ಕೆಯಾಗಬೇಕೆಂದು ಬಿಸಿಸಿಐ ಗೆ ಒತ್ತಡ ಹೇರುತ್ತಾ ಬಂದಿದ್ದಾರೆ. ಕಳೆದ ಬಂದ್ಯದ ನಂತರವೂ ಸಾಮ್ಸನ್ ಪ್ರಸ್ತುತ ಭಾರತದ ಶ್ರೇಷ್ಠ ಯುವ ಆಟಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.