ETV Bharat / sports

ಹೃದಯಾಘಾತ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​​ ಡೀನ್​ ಜೋನ್ಸ್​ ನಿಧನ - ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​​ ಡೀನ್​ ಜೋನ್ಸ್​ ಸಾವು

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಕೇವಲ 59ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Former Australia cricketer Dean Jones
Former Australia cricketer Dean Jones
author img

By

Published : Sep 24, 2020, 4:33 PM IST

Updated : Sep 24, 2020, 4:52 PM IST

ಮುಂಬೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ​ ಡೀನ್​ ಜೋನ್ಸ್​​​​ ಅವರು ತೀವ್ರ ಹೃದಯಾಘಾತದಿಂದ ಮುಂಬೈನಲ್ಲಿ ಸಾವಿಗೀಡಾಗಿದ್ದಾರೆ.

59 ವರ್ಷದ ಡೀನ್​ ಜೋನ್ಸ್​​​, ಆಸ್ಟ್ರೇಲಿಯಾ ಪರ ವಿಕೆಟ್​ ಕೀಪರ್​​ ಬ್ಯಾಟ್ಸ್​​ಮನ್​ ಆಗಿದ್ದರು. ಕಾಂಗರೂ ಪರ 52 ಟೆಸ್ಟ್​, 164 ಏಕದಿನ ಪಂದ್ಯಗಳನ್ನಾಡಿದ್ದು, 1984ರಿಂದ 1994ರ ಸಮಯದಲ್ಲಿ ಆಸ್ಟ್ರೇಲಿಯಾ ಪ್ರತಿನಿಧಿಸಿದ್ದರು.

  • Saddened to hear the news of Dean Jones passing away. Still cannot believe it. Was one of my favourite commentators, he was on air in many of my landmarks. Had really fond memories with him. Will miss him. pic.twitter.com/FZBTqIEGdx

    — Virender Sehwag (@virendersehwag) September 24, 2020 " class="align-text-top noRightClick twitterSection" data=" ">

ದಕ್ಷಿಣ ಏಷ್ಯಾದಲ್ಲಿ ಕ್ರಿಕೆಟ್​ ಅಭಿವೃದ್ಧಿ ಮಾಡಲು ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಹೊಸ ಹೊಸ ಪ್ರತಿಭೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅದ್ಭುತ ನಿರೂಪಕರಾಗಿದ್ದ ಇವರು ತಮ್ಮ ಕಮೆಂಟರಿ ವೇಳೆ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದರು.

1984ರಲ್ಲಿ ವೆಸ್ಟ್​ ಇಂಡೀಸ್​​ನಲ್ಲಿ ನಡೆದ ಟೆಸ್ಟ್​​ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಪದಾರ್ಪಣೆ ಮಾಡಿದ್ದ ಇವರು 9500 ಅಂತಾರಾಷ್ಟ್ರೀಯ ರನ್​ಗಳಿಕೆ ಮಾಡಿದ್ದರು. ಇವರ ನಿಧನಕ್ಕೆ ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದು, ಅವರ ಸಾವು ನಿಜಕ್ಕೂ ಶಾಕ್​ ನೀಡಿದೆ ಎಂದಿದ್ದಾರೆ. ಇದರ ಬೆನ್ನಲ್ಲೇ ಇರ್ಫಾನ್​ ಪಠಾಣ್​, ವಿರೇಂದ್ರ ಸೆಹ್ವಾಗ್​ ಸೇರಿ ಅನೇಕರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ಸಂತಾಪ

  • Absolutely heartbreaking news about Dean Jones passing away.
    A wonderful soul taken away too soon. Had the opportunity to play against him during my first tour of Australia.
    May his soul rest in peace and my condolences to his loved ones. 🙏🏼 pic.twitter.com/u6oEY1h7zz

    — Sachin Tendulkar (@sachin_rt) September 24, 2020 " class="align-text-top noRightClick twitterSection" data=" ">

ನಿಜಕ್ಕೂ ಇದೊಂದು ಶಾಕಿಂಗ್​ ನ್ಯೂಸ್​​. ಆಸ್ಟ್ರೇಲಿಯಾ ಪ್ರವಾಸದ ವೇಳೆ ಇವರ ವಿರುದ್ಧ ನಾನು ಕ್ರಿಕೆಟ್​ ಆಡಿರುವುದು ನಿಜಕ್ಕೂ ಅದ್ಭುತ ಎಂದಿದ್ದಾರೆ.

Last Updated : Sep 24, 2020, 4:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.