ETV Bharat / sports

ಟಿ20 ಕ್ರಿಕೆಟ್ ​ಅನ್ನು ನಾಲ್ಕು ಇನ್ನಿಂಗ್ಸ್​ಗಳಾಗಿ ವಿಭಾಗಿಸುವ ಯೋಜನೆಗೆ ಗಂಭೀರ್​-ಬ್ರೆಟ್​ ಲೀ ವಿರೋಧ - ಬ್ರೆಟ್​ ಲೀ

ಕ್ರಿಕೆಟ್​ ಜಗತ್ತಿನಲ್ಲಿ ಹೆಚ್ಚು ಪ್ರಭಾವಿತವಾಗಿರುವ ಟಿ20 ಕ್ರಿಕೆಟ್​ ಅನ್ನು ಇನ್ನಷ್ಟು ಹೆಚ್ಚು ಜನಪ್ರಿಯಗೊಳಿಸಲು ನಾಲ್ಕು ಇನ್ನಿಂಗ್ಸ್​ಗಳಾಗಿ ವಿಭಾಗಿಸುವ ಯೋಜನೆಯನ್ನು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್​ಮನ್​ ತಿರಸ್ಕರಿಸಿದ್ದಾರೆ.

splitting T20s into four innings
ಟಿ20 ಕ್ರಿಕೆಟ್​
author img

By

Published : May 5, 2020, 9:23 AM IST

ಮುಂಬೈ: ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್​ಮನ್ ಗೌತಮ್​ ಗಂಭೀರ್​​ ಹಾಗೂ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್​ ಲೀ ಟಿ20 ಕ್ರಿಕೆಟ್ ಮಾದರಿಯನ್ನು ನಾಲ್ಕು ಇನ್ನಿಂಗ್ಸ್​ಗಳಾಗಿ ಪರಿವರ್ತಿಸುವ ಆಲೋಚನೆಯನ್ನು ಅಸಾಂಪ್ರದಾಯಿಕ ಎಂದಿದ್ದಾರೆ.

splitting T20s into four innings
ಗೌತಮ್ ಗಂಭೀರ್​

"ಟಿ20 ಕ್ರಿಕೆಟ್​ ಅನ್ನು ಎರಡು ಇನ್ನಿಂಗ್ಸ್​ಗಳಾಗಿ ವಿಭಾಗಿಸುವ ಆಲೋಚನೆಯ ಬಗ್ಗೆ ನನಗೆ ಆಸಕ್ತಿಯಿಲ್ಲ. ಆದರೆ ಸಚಿನ್​ ಕೆಲವು ವರ್ಷಗಳ ಹಿಂದೆ ಸಲಹೆ ನೀಡಿದ್ದ 50 ಓವರ್​ಗಳ ಆಟವನ್ನು ಬೇಕಾದರೆ 4 ಇನ್ನಿಂಗ್ಸ್​ಗಳಾಗಿ ಮಾಡಲು ಪ್ರಯತ್ನಿಸಿಬಹುದು. ಏಕೆಂದರೆ, ಇದರಲ್ಲಿ 25 ಓವರ್​ಗಳ ಆಟ ಆಡಲು ಅವಕಾಶವಿರುತ್ತದೆ ಎಂದು ಗಂಭೀರ್​ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

splitting T20s into four innings
ಬ್ರೆಟ್​ ಲೀ

"ಟಿ20 ಕ್ರಿಕೆಟ್ ಸಾಂಪ್ರದಾಯಿಕವಾಗಿ ಇರಬೇಕು. ಅದು ಇಂಡಿಯನ್​ ಪ್ರೀಮಿಯರ್​ ಅಥವಾ ಬಿಗ್​ಬ್ಯಾಶ್​ ನೋಡುಗರನ್ನು ಸೆಳೆಯುತ್ತಿವೆ. ಅಭಿಮಾನಿಗಳನ್ನು ಆಕರ್ಷಿಸುವ ಮೂಲಕ ಮೈದಾನಕ್ಕೆ ಕರೆತರುತ್ತಿದೆ. ಟಿ20ಯಲ್ಲಿ ನಾಲ್ಕು ಇನ್ನಿಂಗ್ಸ್​ ತರುವುದು ತುಂಬಾ ದೂರಾಲೋಚನೆ ಎನಿಸಿಕೊಳ್ಳಲಿದೆ. ನಾನು ಈಗಲು ಟಾರ್ಗೆಟ್​ ದಾಖಲಿಸಿ ಅದನ್ನು ಯಶಸ್ವಿಯಾಗಿ ಬೆನ್ನತ್ತುವುದಕ್ಕೆ ಆಥವಾ ಡಿಫೆಂಡ್​ ಮಾಡಿಕೊಳ್ಳುವುದನ್ನು ನೋಡಲು ಇಷ್ಟಪಡುತ್ತೇನೆ" ಎಂದು ಲೀ ಹೇಳಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ನಾಲ್ಕು ಇನ್ನಿಂಗ್ಸ್​ಗಳಾಗಿ ವಿಂಗಡಿಸುವುದರ ಬಗ್ಗೆ ಮಾತನಾಡಿದ ಗಂಭೀರ್​, "ನಾನು ಇದನ್ನು ಬೆಂಬಲಿಸುತ್ತೇನೆ, ಆದರೆ, ಇಲ್ಲಿ ಟಾಸ್​ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಭಾವಿಸಿದ್ದೇನೆ. ಆದರೆ ಟಿ20ಯಲ್ಲಿ ಕ್ರಿಕೆಟ್​ನಲ್ಲಿ ಇದು ಸಾಧ್ಯವಿಲ್ಲ. 10 ಓವರ್​ಗಳ ಇನ್ನಿಂಗ್ಸ್​ ಆಡುವುದು ತುಂಬಾ ಚಿಕ್ಕ ಇನ್ನಿಂಗ್ಸ್​ ಆಗುತ್ತದೆ" ಎಂದು​ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.