ETV Bharat / sports

ಐಪಿಎಲ್​ನಿಂದ ಸ್ಟಾರ್​ ಸ್ಫೋರ್ಟ್ಸ್​ ಗಳಿಸಿದ್ದು ಎಷ್ಟು ಸಾವಿರ ಕೋಟಿ ರೂ. ಗೊತ್ತಾ? - ಬಿಸಿಸಿಐ

ಈಗಾಗಲೇ ವೀಕ್ಷಣೆಯಲ್ಲಿ ಹಿಂದಿನ ಐಪಿಎಲ್​ಗಳ ದಾಖಲೆಯನ್ನು 2020ರ ಐಪಿಎಲ್ ಮುರಿದಿದೆ. ಇದೀಗ ಐಪಿಎಲ್​ ಅಧಿಕೃತ ಪ್ರಸಾರಕ ಸ್ಟಾರ್​ ಸ್ಪೋರ್ಟ್ಸ್​ ಚಾನೆಲ್​ 2 ತಿಂಗಳ ಟೂರ್ನಿಯಲ್ಲಿ ಬರೋಬ್ಬರಿ 2500 ಕೋಟಿ ರೂ. ಜೇಬಿಗಿಳಿಸಿಕೊಂಡಿದೆ ಎಂದು ವರದಿಯಾಗಿದೆ.

ಐಪಿಎಲ್ 2020 ಜಾಹಿರಾತು ಆದಾಯ
ಐಪಿಎಲ್ 2020 ಜಾಹಿರಾತು ಆದಾಯ
author img

By

Published : Nov 12, 2020, 9:16 PM IST

ಮುಂಬೈ: ಕೋವಿಡ್​ ಸಂಕಷ್ಟದಿಂದ 13ನೇ ಆವೃತ್ತಿ ಐಪಿಎಲ್​ ಟೂರ್ನಿ ಯನೈಟೆಡ್​ ಅರಬ್ ಎಮಿರೇಟ್ಸ್​ನಲ್ಲಿ ನಡೆದಿದೆ. ಪ್ರೇಕ್ಷಕರಿಲ್ಲದೆ ನಡೆದ ಈ ಟೂರ್ನಿಯಲ್ಲಿ ಡೆಸ್ನಿ ಸ್ಟಾರ್​ ಇಂಡಿಯಾ ಬರೋಬ್ಬರಿ 2500 ಕೋಟಿ ರೂ. ಆದಾಯ ಗಳಿಸಿದೆ ಎಂದು ವರದಿಯಾಗಿದೆ.

ಈಗಾಗಲೇ ವೀಕ್ಷಣೆಯಲ್ಲಿ ಹಿಂದಿನ ಐಪಿಎಲ್​ಗಳ ದಾಖಲೆಯನ್ನು 2020ರ ಐಪಿಎಲ್ ಮುರಿದಿದೆ. ಇದೀಗ ಐಪಿಎಲ್​ ಅಧಿಕೃತ ಪ್ರಸಾರಕ ಸ್ಟಾರ್​ ಸ್ಪೋರ್ಟ್ಸ್​ ಚಾನೆಲ್​ 2 ತಿಂಗಳ ಟೂರ್ನಿಯಲ್ಲಿ ಬರೋಬ್ಬರಿ 2500 ಕೋಟಿ ರೂ. ಜೇಬಿಗಿಳಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಈ ಆದಾಯದಲ್ಲಿ 2,250 ಕೋಟಿ ರೂಪಾಯಿ ಜಾಹೀರಾತು ಮೂಲಗಳಿಂದ ಬಂದಿದ್ದರೆ, 200ರಿಂದ 250 ಕೋಟಿ ರೂಪಾಯಿ ಟಿವಿ ಮತ್ತು ಹಾಟ್​ಸ್ಟಾರ್ ಸಬ್​ಸ್ಕ್ರಿಪ್ಸನ್​ನಿಂದ ಗಳಿಸಿದೆ ಎಂದು ಟಾಪ್​ ಕ್ರೀಡಾ ವೆಬ್​ಸೈಟ್​ ವರದಿ ಮಾಡಿದೆ. ಈ ಆದಾಯ 2019ರ ಐಪಿಎಲ್ ಟೂರ್ನಿಗಿಂತಲೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.

2019ರಲ್ಲಿ ಸ್ಟಾರ್ ಸ್ಫೊರ್ಟ್ಸ್​ 2200 ಕೋಟಿ ರೂ. ಆದಾಯ ಗಳಿಸಿತ್ತು. ಈ ಆವೃತ್ತಿಯಲ್ಲಿ 18 ಪ್ರಾಯೋಜಕರು ಮತ್ತು 117 ಜಾಹೀರಾತುಗಳನ್ನು ಪಡೆದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.