ಆಲಪ್ಪುಳ(ಕೇರಳ): ನೇಣು ಬಿಗಿದ ಸ್ಥಿತಿಯಲ್ಲಿ ಕೇರಳದ ಮಾಜಿ ರಣಜಿ ಕ್ರಿಕೆಟರ್ ಎಂ. ಸುರೇಶ್ ಕುಮಾರ್ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆ 7:15ರ ಸುಮಾರಿಗೆ ಬೆಡ್ರೂಂನಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಇದರ ಬಗ್ಗೆ ಅವರ ಮಗ ಮಾಹಿತಿ ನೀಡಿದ್ದಾರೆ.
ಈ ಹಿಂದೆ ದಿ ವಾಲ್ ರಾಹುಲ್ ದ್ರಾವಿಡ್ ಅವರ ಅಂಡರ್-19 ತಂಡದಲ್ಲಿದ್ದ ಎಂ ಸುರೇಶ್ ಕುಮಾರ್ 72 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿದ್ದು, 1,657 ರನ್ ಹಾಗೂ 196 ವಿಕೆಟ್ ಗಳಿಸಿದ್ದಾರೆ.
52 ಪಂದ್ಯಗಳನ್ನ ಕೇರಳ ಹಾಗೂ 17 ಪಂದ್ಯಗಳನ್ನ ರೈಲ್ವೇಸ್ ಪರ ಆಡಿದ್ದ ಇವರು ಸದ್ಯ ರೈಲ್ವೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದರು. ವಿಶೇಷ ಎಂದರೆ ದುಲೀಪ್ ಟ್ರೋಫಿಯಲ್ಲಿ ಆಡಿರುವ ಕೀರ್ತಿ ಇವರದ್ದಾಗಿದೆ. ಇನ್ನು 1992ರಲ್ಲಿ ಅಂಡರ್-19 ತಂಡ ಹಾಗೂ ಏಕದಿನ ತಂಡದಲ್ಲೂ ಇವರು ಕಾಣಿಸಿಕೊಂಡಿದ್ದರು.