ಅಹ್ಮದಾಬಾದ್: ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣ ಭಾರತದ ಎರಡನೇ ಹಗಲು - ರಾತ್ರಿ ಟೆಸ್ಟ್‌ಗೆ ಆತಿಥ್ಯ ವಹಿಸಲಿದೆ. ಬುಧವಾರದಿಂದ ಇಂಗ್ಲೆಂಡ್ ವಿರುದ್ಧ ನಡೆಯುವ ಮೂರನೇ ಟೆಸ್ಟ್ ಅಹರ್ನಿಶಿ ಟೆಸ್ಟ್ ಪಂದ್ಯವಾಗಲಿದ್ದು, ಎಲ್ಲರ ಕಣ್ಣುಗಳು ಸ್ಯಾನ್ಸ್‌ಪರೀಲ್ಸ್ ಗ್ರೀನ್‌ಲ್ಯಾಂಡ್ಸ್ (ಎಸ್‌ಜಿ) ಗುಲಾಬಿ ಚೆಂಡಿನ ಮೇಲಿದೆ.
ಈ ಪಿಂಕ್ ಬಾಲ್ ಅನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಬಾರಿಗೆ ಮಾತ್ರ ಬಳಸಲಾಗುತ್ತಿದೆ. ಮೊದಲ ಬಾರಿ ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಬಳಸಲಾಗಿತ್ತು. ಇನ್ನು ಇದು ಭಾರತದ ಪಾಲಿನ 3ನೇ ಅಹರ್ನಿಶಿ ಟೆಸ್ಟ್ ಆಗಿದೆ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಕೂಕಬುರ್ರಾ ಚೆಂಡಿನಲ್ಲಿ ಆಡಿದೆ.
ಭಾರತದಲ್ಲಿ ಕೇವಲ ಒಮ್ಮೆ ಮಾತ್ರ ಪಿಂಕ್ಬಾಲ್ನಲ್ಲಿ ಆಡಲಾಗಿದೆ. ಅದು 2019 ರ ನವೆಂಬರ್ನಲ್ಲಿ ಬಾಂಗ್ಲಾದೇಶದ ವಿರುದ್ಧದ ಅಹರ್ನಿಶಿ ಟೆಸ್ಟ್ನಲ್ಲಿ ಬಳಸಲಾಗಿತ್ತು. ಆದರೆ, ಈ ಟೆಸ್ಟ್ ಕೇವಲ ಎರಡೇ ದಿನ್ನಕ್ಕೆ ಮುಗಿದಿತ್ತು. ಹಾಗಾಗಿ ಎಸ್‌ಜಿ ಚೆಂಡಿನ ನಡವಳಿಕೆಯನ್ನು ನಿರ್ಧರಿಸಲು 2 ದಿನ ತುಂಬಾ ಕಡಿಮೆಯಾಗಿದೆ. ಹಾಗಾಗಿ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಿಂಕ್ಬಾಲ್ನ ಗುಣಮಟ್ಟ ತಿಳಿಯಲಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರು ಕಂಪನಿಗಳ ಚೆಂಡನ್ನು ಉಪಯೋಗಿಸಲಾಗುತ್ತಿದ್ದು, ಇಂಗ್ಲೆಂಡ್ನಲ್ಲಿ ತಯಾರಾಗುವ ಡ್ಯೂಕ್ ಮೂರನೇ ಬ್ರ್ಯಾಂಡ್ ಆಗಿದೆ. ಆ ರಾಷ್ಟ್ರದಲ್ಲಿ ಇದೇ ಚೆಂಡನ್ನು ಉಪಯೋಗಿಸಲಾಗುತ್ತಿದೆ. ಭಾರತ ಮಾತ್ರ ಎಸ್‌ಜಿ ಚೆಂಡನ್ನು ಉಪಯೋಗಿಸುತ್ತಿದೆ. ನೆರೆರಾಷ್ಟ್ರ ಬಾಂಗ್ಲಾದೇಶವು ಕೆಲವೊಮ್ಮೆ ಈ ಚೆಂಡನ್ನು ಬಳಸಿದೆ.

ಕ್ರಿಕೆಟ್‌ನಲ್ಲಿ ಅತ್ಯಂತ ಜನಪ್ರಿಯ ಚೆಂಡಾಗಿರುವ ಕೂಕಬುರ್ರಾವನ್ನು 7 ರಾಷ್ಟ್ರಗಳು ಉಪಯೋಗಿಸುತ್ತಿವೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ, ನ್ಯೂಜಿಲ್ಯಾಂಡ್, ಜಿಂಬಾಬ್ವೆ ಮತ್ತು ಬಾಂಗ್ಲಾದೇಶಗಳು ಉಪಯೋಗಿಸುತ್ತಿವೆ.
ಕೂಕಬುರ್ರಾದ ಔಟರ್ ಸೀಮ್ಅನ್ನು ಯಂತ್ರದಿಂದ ಹೊಲಿಯುವುದರಿಂದ, ಸ್ಪಿನ್ನರ್‌ಗಳಿಗೆ ಚೆಂಡನ್ನು ಹಿಡಿಯಲು ಕಷ್ಟವಾಗುತ್ತದೆ. ಆದರೆ, ಎಸ್‌ಜಿ ಚೆಂಡಿನ ಹೊರ ಸೀಮ್ ಅದರ ಒಳಗಿನ ಸೀಮ್ನಂತೆ ಕೈಯಿಂದ ಹೊಲಿಯಲ್ಪಟಿದೆ. ಹಾಗಾಗಿ ಸ್ಪಿನ್ನರ್‌ಗಳಿಗೆ ಚೆಂಡನ್ನು ಸುಲಭವಾಗಿ ಹಿಡಿಯಲು ಅನುವು ಮಾಡಿಕೊಡುತ್ತದೆ. ಜೊತೆಗೆ ಸೀಮ್ ದೀರ್ಘಕಾಲ ಇರುತ್ತದೆ.
-
First pink-ball Test at Motera 👌
— BCCI (@BCCI) February 20, 2021 " class="align-text-top noRightClick twitterSection" data="
State-of-the-art facilities 👏
As the world's largest cricket stadium gears up to host the @Paytm #INDvENG pink-ball Test, excitement levels are high in the #TeamIndia camp 😎🙌 - by @RajalArora
Watch the full video 🎥👇https://t.co/Oii72qDeJK pic.twitter.com/NqhEa7k7mm
">First pink-ball Test at Motera 👌
— BCCI (@BCCI) February 20, 2021
State-of-the-art facilities 👏
As the world's largest cricket stadium gears up to host the @Paytm #INDvENG pink-ball Test, excitement levels are high in the #TeamIndia camp 😎🙌 - by @RajalArora
Watch the full video 🎥👇https://t.co/Oii72qDeJK pic.twitter.com/NqhEa7k7mmFirst pink-ball Test at Motera 👌
— BCCI (@BCCI) February 20, 2021
State-of-the-art facilities 👏
As the world's largest cricket stadium gears up to host the @Paytm #INDvENG pink-ball Test, excitement levels are high in the #TeamIndia camp 😎🙌 - by @RajalArora
Watch the full video 🎥👇https://t.co/Oii72qDeJK pic.twitter.com/NqhEa7k7mm
ಡ್ಯೂಕ್ಸ್ ಚೆಂಡು ಕೂಡ ಎಸ್‌ಜಿಗೆ ಹೋಲುತ್ತದೆ. ಆದರೆ, ಈ ಚೆಂಡನ್ನು ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಐರ್ಲೆಂಡ್ನಲ್ಲಿ ಮಾತ್ರ ಬಳಸಲಾಗುತ್ತದೆ. ಭಾರತದ ನಾಯಕ ಕೊಹ್ಲಿ, ಈ ಹಿಂದೆ ಡ್ಯೂಕ್ಸ್ ಚೆಂಡನ್ನು ಭಾರತದಲ್ಲಿ ಟೆಸ್ಟ್ ಪಂದ್ಯಗಳಿಗೆ ಬಳಸಬೇಕೆಂದು ಕರೆ ನೀಡಿದ್ದರು.
ವಿಶೇಷವೆಂದರೆ, ಭಾರತೀಯ ಉದ್ಯಮಿ ದಿಲೀಪ್ ಜಜೋಡಿಯಾ ಡ್ಯೂಕ್ ಚೆಂಡನ್ನು ತಯಾರಿಸುವ ಬ್ರಿಟಿಷ್ ಕ್ರಿಕೆಟ್ ಬಾಲ್ಸ್ ಲಿಮಿಟೆಡ್ನ ಮಾಲೀಕರಾಗಿದ್ದಾರೆ. ಅವರು 1987 ರಲ್ಲಿ ಕಂಪನಿಯನ್ನು ಖರೀದಿಸಿದ್ದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಹಿರಿಯ ಕ್ರಿಕೆಟಿಗರಾದ ಅಶ್ವಿನ್ ಮತ್ತು ಕೊಹ್ಲಿ ಎಸ್‌ಜಿ ಚೆಂಡಿನ ಗುಣಮಟ್ಟನ್ನು ಟೀಕಿಸಿ ದೂರಿದ್ದರು. ಕಂಪನಿ ಕೂಡ ಕ್ಷಮೆ ಕೇಳಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಎಸ್‌ಜಿ ಚೆಂಡನ್ನು ಬಳಸಲಾಗುವುದರಿಂದ ಎಲ್ಲರ ಗಮನ ಚೆಂಡಿನ ವರ್ತನೆ ಹೇಗಿರಲಿದೆ ಎಂಬುದರ ಮೇಲೆಯೇ ಕೇಂದ್ರೀಕೃತವಾಗಿದೆ.
ಇದನ್ನು ಓದಿ: ಅಶ್ವಿನ್ ಕ್ಲಾಸ್ ಪ್ಲೇಯರ್, ಆತ ವೈಟ್ಬಾಲ್ ಕ್ರಿಕೆಟ್ ಆಡದಿರುವುದು ದುರದೃಷ್ಟಕರ: ಗಂಭೀರ್