ಸೌತಾಂಪ್ಟನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ ಆರಂಭಿಕ ಆಘಾತ ಅನುಭವಿಸಿದೆ.
ರೋಜ್ ಬೌಲ್ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ ಪಾಕಿಸ್ತಾನ 33.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 85 ರನ್ ಗಳಿಸಿದೆ.
ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಅದ್ಭುತ ಶತಕ ಸಿಡಿಸಿದ್ದ ಶಾನ್ ಮಸೂದ್ ಕೇವಲ 5 ಎಸೆತಗಳನ್ನೆದುರಿಸಿ 1 ರನ್ಗೆ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.
-
💥 Masood lbw Anderson
— ICC (@ICC) August 13, 2020 " class="align-text-top noRightClick twitterSection" data="
💥 Azhar c Burns b Anderson
Jimmy Anderson has claimed both wickets to fall so far today 💪 #ENGvPAKpic.twitter.com/eBQptPT5L0
">💥 Masood lbw Anderson
— ICC (@ICC) August 13, 2020
💥 Azhar c Burns b Anderson
Jimmy Anderson has claimed both wickets to fall so far today 💪 #ENGvPAKpic.twitter.com/eBQptPT5L0💥 Masood lbw Anderson
— ICC (@ICC) August 13, 2020
💥 Azhar c Burns b Anderson
Jimmy Anderson has claimed both wickets to fall so far today 💪 #ENGvPAKpic.twitter.com/eBQptPT5L0
ನಂತರ ಬಂದ ನಾಯಕ ಅಜರ್ ಅಲಿ (20), ಆರಂಭಿಕ ಅಬಿದ್ ಅಲಿ ಜೊತೆಗೂಡಿ 72 ರನ್ಗಳ ಜೊತೆಯಾಟ ನಡೆಸಿ ತಂಡದ ಮೊತ್ತಕ್ಕೆ ಚೇತರಿಕೆ ನೀಡಿದರು. ಆದರೆ ಭೋಜನ ವಿರಾಮದ ನಂತರ ಬ್ಯಾಟಿಂಗ್ ಆರಂಭಿಸಿದ ಅಜರ್ ಒಂದೂ ರನ್ ಗಳಿಸದೆ 20 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಪಾಕ್ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆ ಮೂಡಿಸಿದರು.
ಸದ್ಯಕ್ಕೆ ಮಳೆಯಿಂದ ಪಂದ್ಯ ಸ್ಥಗಿತಗೊಂಡಿದೆ. ಅಬಿದ್ ಅಲಿ 98 ಎಸೆತಗಳನ್ನೆದುರಿಸಿ 6 ಬೌಂಡರಿ ಸಹಿತ 49 ರನ್ ಹಾಗೂ ಬಾಬರ್ ಅಜಮ್ 7 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ಮೊದಲ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ತಂಡ ಇಂದಿನ ಪಂದ್ಯದಲ್ಲಿ 2 ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಬೆನ್ ಸ್ಟೋಕ್ಸ್ ಬದಲಿಗೆ ಜಾಕ್ ಕ್ರೇವ್ಲೀ ಹಾಗೂ ಜೋಫ್ರಾ ಆರ್ಚರ್ ಬದಲು ಸ್ಯಾಮ್ ಕರ್ರನ್ ಅವಕಾಶ ಪಡೆದಿದ್ದಾರೆ.
ಇಂಗ್ಲೆಂಡ್
ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಕಾಕ್ ಕ್ರೇಲೆ, ಜೋ ರೂಟ್ (ನಾಯಕ), ಒಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಸ್ಯಾಮ್ ಕರ್ರನ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಪಾಕಿಸ್ತಾನ
ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ನಾಯಕ), ಬಾಬರ್ ಅಜಮ್, ಅಸಾದ್ ಶಫೀಕ್, ಫವಾದ್ ಆಲಮ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಯಾಸಿರ್ ಶಾ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ, ನಸೀಮ್ ಶಾ