ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಮೂರು ಬಾರಿ ಜಯ ಸಾಧಿಸುವುದರ ಜೊತೆಗೆ, ಎಂಟು ಬಾರಿ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡಿದೆ. ಈ ಎಲ್ಲಾ ಕೀರ್ತಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಲ್ಲುತ್ತದೆ.
ಮುಂಬರುವ ಐಪಿಎಲ್ ಎಂ.ಎಸ್. ಧೋನಿಯ ಅಂತಿಮ ಸೀಸನ್ ಆಗಲಿದೆ ಎಂದು ಹೇಳಲಾಗುತ್ತಿದ್ದು, ನಂತರ ಸಿಎಸ್‌ಕೆ ಕ್ಯಾಪ್ಟನ್ ಯಾರು ಎನ್ನುವ ಬಗ್ಗೆ ಧೋನಿ ಪಕ್ಕಾ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ. ಮಹೀ ಕೂಡ ನಾಯಕ ಸ್ಥಾನದಿಂದ ಕೆಳಗಿಳಿಯಲು ಬಯಸಿದ್ದಾರೆ ಎಂದು ಸಿಎಸ್‌ಕೆ ಆಲ್‌ರೌಂಡರ್ ಡ್ವೇನ್ ಬ್ರಾವೋ ಹೇಳಿದ್ದಾರೆ.
ಮುಂದಿನ ಸರಣಿಯಿಂದ ಧೋನಿ ಆಟಗಾರನಾಗಿ ಮುಂದುವರಿಯಲಿದ್ದು, ತಂಡದ ಜವಾಬ್ದಾರಿಯನ್ನು ಸುರೇಶ್ ರೈನಾ ಅಥವಾ ಯುವ ಆಟಗಾರರಿಗೆ ಹಸ್ತಾಂತರಿಸಲು ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಧೋನಿ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಅವರು ಸುಮಾರು 16 ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ್ದಾರೆ. ನಾಯಕನಾಗಿ ಅವರು ಅನೇಕ ಯಶಸ್ಸನ್ನು ನೀಡಿದ್ದು, ಐಪಿಎಲ್‌ನಲ್ಲಿ ಆಡಲು ದುಬೈನಲ್ಲಿರುವ ಮಹೀ ಅಭ್ಯಾಸ ಮಾಡುತ್ತಿದ್ದಾರೆ.