ಅಬುಧಾಬಿ: ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ 190 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಐಪಿಎಲ್ ಇತಿಹಾಸದಲ್ಲಿ ಫೈನಲ್ ಪ್ರವೇಶಿಸದ ಏಕೈಕ ತಂಡವಾಗಿರುವ ಡೆಲ್ಲಿ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಅದ್ಭುತ ಪ್ರದರ್ಶನ ತೋರಿತು. ಆರಂಭಿಕರಾಗಿ ಕಣಕ್ಕಿಳಿದ ಮಾರ್ಕಸ್ ಸ್ಟೋಯ್ನಿಸ್ (38) ಹಾಗೂ ಶಿಖರ್ ಧವನ್ ಮೊದಲ ವಿಕೆಟ್ಗೆ 86 ರನ್ಗಳ ಜೊತೆಯಾಟ ನೀಡಿದರು.
-
Innings Break!
— IndianPremierLeague (@IPL) November 8, 2020 " class="align-text-top noRightClick twitterSection" data="
The @DelhiCapitals post a formidable total of 189/3 on the board, courtesy a fine knock of 78 from @SDhawan25 and a quick-fire 42* by Hetmyer.#SRH chase coming up shortly.
Scorecard - https://t.co/WGpwP2BIui #Dream11IPL #Qualifier2 pic.twitter.com/PIyqHNGiFx
">Innings Break!
— IndianPremierLeague (@IPL) November 8, 2020
The @DelhiCapitals post a formidable total of 189/3 on the board, courtesy a fine knock of 78 from @SDhawan25 and a quick-fire 42* by Hetmyer.#SRH chase coming up shortly.
Scorecard - https://t.co/WGpwP2BIui #Dream11IPL #Qualifier2 pic.twitter.com/PIyqHNGiFxInnings Break!
— IndianPremierLeague (@IPL) November 8, 2020
The @DelhiCapitals post a formidable total of 189/3 on the board, courtesy a fine knock of 78 from @SDhawan25 and a quick-fire 42* by Hetmyer.#SRH chase coming up shortly.
Scorecard - https://t.co/WGpwP2BIui #Dream11IPL #Qualifier2 pic.twitter.com/PIyqHNGiFx
27 ಎಸೆತಗಳನ್ನೆದುರಿಸಿದ ಸ್ಟೋಯ್ನಿಸ್ 5 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಯ್ಯರ್ 21 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
ಆದರೆ ಅಬ್ಬರದ ಮುಂದುವರಿಸಿದ ಧವನ್ 50 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ 78 ರನ್ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.
ಕೊನೆಯಲ್ಲಿ ಅಬ್ಬರಿಸಿದ ಹೆಟ್ಮೈರ್ 22 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಔಟಾಗದೆ 42 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.