ನವದೆಹಲಿ: 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ - 20 ವಿಶ್ವಕಪ್ನಲ್ಲಿ ಭಾಗಿಯಾಗಿದ್ದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಪ್ರಶಸ್ತಿಗೆ ಮುತ್ತಿಕ್ಕಿ. ಹೊಸ ದಾಖಲೆ ನಿರ್ಮಾಣ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಪಾಕ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ಮೂಲಕ ಜಯ ಸಾಧಿಸಿದ್ದ ಯಂಗ್ ಇಂಡಿಯಾ, ಯಂಗ್ ಪ್ಲೇಯರ್ಸ್ಗೆ ಅವಕಾಶ ನೀಡಿತ್ತು. ಆದರೆ, ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಈ ಟೂರ್ನಿಯಿಂದ ಹೊರ ಉಳಿದಿದ್ದರು.
![Sachin & Ganguly](https://etvbharatimages.akamaized.net/etvbharat/prod-images/ebqrynaxqae3r2u_2906newsroom_1593422183_1058.jpg)
ಈ ಮಹತ್ವದ ಟೂರ್ನಿಯಿಂದ ಹೊರಗೆ ಉಳಿಯುವಂತೆ ದಿ ವಾಲ್ ರಾಹುಲ್ ದ್ರಾವಿಡ್, ತೆಂಡೂಲ್ಕರ್ ಹಾಗೂ ಗಂಗೂಲಿ ಅವರ ಮನವೊಲಿಸಿದ್ದರು ಎಂಬ ಮಾಹಿತಿಯನ್ನ ಅಂದಿನ ಟೀಂ ಇಂಡಿಯಾ ಮ್ಯಾನೇಜರ್ ಲಾಲ್ಚಂದ್ ರಜಪೂತ್ ಹೇಳಿ ಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಇಂಗ್ಲೆಂಡ್ನಲ್ಲಿ ನಡೆದಿದ್ದ ಕ್ರಿಕೆಟ್ ಟೂರ್ನಿ ವೇಳೆ ರಾಹುಲ್ ದ್ರಾವಿಡ್ ಕ್ಯಾಪ್ಟನ್ ಆಗಿದ್ದರು. ಈ ವೇಳೆ ದ್ರಾವಿಡ್ ತೆಂಡೂಲ್ಕರ್ ಹಾಗೂ ಗಂಗೂಲಿ ಮನವೊಲಿಕೆ ಮಾಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಯಂಗ್ ಪ್ಲೇಯರ್ಸ್ಗೆ ಅವಕಾಶ ನೀಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದರು. ಹೀಗಾಗಿ ತಂಡದಲ್ಲಿ ರೋಹಿತ್ ಶರ್ಮಾ, ರಾಬಿನ್ ಉತ್ತಪ್ಪ, ಯೂಸೂಫ್ ಪಠಾಣ್, ಜೋಗಿಂದರ್ ಶರ್ಮಾ ಅವಕಾಶ ಪಡೆದುಕೊಂಡಿದ್ದರು ಎಂದಿದ್ದಾರೆ. ಜತೆಗೆ 2007ರ ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗಲು ಕೆಲ ಪ್ಲೇಯರ್ಸ್ ಇಂಗ್ಲೆಂಡ್ನಿಂದ ಜೋಹಾನ್ಸ್ಬರ್ಗ್ಗೆ ಆಗಮಿಸಿದ್ದರು ಎಂಬ ಮಾಹಿತಿ ಹೊರಹಾಕಿದ್ದಾರೆ.
![007 world cup](https://etvbharatimages.akamaized.net/etvbharat/prod-images/ebk2r6gu8ae_jf2_2906newsroom_1593422183_750.jpg)
2007ರ ವಿಶ್ವಕಪ್ನಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾಗೆ ಎಲ್ಲವೂ ಹೊಸ ಚಾಲೇಂಜ್ ಆಗಿತು. ಎಲ್ಲರೂ ಯಂಗ್ ಪ್ಲೇಯರ್ಸ್ಗಳಿದ್ದರು. ಕೇವಲ ಬೆರಳೆಣಿಕೆಯಷ್ಟು ಅನುಭವಿ ಆಟಗಾರರು ಇದ್ದರು. ಈ ಟೂರ್ನಿಯಲ್ಲಿ ಎಲ್ಲರೂ ಹೊಸ ಇತಿಹಾಸ ರಚನೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದರು ಎಂದು ಲಾಲ್ಚಂದ್ ರಜಪೂತ್ ತಿಳಿಸಿದ್ದಾರೆ.
![Lalchand Rajput](https://etvbharatimages.akamaized.net/etvbharat/prod-images/emckqj5w4aawewz_2906newsroom_1593422183_666.jpg)
ಈ ಟೂರ್ನಿಯಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸ ಯಾರಲ್ಲೂ ಇರಲಿಲ್ಲ. ಈ ಹಿಂದೆ ಟಿ-20 ಕ್ರಿಕೆಟ್ನಲ್ಲಿ ನಮ್ಮ ಪ್ಲೇಯರ್ಸ್ಗೆ ಅಷ್ಟೊಂದು ಅನುಭವ ಕೂಡ ಇರಲಿಲ್ಲ. ಆದರೆ ನಮ್ಮ ಯುವ ಪಡೆ ಇತಿಹಾಸ ರಚನೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ತಿಳಿಸಿದ್ದಾರೆ.
ಇದರ ಜತೆಗೆ ಅನೇಕ ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದ ಸಚಿನ್ಗೆ ವಿಶ್ವಕಪ್ ಗೆದ್ದಿಲ್ಲ ಎಂಬ ಕೊರಗು ಕೂಡ ಇತ್ತು. ಅದು 2011ರ ಏಕದಿನ ವಿಶ್ವಕಪ್ನಲ್ಲಿ ಈಡೇರಿತು ಎಂದು ಅವರು ಇದೇ ವೇಳೆ ಹೇಳಿದ್ದಾರೆ.