ಪುಣೆ: ಭಾರತ ವಿರುದ್ಧ ಇಂಗ್ಲೆಂಡ್ ತಂಡ ಮೂರನೇ ಏಕದಿನ ಪಂದ್ಯದಲ್ಲಿ 7 ರನ್‌ಗಳ ಸೋಲು ಅನುಭವಿಸಿತು. ಈ ಬಳಿಕ ಮಾತನಾಡಿದ ಇಂಗ್ಲೆಂಡ್ ತಂಡದ ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಜೋಸ್ ಬಟ್ಲರ್, "ಭಾರತ ಸುಲಭವಾಗಿ ಗೆಲುವು ಪಡೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ, ಇಂಗ್ಲೆಂಡ್ ಯುವ ಆಲ್‌ರೌಂಡರ್ ಸ್ಯಾಮ್ ಕರ್ರನ್ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದರು" ಎಂದು ಗುಣಗಾನ ಮಾಡಿದ್ದಾರೆ.
330 ರನ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ತಂಡ ಒಂದು ಹಂತದಲ್ಲಿ 168 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಅದ್ಭುತವಾಗಿ ಬ್ಯಾಟ್ ಮಾಡಿದ ಸ್ಯಾಮ್ ಕರ್ರನ್ 83 ಎಸೆತಗಳಲ್ಲಿ ಅಜೇಯ 95 ರನ್ ಗಳಿಸಿದರು.
-
95* runs 🔥
— ICC (@ICC) March 28, 2021 " class="align-text-top noRightClick twitterSection" data="
83 balls 🏏
9 fours 👏
3 sixes 🌟
England fell just short, but what a performance that was from Sam Curran! #INDvENG pic.twitter.com/JTBfKB9q0o
">95* runs 🔥
— ICC (@ICC) March 28, 2021
83 balls 🏏
9 fours 👏
3 sixes 🌟
England fell just short, but what a performance that was from Sam Curran! #INDvENG pic.twitter.com/JTBfKB9q0o95* runs 🔥
— ICC (@ICC) March 28, 2021
83 balls 🏏
9 fours 👏
3 sixes 🌟
England fell just short, but what a performance that was from Sam Curran! #INDvENG pic.twitter.com/JTBfKB9q0o
"ಎರಡೂ ತಂಡಗಳು ಕೆಲ ತಪ್ಪುಗಳನ್ನು ಮಾಡಿದ ಹೊರತಾಗಿಯೂ ಪಂದ್ಯ ಅದ್ಭುತವಾಗಿ ನಡೆದಿದೆ. ಒಂದು ಹಂತದಲ್ಲಿ ಅಪಾಯಕ್ಕೆ ಸಿಲುಕಿದ್ದ ತಮಗೆ ಸ್ಯಾಮ್ ಕರ್ರನ್ ಗೆಲುವಿನ ಭರವಸೆ ಮೂಡಿಸಿದರು. ಆದರೆ, ಸರಣಿ ಗೆದ್ದ ಭಾರತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಸರಣಿಯಲ್ಲಿ ಸಾಕಷ್ಟು ಕಲಿತಿದ್ದೇವೆ" ಎಂದು ಹೇಳಿದರು.
ಇದನ್ನು ಓದಿ: ಎಕ್ಸ್ಕ್ಲ್ಯೂಸಿವ್.. ಮಹಿ ಭಾಯ್ ಜತೆ ಸಾಕಷ್ಟು ನೆನಪುಗಳಿವೆ, ಮತ್ತೆ ಅವರ ನಾಯಕತ್ವದಲ್ಲಿ ಆಡುವ ಬಯಕೆ : ಪೂಜಾರ
"ಸ್ಯಾಮ್ ಸಾಟಿಯಿಲ್ಲದ ಇನ್ನಿಂಗ್ಸ್ ಆಡಿದರು ಮತ್ತು ಪಂದ್ಯ ಸೋತ ನಿರಾಸೆ ಇದ್ದರೂ, ಇದು ಮತ್ತಷ್ಟು ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ. ಕೊನೆಯ ಕ್ಷಣಗಳಲ್ಲಿ ಪಂದ್ಯವನ್ನು ರೋಚಕ ತಿರುವು ಪಡೆಯಲು ಸ್ಯಾಮ್ ಆಡಿದ ಆಟ ಹೆಮ್ಮೆ ಮೂಡಿಸಿದೆ. ಅಷ್ಟೇ ಅಲ್ಲದೆ, ಕ್ರಿಕೆಟ್ ದಿಗ್ಗಜ ಧೋನಿ ಆಟದ ಛಾಯೆ ಇಲ್ಲಿ ಒಂದು ಬಾರಿ ಕಂಡು ಬಂತು" ಎಂದರು.
"ಈ ವೇಗದ ಬೌಲಿಂಗ್ ಆಲ್‌ರೌಂಡರ್ ತಮ್ಮ ವೃತ್ತಿಜೀವನದ ಅತ್ಯಧಿಕ ಸ್ಕೋರ್ ಗಳಿಸಿದ್ದು ಮಾತ್ರವಲ್ಲದೇ, ಬಲಿಷ್ಠನಾದ ರಿಷಭ್ ಪಂತ್ ಅವರನ್ನು ಔಟ್ ಮಾಡಿದರು. ಸ್ಯಾಮ್ ಅವರು ನಿಜವಾಗಿಯೂ ಪಂದ್ಯ ವಿಜೇತರು. ಸ್ಯಾಮ್ ತೋರಿಸಿದ ಆಟದ ಬಗ್ಗೆ ನಮಗೆ ನಿಜಕ್ಕೂ ಹೆಮ್ಮೆ ಇದೆ'' ಎಂದು ಬಣ್ಣಿಸಿದರು.