ಕೇಪ್ ಟೌನ್: ಇತ್ತೀಚೆಗೆ ಮುಕ್ತಾಯಗೊಂಡ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ವೈಟ್‌ವಾಶ್ ಮಾಡಿದ ಇಂಗ್ಲೆಂಡ್ ತಂಡ ಐಸಿಸಿ ಟಿ- 20 ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದೆ.
-
🔝 of the rankings! 🏴
— ICC (@ICC) December 1, 2020 " class="align-text-top noRightClick twitterSection" data="
England's clean sweep of South Africa has put them above Australia in the @MRFWorldwide ICC T20I Team Rankings 👏🎉 pic.twitter.com/sN7ZyU9xw5
">🔝 of the rankings! 🏴
— ICC (@ICC) December 1, 2020
England's clean sweep of South Africa has put them above Australia in the @MRFWorldwide ICC T20I Team Rankings 👏🎉 pic.twitter.com/sN7ZyU9xw5🔝 of the rankings! 🏴
— ICC (@ICC) December 1, 2020
England's clean sweep of South Africa has put them above Australia in the @MRFWorldwide ICC T20I Team Rankings 👏🎉 pic.twitter.com/sN7ZyU9xw5
ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 3-0 ಮೂಲಕ ಸರಣಿ ಗೆಲುವು ಸಾಧಿಸಿದೆ. ಇಯಾನ್ ಮೋರ್ಗಾನ್ ನೇತೃತ್ವದ ಆಂಗ್ಲರ ಪಡೆ 2018ರ ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಟಿ-20 ಕ್ರಿಕೆಟ್ನಲ್ಲಿ ಎಲ್ಲಾ ಸರಣಿಗಳನ್ನು ಗೆದ್ದು ಬೀಗಿದೆ. ಇಂಗ್ಲೆಂಡ್ ತಂಡವು ಏಕದಿನ ವಿಭಾಗದ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಟೆಸ್ಟ್ ಪಾರ್ಮೆಟ್ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಟಿ-20 ಫಾರ್ಮೆಟ್ನಲ್ಲಿ ಆಸ್ಟ್ರೇಲಿಯಾ ತಂಡವು ಎರಡನೇ ಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳಿವೆ.
ಓದಿ: ಅಂತಿಮ ಏಕದಿನ ಪಂದ್ಯ: ಆಸೀಸ್ಗೆ 303 ರನ್ಗಳ ಟಾರ್ಗೆಟ್ ನೀಡಿದ ಟೀಂ ಇಂಡಿಯಾ
ಟಿ-20ಯಲ್ಲಿ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್ ಆಟಗಾರ ಡೇವಿಡ್ ಮಲನ್ ಅಗ್ರಸ್ಥಾನದಲ್ಲಿದ್ದು, ಬಾಬರ್ ಅಜಮ್, ಆ್ಯರೋನ್ ಫಿಂಚ್ ಮತ್ತು ಕೆ.ಎಲ್.ರಾಹುಲ್ ನಂತರದ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಶ್ರೇಯಾಂಕದಲ್ಲಿ ರಶೀದ್ ಖಾನ್ ಅಗ್ರ ಶ್ರೇಯಾಂಕದಲ್ಲಿದ್ದರೆ, ಮುಜೀಬ್ ಉರ್ ರಹಮಾನ್ ಮತ್ತು ಆಷ್ಟನ್ ಅಗರ್ ನಂತರದ ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೊಹಮ್ಮದ್ ನಬಿ ನಂಬರ್ ಒನ್ ಸ್ಥಾನದಲ್ಲಿದ್ದರೆ, ಶಕೀಬ್ ಅಲ್ ಹಸನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ನಂತರದ ಸ್ಥಾನದಲ್ಲಿದ್ದಾರೆ.