ದುಬೈ: ಪ್ಲೇ ಆಫ್ ನಿರ್ಣಯಿಸುವ ಪಂದ್ಯದಲ್ಲಿ ಆರ್.ಆರ್ ವಿರುದ್ಧ ನಾಯಕ ಇಯಾನ್ ಮಾರ್ಗನ್ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 191 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್ಗಳಿಸಿದೆ.
ಕೆಕೆಆರ್ ಬ್ಯಾಟಿಂಗ್ ಇಳಿದ ಮೊದಲ ಓವರ್ನಲ್ಲೇ ನಿತೀಶ್ ರಾಣಾ ವಿಕೆಟ್ ಕಳೆದುಕೊಂಡಿತು. ಆದರೆ ಗಿಲ್ ಮತ್ತು ತ್ರಿಪಾಠಿ 2ನೇ ವಿಕೆಟ್ಗೆ 72 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಗಿಲ್ 24 ಎಸೆತಗಳಲ್ಲಿ 36, ತ್ರಿಪಾಠಿ 34 ಎಸೆತಗಳಲ್ಲಿ 39 ರನ್ಗಳಿಸಿ ಅದ್ಭುತ ಆರಂಭ ಒದಗಿಸಿಕೊಟ್ಟರು. ನಂತರ ಬಂದ ನರೈನ್ ಹಾಗೂ ಕಾರ್ತಿಕ್ರನ್ನ ಸೊನ್ನೆಗೆ ತೆವಾಟಿಯಾ ಪೆವಿಲಿಯನ್ಗಟ್ಟಿದರು
-
Innings Break!#KKR post a formidable total of 191/7 on the board. #RR chase coming up shortly. Stay tuned.
— IndianPremierLeague (@IPL) November 1, 2020 " class="align-text-top noRightClick twitterSection" data="
Scorecard - https://t.co/loiysIghUH #Dream11IPL pic.twitter.com/RQt1PUdxqy
">Innings Break!#KKR post a formidable total of 191/7 on the board. #RR chase coming up shortly. Stay tuned.
— IndianPremierLeague (@IPL) November 1, 2020
Scorecard - https://t.co/loiysIghUH #Dream11IPL pic.twitter.com/RQt1PUdxqyInnings Break!#KKR post a formidable total of 191/7 on the board. #RR chase coming up shortly. Stay tuned.
— IndianPremierLeague (@IPL) November 1, 2020
Scorecard - https://t.co/loiysIghUH #Dream11IPL pic.twitter.com/RQt1PUdxqy
ಆದರೆ ತಂಡಕ್ಕೆ ಮರಳಿರುವ ರಸೆಲ್ 11 ಎಸೆತಗಳಲ್ಲಿ 3 ಸಿಕ್ಸರ್ಗಳ ಸಹಿತ 25 ರನ್ ಚಚ್ಚಿದರು. ನಾಯಕನ ಆಟವಾಡಿದ ಇಯಾನ್ ಮಾರ್ಗನ್ 35 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಬೌಂಡರಿಗಳ ಸಹಿತ 68 ರನ್ಗಳಿಸಿ ಔಟಾಗದೆ ಉಳಿದರು. ಕಮ್ಮಿನ್ಸ್ 15 ರನ್ಗಳಿಸಿದರು.
ಒಟ್ಟಾರೆ 20 ಓವರ್ಗಳಲ್ಲಿ ಕೋಲ್ಕತ್ತಾ 7 ವಿಕೆಟ್ ಕಳೆದುಕೊಂಡು 191 ರನ್ಗಳಿಸಿದೆ.
ಆರ್ಆರ್ ಪರ ರಾಹುಲ್ ತೆವಾಟಿಯಾ 25ಕ್ಕೆ 3, ಕಾರ್ತಿಕ್ ತ್ಯಾಗಿ 36ಕ್ಕೆ 2 ಆರ್ಚರ್ 19 ರನ್ ನೀಡಿ 1 ವಿಕೆಟ್ ಹಾಗೂ ಗೋಪಾಲ್ 44ಕ್ಕೆ 1 ವಿಕೆಟ್ ಪಡೆದರು.