ETV Bharat / sports

'ಗಾಡ್​ ಈಸ್​ ಗ್ರೇಟ್​' ಎಂದ ಗಂಭೀರ್​... ಕೊಹ್ಲಿಗಿಂತ ಸಚಿನ್ ಬೆಸ್ಟ್​ ಎನ್ನಲು ಕೊಟ್ರು ಈ ಕಾರಣ

ಸ್ಟಾರ್​ ಸ್ಪೋರ್ಟ್ಸ್​ ಸಂದರ್ಶನದಲ್ಲಿ ಕೊಹ್ಲಿ- ಸಚಿನ್​ ಇಬ್ಬರಲ್ಲಿ ಯಾರು ಉತ್ತಮ ಬ್ಯಾಟ್ಸ್​ಮನ್​ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್​ ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್​ ಹೆಸರನ್ನು ಸೂಚಿಸಿದ್ದಾರೆ.

ಕೊಹ್ಲಿಗಿಂತ ಸಚಿನ್​ ಶ್ರೇಷ್ಠ ಬ್ಯಾಟ್ಸ್​ಮನ್
ಕೊಹ್ಲಿಗಿಂತ ಸಚಿನ್​ ಶ್ರೇಷ್ಠ ಬ್ಯಾಟ್ಸ್​ಮನ್
author img

By

Published : May 21, 2020, 1:48 PM IST

ಮುಂಬೈ: ಭಾರತ ತಂಡದ ಬ್ಯಾಟಿಂಗ್​ ದಿಗ್ಗಜ ಸಚಿನ್​ ತೆಂಡೂಲ್ಕರ್,​ ಕೊಹ್ಲಿಗಿಂತ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದು ಮಾಜಿ ಆರಂಭಿಕ ಬ್ಯಾಟ್ಸ್​ಮನ್ ಹಾಗೂ ಬಿಜೆಪಿ ಸಂಸದ ಗೌತಮ್​ ಗಂಭೀರ್​ ಅಭಿಪ್ರಾಯ ಪಟ್ಟಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​ ಲೈವ್​ ಸಂದರ್ಶನದಲ್ಲಿ ಕೊಹ್ಲಿ- ಸಚಿನ್​ ಇಬ್ಬರಲ್ಲಿ ಯಾರು ಉತ್ತಮ ಬ್ಯಾಟ್ಸ್​ಮನ್​ ಎಂಬ ಪ್ರಶ್ನೆಗೆ ಉತ್ತರಿಸಿದ ಗಭೀರ್​, ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್​ ಹೆಸರನ್ನು ಸೂಚಿಸಿದ್ದಾರೆ.

ಗೌತಮ್​ ಗಂಭೀರ್​
ಗೌತಮ್​ ಗಂಭೀರ್​

‘ಸಚಿನ್​ ತಂಡೂಲ್ಕರ್​, ಏಕೆಂದರೆ ಅವರು ಆಡುತ್ತಿದ್ದ ಕಾಲದಲ್ಲಿ ಒಂದೇ ಬಾಲ್​, 4 ಫೀಲ್ಡರ್​ಗಳು ಸರ್ಕಲ್​ ಒಳಗಿರುತ್ತಿರುದ್ದರು. ಇದರಿಂದ ರನ್​ಗಳಿಸಲು ತುಂಬಾ ಕಷ್ಟವಿತ್ತು. ಆದ್ದರಿಂದ ಕೊಹ್ಲಿಗಿಂತಲೂ ಸಚಿನ್​ ತೆಂಡೂಲ್ಕರ್​ ಬೆಸ್ಟ್​ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

ಕೊಹ್ಲಿಯೂ ಕೂಡ ಕ್ರಿಕೆಟ್​ನಲ್ಲಿ ಸಾಧಿಸಿದ್ದಾರೆ. ಆದರೆ ಆ ಕಾಲಕ್ಕೂ, ಈ ಕಾಲಕ್ಕೂ ಕ್ರಿಕೆಟ್​ ನಿಯಮಗಳು ಬದಲಾಗಿವೆ. ಅಂದು ಬೌಲರ್​ಗಳಿಗೆ ನಿಯಮಗಳು ನೆರವಾಗುತ್ತಿದ್ದವು, ಆದರೆ ಇಂದಿನ ಕ್ರಿಕೆಟ್​ ನಿಯಮಗಳು ಬ್ಯಾಟ್ಸಮ್​ಗಳಿಗೆ ತುಂಬಾ ನೆರವಾಗುತ್ತಿವೆ ಎಂದಿದ್ದಾರೆ.

ತೆಂಡೂಲ್ಕರ್​ 463 ಏಕದಿನ ಪಂದ್ಯಗಳಲ್ಲಿ 49 ಶತಕ ಸಹಿತ 18426, ಕೊಹ್ಲಿ 239 ಏಕದಿನ ಪಂದ್ಯಗಳಿಂದ 43 ಶತಕ ಸಹಿತ 11867 ರನ್​ಗಳಿಸಿದ್ದಾರೆ.

ಪ್ರಸ್ತುತ ಏಕದಿನ ಕ್ರಿಕೆಟ್​ನಲ್ಲಿ 2 ಹೊಸ ಬಾಲ್​ಗಳನ್ನು ಬಳಸಲಾಗುತ್ತಿದೆ. ರಿವರ್ಸ್​ ಸ್ವಿಂಗ್​ ಇಲ್ಲ, ಫಿಂಗ್​ರ್​ ಸ್ಪಿನ್​ ಇಲ್ಲ 50 ಓವರ್​ಗಳವರೆಗೂ 5 ಫೀಲ್ಡರ್ ಸರ್ಕಲ್​ ಒಳಗಿರುತ್ತಾರೆ. ಇವೆಲ್ಲಾ ನಿಯಮಗಳು ಬ್ಯಾಟ್ಸ್​ಮನ್​ಗಳ ನೆಚ್ಚಿನದ್ದಾಗಿವೆ.

ಆದರೆ ಸಚಿನ್​ ಬೇರೆ ರೀತಿಯ ನಿಯಮಗಳಲ್ಲಿ ಕ್ರಿಕೆಟ್​ ಆಡಿದ್ದಾರೆ. ಅವರ ಕಾಲದಲ್ಲಿ 230 ಯಿಂದ 240 ರನ್​ ಕೂಡ ಮ್ಯಾಚ್​ ಗೆಲ್ಲುವ ಇನ್ನಿಂಗ್ಸ್​ ಆಗುತ್ತಿತ್ತು. ಆದ್ದರಿಂದ ನಾನು ಕೊಹ್ಲಿಗಿಂತಲೂ ಸಚಿನ್​ರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದ ಗಂಭೀರ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.