ಬ್ರಿಸ್ಬೇನ್ : ಗಾಯದಿಂದ ಕ್ಷೀಣಿಸಿರುವ ಭಾರತ ತಂಡದ ಎದುರು ಆಸ್ಟ್ರೇಲಿಯಾ ಈ ಸರಣಿಯನ್ನು ಡ್ರಾ ಮಾಡಿಕೊಂಡ್ರೆ, ಅದು ಎರಡು ವರ್ಷಗಳ ಹಿಂದೆ ತವರಿನಲ್ಲಿ ಸರಣಿ ಸೋಲಿನ ಅಪಮಾನಕ್ಕಿಂತಲೂ ಕೆಟ್ಟ ಫಲಿತಾಂಶವಾಗಲಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಮೊದಲ ಟೆಸ್ಟ್ನಿಂದಲೇ ಭಾರತ ತಂಡ ಗಾಯದ ಸಮಸ್ಯೆಗೆ ಒಳಗಾಗುತ್ತಿದೆ. ಸರಣಿಯುದ್ದಕ್ಕೂ ಗಾಯದ ಸಮಸ್ಯೆ, ವಿರಾಟ್ ಕೊಹ್ಲಿ ಮತ್ತು ಕೆಲವು ವಿಶೇಷ ಪರಿಣಿತ ಬ್ಯಾಟ್ಸ್ಮನ್ಗಳ ಅನುಪಸ್ಥಿತಿಯಲ್ಲೂ ಆತ್ಮವಿಶ್ವಾಸದಿಂದ ಅತ್ಯುತ್ತಮ ಪ್ರದರ್ಶನ ತೋರುತ್ತಲೇ ಬಂದಿದೆ.
ಅದರಲ್ಲೂ ಆಸೀಸ್ ಭದ್ರಕೋಟೆ ಬ್ರಿಸ್ಬೇನ್ನಲ್ಲಿ ಪ್ರಧಾನ ಬೌಲರ್ಗಳ ಅನುಪಸ್ಥಿತಿಯಲ್ಲೂ ಆಸ್ಟ್ರೇಲಿಯಾ ತಂಡವನ್ನು ಎರಡೂ ಇನ್ನಿಂಗ್ಸ್ಗಳಲ್ಲಿ ಆಲೌಟ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಈ ಸರಣಿ ಡ್ರಾನಲ್ಲಿ ಅಂತ್ಯಗೊಂಡ್ರೆ, ಕಳೆದೆರಡು ವರ್ಷಗಳ ಹಿಂದಿನ ಸೋಲಿಗಿಂತಲೂ ಕೆಟ್ಟ ಫಲಿತಾಂಶವಾಗಲಿದೆ ಎಂದು ನಾನು ಪರಿಗಣಿಸುತ್ತೇನೆ. ಕಳೆದ ಬಾರಿ ತಂಡದಲ್ಲಿ ಇರದಿದ್ದ ಸ್ಮಿತ್ ಎಲ್ಲಾ ಪಂದ್ಯಗಳಲ್ಲೂ ಆಡಿದ್ದಾರೆ, ಡೇವಿಡ್ ವಾರ್ನರ್ ಕಳದೆರಡು ಪಂದ್ಯಗಳಲ್ಲಿ ಆಡಿದ್ದಾರೆ.
ಆದರೂ ಹಲವು ಸಮಸ್ಯೆಗಳಿಂದ 20 ಆಟಗಾರರನ್ನು ಬಳಿಸಿಕೊಂಡಿರುವ ಭಾರತ ತಂಡವನ್ನು ನಾವು ಸಾಕಷ್ಟು ಕಠಿಣವಾಗಿ ಎದುರಿಸುತ್ತಿದ್ದೇವೆ ಎಂದು cricket.com.au.ಗೆ ಹೇಳಿದ್ದಾರೆ.
ಗಾಯದಿಂದ ಕ್ಷೀಣಿಸಿದ ತಂಡದ ವಿರುದ್ಧ ಈ ಸರಣಿಯನ್ನು ನಮ್ಮ ತಂಡ ಡ್ರಾ ಮಾಡಿಕೊಂಡರೂ, ನನ್ನ ಪ್ರಕಾರ ಕಳೆದ ಸರಣಿಯ ಸೋಲಿಗಿಂತಲೂ ಕೆಟ್ಟ ಫಲಿತಾಂಶ ಆಗಲಿದೆ ಎಂದು ಅವರು ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ಗೆದ್ದರೆ, ಭಾರತ ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದು ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿತ್ತು. ನಂತರ ಸಿಡ್ನಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಕಠಿಣ ಪೈಪೋಟಿ ನಡುವೆಯೂ ಭಾರತ ತಂಡ ಡ್ರಾ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇದೀಗ ಕೊನೆಯ ಪಂದ್ಯ ಅಂತಿಮ ದಿನಕ್ಕೆ ಬಂದಿದ್ದು, ಭಾರತ ತಂಡ 324 ರನ್ಗಳ ಟಾರ್ಗೆಟ್ ಬೆನ್ನಟ್ಟಿದೆ. ಈ ಪಂದ್ಯವನ್ನು ಗೆದ್ದರೂ ಅಥವಾ ಡ್ರಾ ಸಾಧಿಸಿದ್ರೂ ಬಾರ್ಡರ್-ಗವಾಸ್ಕರ್ ಟ್ರೋಫಿ ಭಾರತದ ಕೈಸೇರಲಿದೆ.
ಇದನ್ನು ಓದಿ: ವರುಣನ ಉಪಟಳಕ್ಕೆ ಮೂರನೇ ಸೆಷನ್ ಬಲಿ: ಕುತೂಹಲ ಕೆರಳಿಸಿದ ಅಂತಿಮ ದಿನದ ಹೋರಾಟ