ಲಂಡನ್: ಲಾರ್ಡ್ಸ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಐರ್ಲೆಂಡ್ ತಂಡದ ಬೌಲರ್ಗಳ ದಾಳಿಗೆ ತತ್ತರಿಸಿದ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಕೇವಲ 85 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಪ್ರದರ್ಶನ ತೋರಿದೆ.
ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ಕೇವಲ 10 ದಿನಗಳ ಅಂತರದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲೀ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ 23.4 ಓವರ್ಗಳಲ್ಲಿ ಕೇವಲ 85 ರನ್ಗಳಿಗೆ ಸರ್ವ ಪತನ ಕಂಡಿದೆ. ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದ ರೋನಿ ಬರ್ನ್ಸ್ 6, ಜೇಸನ್ ರಾಯ್ 5 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಕಳಪೆ ಆರಂಭ ನೀಡಿದರು.
ನಂತರ ಬಂದ ಜೋ ಡೆನ್ಲಿ 23 ರನ್ ಗಳಿಸಿ ಔಟಾದರೆ, ನಾಯಕ ರೂಟ್ 2 ರನ್ಗೆ ಸೀಮಿತವಾದರು. ಬೈರ್ಸ್ಟೋವ್, ಮೊಯಿನ್ ಅಲಿ ಹಾಗೂ ಕ್ರಿಸ್ ವೋಕ್ಸ್ ಸೊನ್ನೆಗೆ ವಿಕೆಟ್ ಒಪ್ಪಿಸಿದರು. ಆಲ್ರೌಂಡರ್ ಸ್ಯಾಮ್ ಕರ್ರನ್ 18, ಸ್ಟುವರ್ಡ್ ಬ್ರಾಡ್ 3, ಒಲ್ಲಿ ಸ್ಟೋನ್ 19 ರನ್ಗೆ ವಿಕೆಟ್ ಒಪ್ಪಿಸಿದರು.
ಐರ್ಲೆಂಡ್ ಪರ ಟಿಮ್ ಮುಟರ್ಗ್ 13 ರನ್ ನೀಡಿ 5 ವಿಕೆಟ್ ಪಡೆದು ಇಂಗ್ಲೆಂಡ್ ತಂಡ ಸರ್ವ ಪತನಕ್ಕೆ ಕಾರಣರಾದರು. ಮಾರ್ಕ್ ಆದೈರ್ 32 ರನ್ಗೆ 3 ವಿಕೆಟ್ ಹಾಗೂ ರಂಕಿನ್ 2 ವಿಕೆಟ್ ಪಡೆದು ಮಿಂಚಿದರು.
-
85 ALL OUT!
— ICC (@ICC) July 24, 2019 " class="align-text-top noRightClick twitterSection" data="
It's been a dreamlike morning for Ireland. Five wickets for the brilliant Murtagh, three for Adair and Rankin with two.
FOLLOW #ENGvIRE 👇 https://t.co/fyHbjx2IoF pic.twitter.com/qNVtXl40VX
">85 ALL OUT!
— ICC (@ICC) July 24, 2019
It's been a dreamlike morning for Ireland. Five wickets for the brilliant Murtagh, three for Adair and Rankin with two.
FOLLOW #ENGvIRE 👇 https://t.co/fyHbjx2IoF pic.twitter.com/qNVtXl40VX85 ALL OUT!