ಹೈದರಾಬಾದ್: ಭಾರತೀಯ ಅಂಡರ್ -19 ಕ್ರಿಕೆಟ್ ತಂಡದ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಈಟಿವಿ ಭಾರತ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ವಿಶ್ವಕಪ್‌ನ ಫೈನಲ್ ಪಂದ್ಯ ಸೇರಿದಂತೆ ಹಲವು ವಿಷಯ ಕುರಿತು ಮಾತನಾಡಿದ್ದಾರೆ.
ಅಂತಿಮ ಪಂದ್ಯದ ಬಗ್ಗೆ ಮಾತನಾಡಿದ ತಿಲಕ್ ವರ್ಮಾ, ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸುವುದಕ್ಕೂ ಮೊದಲು ಸಾಕಷ್ಟು ಮಳೆಯಾಗಿತ್ತು ಹೀಗಾಗಿಯೆ ಆರಂಭಿಕ ಆಟಗಾರರು ಕ್ರೀಸ್ನಲ್ಲಿ ನೆಲೆಸಲು ಸಮಯ ತೆಗೆದುಕೊಂಡರು ಎಂದಿದ್ದಾರೆ. ಇನ್ನು ಬಾಂಗ್ಲಾ ಆಟಗಾರೊಂದಿಗೆ ನಡೆದ ಘರ್ಷಣೆ ಬಗ್ಗೆ ಮಾತನಾಡಿದ ಆವರು, ಪಂದ್ಯ ಗೆದ್ದ ಬಾಂಗ್ಲಾ ಆಟಗಾರರು ಸ್ವಲ್ಪ ಉತ್ಸುಕರಾಗಿದ್ದರು, ಅದೇ ಉತ್ಸಾಹದಲ್ಲಿ ಭಾರತದ ಆಟಗಾರರ ಮೇಲೆ ಇಂತಾ ವರ್ತನೆ ತೋರಿದ್ದಾರೆ ಎಂದು ಹೇಳಿದ್ದಾರೆ.
ಭಾರತ ತಂಡದ ಪರ ಆಡುವುದು ಎಂದರೆ ನಿಜಕ್ಕೂ ನನ್ನ ಕನಸು ನನಸಾದ ಕ್ಷಣ ಎಂದಿರುವ ತಿಲಕ್ ವರ್ಮಾ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 38 ರನ್ ಗಳಿಸಿದ್ದರು. ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ನನ್ನ ನೆಚ್ಚಿನ ಆಟಗಾರ ಎಂದಿದ್ದು, ಅಂಡರ್-19 ತಂಡದಲ್ಲಿದ್ದ ಕನ್ನಡಿಗ ವಿದ್ಯಾಧರ್ ಪಾಟಿಲ್ ನೆಚ್ಚಿನ ಸ್ನೇಹಿತ ಎಂದಿದ್ದಾರೆ.