ETV Bharat / sports

ಮಹಿಳಾ ಕ್ರಿಕೆಟರ್ ನಗ್ನ ದರ್ಶನ... ಬೆತ್ತಲೆ ಪೋಸ್​ಗೆ​ ಕಾರಣ ಕೊಟ್ಟ ವಿಕೆಟ್​ ಕೀಪರ್​ - cricketer Sarah Taylor

ಇಂಗ್ಲೆಂಡ್​ ಕ್ರಿಕೆಟ್​​ ಆಟಗಾರ್ತಿ ಸಾರಾ ಟೇಲರ್ ಅವರು ಅಭಿಯಾನವೊಂದರ ಭಾಗವಾಗಿದ್ದು, ಈ ಹಿನ್ನೆಲೆಯಲ್ಲಿ ಇನ್​ಸ್ಟಾಗ್ರಾಂನಲ್ಲಿ​ ಬೆತ್ತಲೆ ಫೋಟೊವೊಂದನ್ನು ಶೇರ್​​ ಮಾಡಿದ್ದಾರೆ.

ಸಾರಾ ಟೇಲರ್
author img

By

Published : Aug 16, 2019, 11:37 AM IST

ಹೈದರಾಬಾದ್​: ಇಂಗ್ಲೆಂಡ್​ ಸ್ಟಾರ್​ ಕ್ರಿಕೆಟ್​​ ಆಟಗಾರ್ತಿ, ವಿಕೆಟ್ ಕೀಪರ್​ ಸಾರಾ ಟೇಲರ್​ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿದ್ದರೂ, ಇನ್​ಸ್ಟಾಗ್ರಾಂನಲ್ಲಿ ಬೆತ್ತಲೆ ಫೋಟೊ ಶೇರ್​ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಸಾರಾ ಟೇಲರ್ ವಿಶ್ವದಾದ್ಯಂತ ಮಹಿಳೆಯರ ಆರೋಗ್ಯ ಸಮಸ್ಯೆಗಳ ಕುರಿತಾದ ಅಭಿಯಾನವೊಂದರಲ್ಲಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್​ಸ್ಟಾಗ್ರಾಂನಲ್ಲಿ ನಗ್ನವಾಗಿರುವ ಫೋಟೊ ಹರಿಬಿಟ್ಟಿರುವ ಸಾರಾ, ಫೋಟೊ ಪೋಸ್ಟ್​ ಮಾಡಿರುವುದು ಸುಲಭವಾಗಿರಲಿಲ್ಲ. ಆದರೆ ಅಭಿಯಾನದಲ್ಲಿ ಭಾಗಿಯಾಗಿರುವ ಸಂತಸ ತನಗಿದೆ ಎಂದು ಬರೆದುಕೊಂಡಿದ್ದಾರೆ.

ನನ್ನ ದೇಹದಲ್ಲಿ ಯಾವಾಗಲೂ ಕೆಲವು ಸಮಸ್ಯೆಗಳಿವೆ. ಈ ಅಭಿಯಾನದ ಭಾಗವಾಗಲು ನಾನು ಕೆಲವನ್ನು ಗೆಲ್ಲಬೇಕಾಯಿತು. ಪ್ರತಿ ಹುಡುಗಿಯೂ ಕೂಡ ಸೌಂದರ್ಯ ಹೊಂದಿರುತ್ತಾಳೆ. ಪ್ರತಿವೋರ್ವ ಮಹಿಳೆಯೂ ಸುಂದರವಾಗಿರುತ್ತಾಳೆ. ಈ ಅಭಿಯಾನದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನು ಸಸೆಕ್ಸ್​​ ಕ್ರಿಕೆಟರ್ ಸಾರಾ, 17ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಪಾದಾರ್ಪಣೆ ಮಾಡಿದ್ದರು. 2013ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಬ್ರೇಕ್​ ಪಡೆದಿದ್ದಾರೆ.

Intro:Body:

England woman cricketrer Sarah Taylor bares it all for a social cause

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.