ಮಾಂಚೆಸ್ಟರ್ : ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಆಯೋಜನೆಗೊಂಡಿದ್ದ ಇಂಗ್ಲೆಂಡ್ ಹಾಗೂ ಪ್ರವಾಸಿ ಪಾಕಿಸ್ತಾನ ತಂಡಗಳ ನಡುವಿನ ಮೊದಲ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಮಳೆ ಹಿನ್ನೆಲೆ ಕೇವಲ 16.1 ಓವರ್ಗಳ ಆಟದೊಂದಿಗೆ ರದ್ದಾಗಿದೆ.
-
Banton shines ☀️ despite the rain ☔
— England Cricket (@englandcricket) August 28, 2020 " class="align-text-top noRightClick twitterSection" data="
Full highlights: https://t.co/nstWRlYH2f#ENGvPAK pic.twitter.com/DSzBBfQ1pH
">Banton shines ☀️ despite the rain ☔
— England Cricket (@englandcricket) August 28, 2020
Full highlights: https://t.co/nstWRlYH2f#ENGvPAK pic.twitter.com/DSzBBfQ1pHBanton shines ☀️ despite the rain ☔
— England Cricket (@englandcricket) August 28, 2020
Full highlights: https://t.co/nstWRlYH2f#ENGvPAK pic.twitter.com/DSzBBfQ1pH
ಟಾಸ್ ಗೆದ್ದ ಪಾಕಿಸ್ತಾನ ಅತಿಥೇಯ ಆಂಗ್ಲರನ್ನು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಇಂಗ್ಲೆಂಡ್ ಆರಂಭದಲ್ಲೇ ಜಾನಿ ಬೇರ್ಸ್ಟೋವ್ (2) ವಿಕೆಟ್ ಕಳೆದುಕೊಂಡಿತ್ತು. ಆದರೆ ಮತ್ತೊಬ್ಬ ಆರಂಭಿಕ ಆಟಗಾರ ಟಾಮ್ ಬಾಂಟನ್ ಅರ್ಧಶತಕ (72) ನೆರವಿನಿಂದ ಉತ್ತಮ ಮೊತ್ತ ಗಳಿಸುವತ್ತ ಸಾಗಿತ್ತು.
ಆದರೆ ವರುಣನ ಕಾಟದಿಂದ 16.1 ಓವರ್ ಬಳಿಕ ಆಟ ಮುಂದುವರೆಯಲಿಲ್ಲ. ಈ ವೇಳೆ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು 131 ರನ್ ಪೇರಿಸಿತ್ತು. ಪಾಕ್ ಪರ ಇಮಾದ್ ವಾಸಿಂ ಹಾಗೂ ಶದಾಬ್ ಖಾನ್ ತಲಾ ಎರಡು ವಿಕೆಟ್ ಪಡೆದಿದ್ದರು.
-
Match abandoned ☔ 😞
— England Cricket (@englandcricket) August 28, 2020 " class="align-text-top noRightClick twitterSection" data="
🙏 for ☀ on Sunday!#ENGvPAK pic.twitter.com/C3LZ7M2n4O
">Match abandoned ☔ 😞
— England Cricket (@englandcricket) August 28, 2020
🙏 for ☀ on Sunday!#ENGvPAK pic.twitter.com/C3LZ7M2n4OMatch abandoned ☔ 😞
— England Cricket (@englandcricket) August 28, 2020
🙏 for ☀ on Sunday!#ENGvPAK pic.twitter.com/C3LZ7M2n4O
ಮೂರು ಪಂದ್ಯಗಳ ಟಿ-20 ಕ್ರಿಕೆಟ್ ಸರಣಿಯ ಮುಂದಿನ ಪಂದ್ಯ ಇದೇ ಮೈದಾನದಲ್ಲಿ ನಾಳೆ ಆ.30ರಂದು ನಡೆಯಲಿದೆ. ಇದಕ್ಕೂ ಮುನ್ನ ನಡೆದ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಇಂಗ್ಲೆಂಡ್ 1-0 ಅಂತರದಿಂದ ಗೆದ್ದಿತ್ತು.