ಹೈದರಾಬಾದ್: ಆ್ಯಶಸ್ ಸರಣಿಯ ಮೂಲಕ ಐಸಿಸಿಯ ಕನಸಿನ ಕೂಸು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಚಾಲನೆ ದೊರೆತಿತ್ತು. ಸದ್ಯ ಈ ಚಾಂಪಿಯನ್ಶಿಪ್ನ ಅಡಿ ಒಂದಷ್ಟು ಪಂದ್ಯಗಳು ನಡೆದಿದ್ದು ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ.
ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಸದ್ಯ ಗೆದ್ದಿರುವುದು ಎರಡು ಪಂದ್ಯ, ಅತ್ತ ವಿಂಡೀಸ್ ವಿರುದ್ಧವೂ ಇಷ್ಟೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಆದರೆ 120 ಅಂಕಗಳೊಂದಿಗೆ ಕೊಹ್ಲಿ ಪಡೆ ಮೊದಲ ಸ್ಥಾನದಲ್ಲಿದ್ದರೆ, ಅತ್ತ ಆಸ್ಟ್ರೇಲಿಯಾ ಗಳಿಸಿರುವ ಅಂಕ ಕೇವಲ 56..! ಎರಡೂ ತಂಡಗಳೂ ಸಮನಾಗಿ ಪಂದ್ಯ ಗೆದ್ದರೂ ಅಂಕಗಳಿಕೆಯಲ್ಲಿ ಯಾಕೆ ಈ ವ್ಯತ್ಯಾಸ ಅನ್ನುವ ಮಾಹಿತಿ ಇಲ್ಲಿದೆ...
-
Hey Virat, where are India in the World Test Championship table? ☝️#WIvIND pic.twitter.com/wzYG1eqisl
— ICC (@ICC) September 3, 2019 " class="align-text-top noRightClick twitterSection" data="
">Hey Virat, where are India in the World Test Championship table? ☝️#WIvIND pic.twitter.com/wzYG1eqisl
— ICC (@ICC) September 3, 2019Hey Virat, where are India in the World Test Championship table? ☝️#WIvIND pic.twitter.com/wzYG1eqisl
— ICC (@ICC) September 3, 2019
ಟೆಸ್ಟ್ ಚಾಂಪಿಯನ್ಶಿಪ್ ಅಡಿ ಆಡಲಾಗುವ ಎಲ್ಲ ಸರಣಿಗೂ ಒಟ್ಟು 120 ಅಂಕವನ್ನು ನಿಗದಿಪಡಿಸಲಾಗಿದೆ. ವಿಂಡೀಸ್ ವಿರುದ್ಧ ಸರಣಿಯನ್ನು ಕ್ಲೀಸ್ಸ್ವೀಪ್ ಮಾಡುವ ಮೂಲಕ ಸಂಪೂರ್ಣ 120 ಅಂಕ ಟೀಂ ಇಂಡಿಯಾ ಪಡೆದಿತ್ತು. ಶ್ರೀಲಂಕಾ-ನ್ಯೂಜಿಲ್ಯಾಂಡ್ ಸರಣಿ 1-1ರಿಂದ ಡ್ರಾ ಆಗಿತ್ತು. ಹೀಗಾಗಿ ಉಭಯ ತಂಡಗಳು ತಲಾ 60 ಅಂಕ ಹಂಚಿಕೊಂಡಿದ್ದವು.
ಆ್ಯಶಸ್ ಐದು ಪಂದ್ಯಗಳ ಸರಣಿಯಾಗಿದ್ದು 120 ಅಂಕಗಳನ್ನು ಒಂದು ಪಂದ್ಯಕ್ಕೆ 24 ಅಂಕಗಳಂತೆ ನಿಗದಿ ಮಾಡಲಾಗಿದೆ. ಪಂದ್ಯ ಡ್ರಾ ಆದಲ್ಲಿ 8 ಅಂಕ ದೊರೆಯಲಿದೆ. ಆಸ್ಟ್ರೇಲಿಯಾ ಎರಡು ಗೆಲುವು ಹಾಗೂ ಒಂದು ಡ್ರಾದೊಂದಿಗೆ ಒಟ್ಟು 56 ಅಂಕ ಸಂಪಾದಿಸಿದೆ. ಅತ್ತ ಇಂಗ್ಲೆಂಡ್ ಒಂದು ಗೆಲುವು ಹಾಗೂ ಒಂದು ಡ್ರಾದೊಂದಿಗೆ 32 ಅಂಕ ಗಳಿಸಿದೆ.
-
England fought hard, but Australia were just too good.
— ICC (@ICC) September 8, 2019 " class="align-text-top noRightClick twitterSection" data="
A superb, dramatic final day ends with the tourists having won by 185 runs.#Ashes scorecard 👇https://t.co/zrb0K55IBc pic.twitter.com/ZH45ItuUxm
">England fought hard, but Australia were just too good.
— ICC (@ICC) September 8, 2019
A superb, dramatic final day ends with the tourists having won by 185 runs.#Ashes scorecard 👇https://t.co/zrb0K55IBc pic.twitter.com/ZH45ItuUxmEngland fought hard, but Australia were just too good.
— ICC (@ICC) September 8, 2019
A superb, dramatic final day ends with the tourists having won by 185 runs.#Ashes scorecard 👇https://t.co/zrb0K55IBc pic.twitter.com/ZH45ItuUxm
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ವಿಂಗಡಣೆ:
- ಎರಡು ಪಂದ್ಯಗಳ ಸರಣಿ - ಗೆಲುವು/ಟೈ/ಡ್ರಾ- 60/30/20
- ಮೂರು ಪಂದ್ಯಗಳ ಸರಣಿ - ಗೆಲುವು/ಟೈ/ಡ್ರಾ- 40/20/13
- ನಾಲ್ಕು ಪಂದ್ಯಗಳ ಸರಣಿ - ಗೆಲುವು/ಟೈ/ಡ್ರಾ- 30/15/10
- ಐದು ಪಂದ್ಯಗಳ ಸರಣಿ - ಗೆಲುವು/ಟೈ/ಡ್ರಾ- 24/12/8