ETV Bharat / sports

ಐಪಿಎಲ್​ ವೀಕ್ಷಣೆಗೆ ಶೇ 30 ರಿಂದ 50ರಷ್ಟು ಅಭಿಮಾನಿಗಳಿಗೆ ಅವಕಾಶ​ ಸಾಧ್ಯತೆ - ದುಬೈ ಸರ್ಕಾರ

ದುಬೈ ಕ್ರಿಕೆಟ್​ ಮಂಡಳಿ ಕಾರ್ಯದರ್ಶಿ ಮುಬಾಶೀರ್​​ ಉಸ್ಮಾನಿ ಮಾತನಾಡಿದ್ದು, ಮೈದಾನಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಶೇ.30ರಿಂದ 50ರಷ್ಟು ಕ್ರೀಡಾಭಿಮಾನಿಗಳಿಗೆ ಅವಕಾಶ ನೀಡುವ ವಿಚಾರವಾಗಿ ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ.

Emirates Cricket Board
Emirates Cricket Board
author img

By

Published : Jul 31, 2020, 9:00 PM IST

ದುಬೈ: ಸೆಪ್ಟೆಂಬರ್​ 19ರಿಂದ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ ಆರಂಭಗೊಳ್ಳಲಿದ್ದು, ಅದಕ್ಕಾಗಿ ವೀಕ್ಷಕರಿಗೆ ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಯುಎಇ ಸರ್ಕಾರ ಟೂರ್ನಮೆಂಟ್​ ವೀಕ್ಷಿಸಲು ಶೇ.30ರಿಂದ 50ರಷ್ಟು ಅಭಿಮಾನಿಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ದುಬೈ ಕ್ರಿಕೆಟ್​ ಮಂಡಳಿ ಕಾರ್ಯದರ್ಶಿ ಮುಬಾಶೀರ್​​ ಉಸ್ಮಾನಿ ಮಾತನಾಡಿದ್ದು, ಮೈದಾನಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಶೇ.30ರಿಂದ 50ರಷ್ಟು ಕ್ರೀಡಾಭಿಮಾನಿಗಳಿಗೆ ಅವಕಾಶ ನೀಡುವ ವಿಚಾರವಾಗಿ ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ.

ಐಪಿಎಲ್​ ವೇಳಾಪಟ್ಟಿ ವಿಚಾರವಾಗಿ ಬಿಸಿಸಿಐ ನಾಳೆ ಆಡಳಿತ ಮಂಡಳಿ ಸಭೆ ನಡೆಸಲಿದ್ದು, ಕೆಲವೇ ದಿನಗಳಲ್ಲಿ ಪಂದ್ಯಗಳ ವೇಳಾಪಟ್ಟಿ ರಿಲೀಸ್​ ಆಗುವ ಸಾಧ್ಯತೆ ಇದೆ.

2014ರಲ್ಲೂ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದ ಕಾರಣ ದುಬೈನಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ನಡೆಸಲಾಗಿತ್ತು. ಇದೀಗ ಮತ್ತೊಮ್ಮೆ ಅಲ್ಲಿಯೇ ಟೂರ್ನಮೆಂಟ್​ ನಡೆಸಲು ಬಿಸಿಸಿಐ ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.