ಅಹ್ಮದಾಬಾದ್: ಭಾರತದೆದುರು ಅಹ್ಮದಾಬಾದ್ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ ಬೌಲಿಂಗ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ತಂಡ ಕೇವಲ 112 ರನ್ಗಳಿಗೆ ಆಲೌಟ್ ಆಗಿದೆ.
ಭಾರತದ ನೆಲದಲ್ಲಿ ಆಡುತ್ತಿರುವ 2ನೇ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಗಳು ಆಂಗ್ಲ ಬ್ಯಾಟ್ಸ್ಮನ್ಗಳ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಅದರಲ್ಲೂ ಸ್ಥಳೀಯ ಹುಡುಗ ಅಕ್ಸರ್ ಪಟೇಲ್ ಕೇವಲ 38 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರೆ, ಅನುಭವಿ ಅಶ್ವಿನ್ 3 ವಿಕೆಟ್ ಪಡೆದು ಪಟೇಲ್ಗೆ ಸಾಥ್ ನೀಡಿದರು.
ಕೇವಲ 48.4 ಓವರ್ಗಳಲ್ಲಿ ಇಂಗ್ಲೆಂಡ್ 112 ರನ್ಗಳಿಗೆ ಸರ್ವಪತನಗೊಂಡಿತು. ಇದು ಆಂಗ್ಲರ ತಂಡ ಭಾರತದೆದುರು ದಾಖಲಿಸಿದ 4ನೇ ಕನಿಷ್ಠ ಮೊತ್ತವಾಯಿತು. 1971ರಲ್ಲಿ ಓವೆಲ್ನಲ್ಲಿ 101 ರನ್ಗಳಿಗೆ ಆಲೌಟ್ ಆಗಿದ್ದು, ಇಲ್ಲಿಯವರೆಗಿನ ಕನಿಷ್ಠ ಮೊತ್ತವಾಗಿತ್ತು. ಇಂದಿನ ಮೊತ್ತ ಇಂಗ್ಲೆಂಡ್ ತಂಡ ಭಾರತದೆದುರು ಗಳಿಸಿದ 4ನೇ ಕನಿಷ್ಠ ಮೊತ್ತವಾಗಿದೆ.
ಭಾರತದೆದುರು ಇಂಗ್ಲೆಂಡ್ ತಂಡದ ಕನಿಷ್ಠ ಮೊತ್ತಗಳು
- 101 ದಿ ಓವೆಲ್ 1971
- 102 ಮುಂಬೈ 1979-80
- 102 ಲೀಡ್ಸ್ 1986
- 112 ಅಹ್ಮದಾಬಾದ್ 2020-21
- 128 ಲೀಡ್ಸ್ 1986