ETV Bharat / sports

ಆರ್​ಸಿಬಿ ತಂಡಕ್ಕೆ ನನ್ನ ಬೆಂಬಲ ಎಂದ ತಸ್ಕಿನ್ ಅಹ್ಮದ್: ಬಾಂಗ್ಲಾ ವೇಗಿ ಸಂದರ್ಶನ - taskin ahmed exclusive interview

ತಪ್ಪದೇ ಐಪಿಎಲ್ ಪಂದ್ಯ ವೀಕ್ಷಿಸುತ್ತಿರುವ ಬಾಂಗ್ಲಾ ವೇಗಿ ತಸ್ಕಿನ್ ಅಹ್ಮದ್, ಡೆಲ್ಲಿ, ಆರ್​ಸಿಬಿ, ಪಂಜಾಬ್ ಮತ್ತು ಮುಂಬೈ ತಂಡಗಳು ಪ್ಲೇ-ಆಫ್ ಹಂತ ಪ್ರವೇಶಿಸಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

bangladesh pacer taskin ahmed
ಬಾಂಗ್ಲಾ ವೇಗಿ ತಸ್ಕಿನ್ ಅಹ್ಮದ್ ಸಂದರ್ಶನ
author img

By

Published : Oct 5, 2020, 12:35 PM IST

Updated : Oct 5, 2020, 3:35 PM IST

ಹೈದರಾಬಾದ್: ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ವೇಗಿ ತಸ್ಕಿನ್ ಅಹ್ಮದ್, ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್​ ತಂಡದ ಪರ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

25 ವರ್ಷದ ವೇಗಿ ತಸ್ಕಿನ್ ಅಹ್ಮದ್, ಮುಶ್ರಫೆ ಮೊರ್ತಾಜ ಮತ್ತು ತಮೀಮ್ ಇಕ್ಬಾಲ್ ಅವರ ನಾಯಕತ್ವದಲ್ಲಿ ಆಡಿದ್ದು, ಅವರ ಕ್ರಿಕೆಟ್ ವೃತ್ತಿಜೀವನ, ಕಂಬ್ಯಾಕ್ ಬಗ್ಗೆಯೂ ಮಾತನಾಡಿದ್ದಾರೆ.

ಈ ವರ್ಷದ ಐಪಿಎಲ್​ ಟೂರ್ನಿಯ ಒಂದು ಪಂದ್ಯವನ್ನೂ ಮಿಸ್ ಮಾಡಿಲ್ಲ, ಎಲ್ಲಾ ಪಂದ್ಯಗಳನ್ನೂ ನೋಡುತ್ತಿದ್ದೇನೆ. ಕೋಲ್ಕತ್ತಾ ನೈಟ್​ ರೈಡರ್ಸ್ ನನ್ನ ನೆಚ್ಚಿನ ತಂಡವಾಗಿದ್ದು, ಇದೇ ತಂಡದ ಪರ ಆಡಲು ಬಯಸುತ್ತೇನೆ. ಪ್ರಸಕ್ತ ಟೂರ್ನಿಯಲ್ಲಿ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುತ್ತಿದ್ದೇನೆ ಎಂದಿದ್ದಾರೆ.

ಬಾಂಗ್ಲಾ ವೇಗಿ ತಸ್ಕಿನ್ ಅಹ್ಮದ್ ಸಂದರ್ಶನ

ಇಲ್ಲಿಯವರೆಗೆ 5 ಟೆಸ್ಟ್, 32 ಏಕದಿನ ಮತ್ತು 19 ಟಿ-20 ಪಂದ್ಯಗನ್ನು ಆಡಿದ್ದಾರೆ. ಟೀಂ ಇಂಡಿಯಾ ವಿರುದ್ಧ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ತಸ್ಕಿನ್ ಅಹ್ಮದ್ ಆಡಿದ ಮೊದಲ ಪಂದ್ಯದಲ್ಲೇ 5 ವಿಕೆಟ್ ಪಡೆದು ಮಿಂಚಿದ್ರು. ಆದರೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾದೇಶ ಆ ಪಂದ್ಯದಲ್ಲಿ ಸೋಲು ಕಂಡಿತ್ತು.

ತಪ್ಪದೆ ಐಪಿಎಲ್ ಪಂದ್ಯ ವೀಕ್ಷಿಸುತ್ತಿರುವ ತಸ್ಕಿನ್ ಅಹ್ಮದ್, ಡೆಲ್ಲಿ, ಆರ್​ಸಿಬಿ, ಪಂಜಾಬ್ ಮತ್ತು ಮುಂಬೈ ತಂಡಗಳು ಪ್ಲೇ-ಆಫ್ ಹಂತ ಪ್ರವೇಶಿಸಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

Last Updated : Oct 5, 2020, 3:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.