ಹೈದರಾಬಾದ್: ಜೆನ್ ನೆಕ್ಸ್ಟ್ ಕ್ರಿಕೆಟ್ ಇನ್ಸಿಟಿಟ್ಯೂಟ್ ಸಹಭಾಗಿತ್ವದಲ್ಲಿ ಆರಂಭವಾದ ಗಾಡಿಯಂ ಸ್ಪೋರ್ಟ್ಸ್ಪಿಯಾ ಕ್ರಿಕೆಟ್ ಅಕಾಡೆಮಿಗೆ ಕ್ರಿಕೆಟರ್ ರವಿಚಂದ್ರ ಅಶ್ವಿನ್ ಚಾಲನೆ ನೀಡಿದರು.
ಈ ವೇಳೆ ಈ ಟಿವಿ ಭಾರತದ ಜತೆ ತಮ್ಮ ಮನದಾಳವನ್ನ ಬಿಚ್ಚಿಟ್ಟರು. ಕ್ರಿಕೆಟ್ ಜೀವನದ ಬಗ್ಗೆ ಹಾಗೂ ಈ ಹಿಂದಿನ ಘಟನೆಗಳನ್ನ ನೆನಪುಗಳನ್ನ ಹಂಚಿಕೊಂಡರು, ಇದೇ ವೇಳೆ ತಮ್ಮ ಮುಂದಿನ ಯೋಜನೆಗಳನ್ನು ಬಿಚ್ಚಿಟ್ಟರು.
ಆಶ್; ತಂಡದ ಸದಸ್ಯರು ಡ್ರೆಸ್ಸಿಂಗ್ ರೂಂನಲ್ಲಿ ಅಶ್ವಿನ್ ಅವರನ್ನ ಪ್ರೀತಿಯಿಂದ ಕರೆಯುತ್ತಿದ್ದರು ಎಂದು ನೆನಪಿಸಿಕೊಂಡ ಸ್ಪಿನ್ ಲೆಜೆಂಡ್, ತಾವು ವಿವಿಧ ಸಾಧನೆಗಳನ್ನ ದಾಖಲೆಗಳನ್ನ ಮಾಡುವ ಕನಸು ಕಂಡಿರಲಿಲ್ಲ. ಆದರೆ ಜೀವನದಲ್ಲಿ ಒಮ್ಮೆ ಮಾತ್ರ ಭಾರತೀಯ ತಂಡದ ಜರ್ಸಿ ತೊಡಬೇಕು ಎಂದು ಆಸೆ ಪಟ್ಟಿದ್ದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ತಾವು ಸಾಧನೆ ಮಾಡಿದಾಗ ಹಿಗ್ಗದೆ, ಸೋತಾಗ ಫೆಲ್ಯೂವರ್ ಆದಾಗ ಕುಗ್ಗದೇ ತನ್ನ ಆಟ ಮುಂದುವರಿಸಿದೆ ಎಂದರು. ಬದಲಾಗಿ ಎಲ್ಲರಿಂದಲೂ ಒಂದೊಂದು ಅಂಶ ಕಲಿತೆ ಎಂದರು.
ಇದೇ ವೇಳೆ ತಮ್ಮ ಭವಿಷ್ಯದ ಪ್ಲಾನ್ ಅನ್ನು ಬಿಚ್ಚಿಟ್ಟರು. ಇದೇ ತಮ್ಮ ರೋಲ್ ಮಾಡೆಲ್ ಆದ ವೆಂಕಟರಾಘವನ್ ಅವರನ್ನ ಸ್ಮರಿಸಿದರು.