ಲಂಡನ್ : ಭಾರತದ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಗಾಗಿ ಇಸಿಬಿ 14 ಸದಸ್ಯರ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದೆ. ಪುಣೆಯಲ್ಲಿ ಮಾರ್ಚ್ 23ರಿಂದ ಏಕದಿನ ಸರಣಿ ಆರಂಭವಾಗಲಿದೆ.
ಅಹ್ಮದಾಬಾದ್ನಲ್ಲಿ ನಡೆದ 5 ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ 3-2ರಲ್ಲಿ ಗೆದ್ದು ಬೀಗಿದೆ. ಇದೀಗ ಮೂರು ಪಂದ್ಯಗಳ ಟಿ20 ಸರಣಿ ಪುಣೆಯಲ್ಲಿ ನಡೆಯಲಿದೆ.
ನಾಟಿಂಗ್ಹ್ಯಾಮ್ಶೈರ್ ತಂಡದ ಜಾಕ್ ಬಾಲ್, ಸಸೆಕ್ಸ್ ಆಲ್ರೌಂಡರ್ ಕ್ರಿಸ್ ಜೋರ್ಡನ್ ಮತ್ತು ಟಿ20 ತಂಡದ ನಂಬರ್ ಒನ್ ಪ್ಲೇಯರ್ ಡೇವಿಡ್ ಮಲನ್ ಕೂಡ ಏಕದಿನ ತಂಡದ ಜತೆಯಲ್ಲಿ ರಿಸರ್ವ್ ಆಟಗಾರರಾಗಿ ಪುಣೆಗೆ ಆಗಮಿಸಿದ್ದಾರೆ.
ಆದರೆ, ವೇಗಿ ಜೋಫ್ರಾ ಆರ್ಚರ್ ತವರಿಗೆ ಮರಳಿದ್ದಾರೆ. ಅವರು ಟೆಸ್ಟ್ ಸರಣಿ ವೇಳೆ ಮೊಣಕೈ ಗಾಯಕ್ಕೆ ತುತ್ತಾಗಿದ್ದರು. ಅದರ ಬಗ್ಗೆ ಹೆಚ್ಚಿನ ಮೌಲ್ಯಮಾಪನಕ್ಕಾಗಿ ಅವರು ಇಂಗ್ಲೆಂಡ್ಗೆ ತೆರಳಿದ್ದಾರೆ.
ಭಾರತ ವಿರುದ್ಧದ ಮುಕ್ತಾಯದ ಟಿ20 ಸರಣಿಯಲ್ಲಿ ಆಡಿದ್ದ ಆರ್ಚರ್ ಗಾಯದ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಹಾಗಾಗಿ ಅವರನ್ನು ಏಕದಿನ ಸರಣಿಗೆ ಸೂಕ್ತವೆಂದು ಪರಿಗಣಿಸಲಾಗಿಲ್ಲ ಎಂದು ಇಸಿಬಿಯ ಅಧಿಕೃತ ವೆಬ್‌ಸೈಟ್ ತಿಳಿಸಿದೆ.
ಅಲ್ಲದೆ ಏಪ್ರಿಲ್ 9ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರಂಭಿಕ ಪಂದ್ಯಗಳನ್ನು ಸಹ ಆರ್ಚರ್ ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿ ಹೇಳಿದೆ.
ಇಂಗ್ಲೆಂಡ್‌ನ 14 ಮಂದಿಯ ಏಕದಿನ ತಂಡ : ಇಯೊನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜೊನಾಥನ್ ಬೈರ್ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಟಾಮ್ ಕುರ್ರನ್, ಲಿಯಾಮ್ ಲಿವಿಂಗ್‌ಸ್ಟೋನ್, ಮ್ಯಾಟ್ ಪಾರ್ಕಿನ್ಸನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲಿ, ಮಾರ್ಕ್ ವುಡ್
ಜೇಕ್ ಬಾಲ್ (ನಾಟಿಂಗ್ಹ್ಯಾಮ್ಶೈರ್), ಕ್ರಿಸ್ ಜೋರ್ಡಾನ್ (ಸಸೆಕ್ಸ್), ಡೇವಿಡ್ ಮಲನ್ (ಯಾರ್ಕ್ಷೈರ್).