ಢಾಕಾ: ಭಾರತ ಹಾಗೂ ಪಾಕಿಸ್ತಾನ ನಡುವಿನ ಎಮರ್ಜಿಂಗ್ ಏಷ್ಯಾ ಕಪ್ ಸೆಮಿಪೈನಲ್ ಪಂದ್ಯದಲ್ಲಿ ಭಾರತ ತಂಡ ರೋಚಕ ಸೋಲನುಭವಿಸಿದೆ. ಈ ಮೂಲಕ ಪ್ರಶಸ್ತಿಯ ಕನಸು ಭಗ್ನವಾಗಿದೆ.
ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 7 ವಿಕೆಟ್ ನಷ್ಟಕ್ಕೆ 267 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ಪಾಕಿಸ್ತಾನ ಪರ ಆರಂಭಿಕ ಆಟಗಾರ ಒಮೈರ್ ಯೂಸುಫ್ 66, ಹೈದರ್ ಅಲಿ 43, ಸೈಫ್ ಬದರ್ 47 ರನ್ ಕಲೆ ಹಾಕಿ ತಂಡಕ್ಕೆ ನೆರವಾದರು. ಭಾರತದ ಪರ ಶಿವಂ ಮಾವಿ, ಎಸ್. ದುಬೆ, ಹೆಚ್ ಶೊಕೀನ್ ತಲಾ 2 ವಿಕೆಟ್ ಹಂಚಿಕೊಂಡರು.
ಗೆಲ್ಲೋ ಪಂದ್ಯ ಕೈಚೆಲ್ಲಿದ ಭಾರತ...!
268 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭವೇ ದೊರೆತಿತ್ತು. ನಾಯಕ ಶರತ್ 47, ಸನ್ವಿರ್ ಸಿಂಗ್ 76, ಅರ್ಮಾನ್ ಜಫರ್ 46 ಕಾಣಿಕೆ ತಂಡದಲ್ಲಿ ಗೆಲುವಿನ ಉತ್ಸಾಹ ಮೂಡಿಸಿತ್ತು. ಆದರೆ, ಕೊನೆಯಲ್ಲಿ ವಿಕೆಟ್ ಕಳೆದುಕೊಳ್ಳುತ್ತ ಸಾಗಿದ ಭಾರತ 3 ರನ್ಗಳ ರೋಚಕ ಸೋಲನುಭವಿಸಿದೆ. ಈ ಮೂಲಕ ಫೈನಲ್ ಕನಸಲ್ಲಿದ್ದ ಭಾರತಕ್ಕೆ ತೀವ್ರ ನಿರಾಸೆಯಾಗಿದೆ.