ETV Bharat / sports

ಅಯ್ಯರ್, ಪಂತ್ ಅರ್ಧಶತಕ: ಮುಂಬೈಗೆ 157 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದ ಡೆಲ್ಲಿ - ರಿಷಭ್ ಪಂತ್

ಶ್ರೇಯಸ್ ಅಯ್ಯರ್ ಹಾಗೂ ಪಂತ್​ ಅರ್ಧಶತಕದ ನೆರವಿನಿಂದ ಡೆಲ್ಲಿ ತಂಡ ಐಪಿಎಲ್ ಫೈನಲ್ ಪಂದ್ಯದಲ್ಲಿ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 156 ರನ್​ಗಳಿಸಿದೆ.

ಮುಂಬೈಗೆ 157 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದ ಡೆಲ್ಲಿ

author img

By

Published : Nov 10, 2020, 9:34 PM IST

ದುಬೈ: ನಾಯಕ ಶ್ರೇಯಸ್​ ಅಯ್ಯರ್ ಹಾಗೂ ರಿಷಭ್ ಪಂತ್​ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಡೆಲ್ಲಿ ತಂಡ ಐಪಿಎಲ್ ಫೈನಲ್​ ಪಂದ್ಯದಲ್ಲಿ ಮುಂಬೈಗೆ 157 ರನ್​ಗಳ ಟಾರ್ಗೆಟ್​ ನೀಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ನಡೆಸಿದ ಡೆಲ್ಲಿ ಮೊದಲ ಓವರ್​ನಲ್ಲೇ ಮಾರ್ಕಸ್​ ಸ್ಟೋಯ್ನಿಸ್(0) ಹಾಗೂ 3ನೇ ಓವರ್​ನಲ್ಲಿ ರಹಾನೆ(2) ವಿಕೆಟ್​ ಕಳೆದುಕೊಂಡಿತು. ಕಳೆದ ಪಂದ್ಯದ ಹೀರೋ ಶಿಖರ್​ ಧವನ್​ 15 ರನ್​ಗಳಿಸಿ ಜಯಂತ್​ ಯಾದವ್​ ಓವರ್​ನಲ್ಲಿ ಬೌಲ್ಡ್​ ಆದರು.

ಆದರೆ ನಾಲ್ಕನೇ ವಿಕೆಟ್​ಗೆ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್​ ಹಾಗೂ ಪಂತ್​ 96 ರನ್ ಜೊತೆಯಾಟ ನೀಡಿ ಕುಸಿದಿದ್ದ ಡೆಲ್ಲಿ ತಂಡವನ್ನು ಮೇಲೆತ್ತಿದ್ದರು. ಪಂತ್​ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 56 ನ್​ಗಳಿಸಿದರೆ, ಅಯ್ಯರ್​ 50 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ ಅಜೇಯ 65 ರನ್​ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅಕ್ಸರ್ ಪಟೇಲ್ 9 , ಹೆಟ್ಮೈರ್ 5 ವಿಕೆಟ್​ ನೀಡಿದರು.

ಮುಂಬೈ ಪರ ಟ್ರೆಂಟ್ ಬೌಲ್ಟ್​ 30 ರನ್​ ನೀಡಿದ 3 ವಿಕೆಟ್​ ಪಡೆದರೆ, ಕೌಲ್ಟರ್ ನೈಲ್ 29ಕ್ಕೆ 2, ಜಯಂತ್ ಯಾದವ್​ 25ಕ್ಕೆ 1 ವಿಕೆಟ್​ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.