ಸೌತಾಂಪ್ಟನ್: ಸ್ಪಿನ್ ಬೌಲರ್ಗಳ ಬಲ ಹಾಗೂ ಶಿಸ್ತಿನ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ 3ನೇ ಟಿ20 ಪಂದ್ಯವನ್ನು ಗೆದ್ದು ವೈಟ್ವಾಷ್ ಅಪಮಾನದಿಂದ ಪಾರಾಗಿದೆ.
ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 146 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 19.3 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಆದರೆ ಸರಣಿಯನ್ನು ಇಂಗ್ಲೆಂಡ್ ತಂಡ 201ರಲ್ಲಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇಂಗ್ಲೆಂಡ್ ಪರ ಜಾನಿ ಬೈರ್ಸ್ಟೋವ್ 55, ಮಲನ್ 21, ಮೊಯಿನ್ 23 ಹಾಗೂ ಜೋ ಡೆನ್ಲಿ 29 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಆಸೀಸ್ ಪರ ಜಂಪಾ 2 ವಿಕೆಟ್ ಪಡೆದರೆ, ಅಶ್ಟನ್ ಅಗರ್, ಕೇನ್ ರಿಚರ್ಡ್ಸನ್, ಹೇಜಲ್ವುಡ್ ಹಾಗೂ ಸ್ಟಾರ್ಕ್ ತಲಾ ಒಂದು ವಿಕೆಟ್ ಪಡೆದರು.
146 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ನಾಯಕ ಫಿಂಚ್ (39)ಹಾಗೂ ಮಿಚೆಲ್ ಮಾರ್ಷ್(39) ಹಾಗೂ ಸ್ಟೋಯ್ನಿಸ್ರ (29) ಶಿಸ್ತಿನ ಬ್ಯಾಟಿಂಗ್ ನೆರವಿನಿಂದ ಇನ್ನು ಮೂರು ಎಸೆತಗಳಿರುವಂತೆ ಗೆಲುವು ಸಾಧಿಸಿತು.
ಮಿಚೆಲ್ ಮಾರ್ಷ್ ಪಂದ್ಯ ಶ್ರೇಷ್ಠ ಹಾಗೂ ಜೋಸ್ ಬಟ್ಲರ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.