ETV Bharat / sports

ಭಾರತ ಎದುರಿಸುವ ಮುನ್ನ ಇಂಗ್ಲೆಂಡ್ ತಂಡ ಬಗೆಹರಿಸಿಕೊಳ್ಳುವುದೇ ಟಾಪ್​ 3 ಸಮಸ್ಯೆ? - ಡೊಮೆನಿಕ್ ಸಿಬ್ಲೇ

ಬೈರ್ಸ್ಟೋವ್​ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದಿದ್ದ ಕ್ರಾಲೆ ಮತ್ತೆ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಸಿಬ್ಲೇ ಮತ್ತು ಖಾಯಂ ಆರಂಭಿಕರಾಗಿರುವ ರೋನಿ ಬರ್ನ್ಸ್​ ಇನ್ನಿಂಗ್ಸ್​ ಆರಂಭಿಸಲಿದ್ದಾರೆ..

ಇಂಗ್ಲೆಂಡ್ vs ಭಾರತ ತಂಡ
ಇಂಗ್ಲೆಂಡ್ vs ಭಾರತ ತಂಡ
author img

By

Published : Jan 28, 2021, 3:06 PM IST

ಹೈದರಾಬಾದ್ ​: ರೋಹಿತ್ ಶರ್ಮಾ ಮತ್ತು ಶುಭಮನ್​ ಗಿಲ್​ ತಂಡ ಸೇರಿಕೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾರತ ತಂಡ ತನ್ನ ಅಗ್ರ ಕ್ರಮಾಂಕದ ವೈಫಲ್ಯವನ್ನು ಸರಿಪಡಿಸಿಕೊಂಡಿದೆ. ಪೂಜಾರ ಅತ್ಯುತ್ತಮ ಫಾರ್ಮ್​ನಲ್ಲಿರುವುದರಿಂದ ಭಾರತ ತಂಡ ಅಗ್ರ ಕ್ರಮಾಂಕ ಪ್ರವಾಸಿ ಇಂಗ್ಲೆಂಡ್​ ತಂಡಕ್ಕಿಂತ ಭಾರಿ ಮುಂದಿದೆ.

ಇತ್ತೀಚೆಗೆ ಮುಗಿದ ಶ್ರೀಲಂಕಾ ವಿರುದ್ದದ ಟೆಸ್ಟ್​ ಸರಣಿಯಲ್ಲಿ ಇಂಗ್ಲೆಂಡ್ ಆರಂಭಿಕರಾದ ಜ್ಯಾಕ್ ಕ್ರಾಲೆ ಮತ್ತು ಡೊಮೆನಿಕ್​ ಸಿಬ್ಲೇ ಭಾರಿ ವೈಫಲ್ಯ ಅನುಭವಿಸಿದ್ದರು. ಸಿಬ್ಲೇ ನಾಲ್ಕು ಇನ್ನಿಂಗ್ಸ್​ಗಳಲ್ಲಿ ಕೇವಲ ಒಂದು ಅರ್ಧಶತಕ ಸಿಡಿಸಿದರೆ, ಕ್ರಾಲೇ ಒಂದನ್ನೂ ಗಳಿಸಲಾಗಲಿಲ್ಲ. ಅಲ್ಲದೆ ಶ್ರೀಲಂಕಾ ವಿರುದ್ಧದ ಇತ್ತೀಚಿನ ಟೆಸ್ಟ್ ಸರಣಿಯಲ್ಲಿ ನಂ.3ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಜಾನಿ ಬೈರ್‌ಸ್ಟೋವ್ ಅವರನ್ನು ತವರಿಗೆ ಕಳುಹಿಸಿದ ನಂತರ ಇಂಗ್ಲೆಂಡ್‌ನ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿವೆ.

ಈ ರೀತಿ ಆಟಗಾರರನ್ನು ಸರಣಿಗಳಿಗೆ ಬದಲಾವಣೆ ಮಾಡುತ್ತಿರುವುದಕ್ಕೆ ಈಗಾಗಲೇ ಇಂಗ್ಲೆಂಡ್ ಮಾಜಿ ನಾಯಕರಾದ ಮೈಕಲ್ ವಾನ್, ನಾಸಿರ್ ಹುಸೇನ್​ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​ ವಿರುದ್ಧ ಕಿಡಿ ಕಾರಿದ್ದರು.

"ಬೆನ್​ ಸ್ಟೋಕ್ಸ್​, ಬೈರ್​ಸ್ಟೋವ್​ ಮತ್ತು ಜೋ ರೂಟ್​ ಮೂವರು ಇಂಗ್ಲೆಂಡ್ ತಂಡದಲ್ಲಿ ಸ್ಪಿನ್​ ಬೌಲಿಂಗ್​ಗೆ ಆಡುವುದರಲ್ಲಿ ಉತ್ತಮ ಬ್ಯಾಟ್ಸ್​ಮನ್​ಗಳು. ಇದೀಗ ಒಬ್ಬರಿಗೆ ಇಂಗ್ಲೆಂಡ್​ಗೆ ತೆರಳು ಬೋರ್ಡಿಂಗ್ ಪಾಸ್​ ನೀಡಿ, ಮತ್ತಿಬ್ಬರನ್ನು ಚೆನ್ನೈಗೆ ಕಳುಹಿಸಿರುವುದನ್ನ ಪುನರ್​ವಿಮರ್ಶೆ ಮಾಡಬೇಕಿದೆ" ಎಂದು ಹುಸೇನ್​ ಬುಧವಾರ ತಿಳಿಸಿದ್ದಾರೆ.

ಎರಡು ತಂಡಗಳ ಆರಂಭಿಕರ ಪ್ರದರ್ಶನ
ಎರಡು ತಂಡಗಳ ಆರಂಭಿಕರ ಪ್ರದರ್ಶನ

ಬೈರ್ಸ್ಟೋವ್​ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದಿದ್ದ ಕ್ರಾಲೆ ಮತ್ತೆ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಸಿಬ್ಲೇ ಮತ್ತು ಖಾಯಂ ಆರಂಭಿಕರಾಗಿರುವ ರೋನಿ ಬರ್ನ್ಸ್​ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

ಕ್ರಾಲೆ ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ 3ನೇ ಕ್ರಮಾಂಕದಲ್ಲಿ 2 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಅವರು ತವರಿನಲ್ಲಿ ಪಾಕಿಸ್ತಾನ ವಿರುದ್ಧ ಅದೇ ಕ್ರಮಾಂಕದಲ್ಲಿ ದ್ವಿಶತಕ ಸಿಡಿಸಿದ್ದರು. ನಂತರ ಬರ್ನ್ಸ್​ ವಿಶ್ರಾಂತಿ ಪಡೆದಿದ್ದರಿಂದ ಶ್ರೀಲಂಕಾ ವಿರುದ್ಧ ಆರಂಭಿಕರಾಗಿ ಬಡ್ತಿ ಪಡೆದರಾದರು ವೈಫಲ್ಯ ಅನುಭವಿಸಿದ್ದರು.

ಇದೀಗ ಬಲಿಷ್ಠ ಭಾರತ ತಂಡದೊಂದಿಗೆ ಕಣಕ್ಕಿಳಿಯುತ್ತಿದ್ದು, ಇಂಗ್ಲೆಂಡ್​ ತಂಡ ಅನಿವಾರ್ಯವಾಗಿ ಭಾರತ ಆಸ್ಟ್ರೇಲಿಯಾದಲ್ಲಿ ಆರಂಭಿಕರ ಸಮಸ್ಯೆಯನ್ನು ಬಗೆಹರಿಸಿಕೊಂಡ ರೀತಿಯಲ್ಲಿ ಬೇಗ ಸರಿಸಿಪಡಿಸಿಕೊಳ್ಳಬೇಕಿದೆ.

ಇನ್ನು ಆರಂಭಿಕರ ಸಮಸ್ಯೆಯನ್ನು ಹೊರೆತುಪಡಿಸಿದರೆ, ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕ ಭಾರತ ತಂಡದಷ್ಟೇ ಬಲಿಷ್ಠವಾಗಿದೆ. ಜೋ ರೂಟ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಬಟ್ಲರ್​, ಲಾರೆನ್ಸ್​ ಕೂಡ ಸರಾಸರಿ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಅಲ್ಲದೆ ಬೆನ್​ ಸ್ಟೋಕ್ಸ್​ ತಂಡಕ್ಕೆ ಆಗಮಿಸಿರುವುದರಿಂದ ಆರಂಭಿಕರ ಸಮಸ್ಯೆ ಸರಿಯಾದರೆ ಭಾರತಕ್ಕೆ ಖಂಡಿತ ಇಂಗ್ಲೆಂಡ್ ಟಕ್ಕರ್ ಕೊಡಲಿದೆ.

ಇದನ್ನು ಓದಿ:ಇಂಗ್ಲೆಂಡ್​ ವಿರುದ್ಧ ಪ್ರಾಬಲ್ಯ ಮುಂದುವರೆಸುವ ಆಲೋಚನೆಯಲ್ಲಿ ಕೊಹ್ಲಿ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.