ಮುಂಬೈ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು ಎಂಬ ಬಯಕೆ ಹೊಂದಿದ್ದರು. ಆದರೆ, ಗೇಮ್ ಫಿನಿಶಿಂಗ್ ಮಾಡಲು ಧೋನಿಗಿಂತ ಬೇರೆ ಆಟಗಾರರಿಲ್ಲ ಎಂಬ ಕಾರಣಕ್ಕೆ ಆಡಳಿತ ಮಂಡಳಿ ಕೆಳ ಕ್ರಮಾಂಕದಲ್ಲಿ ಆಡಲು ಸೂಚಿಸಿತ್ತು ಎಂದು ಮಾಜಿ ಕ್ರಿಕೆಟಿಗ ಆರ್ಪಿ ಸಿಂಗ್ ನೆನಪಿಸಿಕೊಂಡಿದ್ದಾರೆ.
ಕೂಲ್ ಕ್ಯಾಪ್ಟನ್ ವೃತ್ತಿ ಜೀವನದಲ್ಲಿ 5 ಮತ್ತು 6ನೇ ಕ್ರಮಾಂಕದಲ್ಲೇ ಹೆಚ್ಚಿನ ಪಂದ್ಯಗಳನ್ನಾಡಿದ್ದಾರೆ. ಆದರೆ, ನಿಜವಾಗಿಯೂ ಅವರೂ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಯಸಿದ್ದರು. ಆದರೆ, ಆಡಳಿತ ಮಂಡಳಿ ಒತ್ತಡವನ್ನು ನಿಭಾಯಿಸಿ ಆಡಲು ಧೋನಿಗಿಂತ ಉತ್ತಮ ಆಟಗಾರರಿಲ್ಲ ಎಂದು ನಂಬಿದ್ದರಿಂದ ಅವರ ಹೆಚ್ಚು ಕೆಳಕ್ರಮಾಂಕದಲ್ಲಿ ಆಡಬೇಕಾಯಿತು ಎಂದು ಆರ್ಪಿ ಸಿಂಗ್ ಹೇಳಿದ್ದಾರೆ.
ನಾನೇನು ತಪ್ಪಾಗಿ ಹೇಳುತ್ತಿಲ್ಲ, ಸ್ವತಃ ಧೋನಿಯೇ ಈ ಮಾತನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಕೆಳಕ್ರಮಾಂದಲ್ಲಿ ಒತ್ತಡ ನಿಭಾಯಿಸಿಕೊಂಡು ಆಡುವ ಉತ್ತಮ ಬ್ಯಾಟ್ಸ್ಮನ್ಗಳು ಯಾರೂ ಇಲ್ಲ ಎಂದು ತಂಡ ಭಾವಿಸಿತ್ತು ಎಂದು ಅವರು ಖಾಸಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇತಿಹಾಸದ ಬಗ್ಗೆ ಮಾತನಾಡಿದರೆ ಧೋನಿಯಂತಹ ಪಂದ್ಯವನ್ನು ಗೆಲ್ಲಿಸಿರುವ ಆಟಗಾರನನ್ನು ನೀವು ಎಂದಿಗೂ ಕಂಡಿರುವುದಿಲ್ಲ. ನಾವು ಮೈಕಲ್ ಬೆವೆನ್ ಮತ್ತು ಕೆಲವರ ಬಗ್ಗೆ ಮಾತನಾಡಬಹುದು. ಆದರೆ ಧೋನಿ ಎಲ್ಲರಿಗಿಂತ ಸಂಪೂರ್ಣ ಭಿನ್ನವಾಗಿದ್ದ ಬ್ಯಾಟ್ಸ್ಮನ್ ಎಂದು ಆರ್ಪಿ ಸಿಂಗ್ ಹೇಳಿದ್ದಾರೆ.