ಲಾರ್ಡ್ಸ್: ಐರ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಕೇವಲ 85 ರನ್ನಿಗೆ ಆಲೌಟ್ ಆಗುವ ಮೂಲಕ ಹೀನಾಯ ಪ್ರದರ್ಶನ ತೋರಿದ್ದು, ಈ ಸಂಬಂಧ ಆಂಗ್ಲರ ಮಾಜಿ ನಾಯಕ ಮೈಕಲ್ ವಾನ್ ಪ್ರತಿಕ್ರಿಯಿಸಿದ್ದಾರೆ.
ಇಂಗ್ಲೆಂಡ್ ತಂಡದ ಕಳಪೆ ಬ್ಯಾಟಿಂಗ್ ನೋಡಿ ನಿಜಕ್ಕೂ ಮುಜುಗರವಾಗಿದೆ ಎಂದು ಮೈಕಲ್ ವಾನ್ ಹೇಳಿದ್ದಾರೆ.
ವಿಶ್ವಚಾಂಪಿಯನ್ ಇಂಗ್ಲೆಂಡ್ ತಂಡವನ್ನು 85 ಕ್ಕೆ ಆಲೌಟ್ ಮಾಡಿದ ಐರ್ಲೆಂಡ್!
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ 23.4 ಓವರ್ನಲ್ಲಿ ಭೋಜನ ವಿರಾಮಕ್ಕೂ ಮುನ್ನವೇ 85 ರನ್ನಿಗೆ ಸರ್ವಪತನ ಕಂಡಿತ್ತು. ಐರ್ಲೆಂಡ್ 207 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ್ದು ಈ ಮೂಲಕ 122 ರನ್ಗಳ ಮುನ್ನಡೆ ಪಡೆದಿದೆ.
ವಿಶ್ವಕಪ್ ಗೆದ್ದ ಹತ್ತೇ ದಿನದಲ್ಲಿ ಚಾಂಪಿಯನ್ ತಂಡ ಇಷ್ಟೊಂದು ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.