ಸೆಹ್ವಾಗ್,ಕೊಹ್ಲಿ,ಗಂಭೀರ್ ಸನ್ಮಾನ ಕಾರ್ಯಕ್ರಮ ರದ್ದು: 10 ಲಕ್ಷ ಪೊಲೀಸ್ ಹುತಾತ್ಮ ನಿಧಿಗೆ ನೀಡಲು ಡಿಡಿಸಿಎ ನಿರ್ಧಾರ
ನವದೆಹಲಿ : ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 40 ಕ್ಕೂ ಹೆಚ್ಚು ಸಿಆರ್ಪಿಎಫ್ ಯೋದರು ಮೃತಪಟ್ಟ ಹಿನ್ನೆಲೆಯಲ್ಲಿ ಕೊಹ್ಲಿ, ಸೆಹ್ವಾಗ್ ಹಾಗೂ ಗಂಭೀರ್ಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ದೆಹಲಿ ಕ್ರಿಕೆಟ್ ಆಡಳಿತ ಮಂಡಳಿ ರದ್ದುಗೊಳಿಸಿದೆ.
ಆಸ್ಟ್ರೇಲಿಯಾ ವಿರುದ್ಧದ 5 ನೇ ಏಕದಿನ ಪಂದ್ಯದ ದಿನ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಗೆ ಸನ್ಮಾನ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಪುಲ್ವಾಮಾ ದಾಳಿಯಿಂದ ಯೋದರು ಹುತಾತ್ಮರಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸಿ ₹10 ಲಕ್ಷವನ್ನು ದೆಹಲಿ ಪೊಲೀಸರು ಹಾಗೂ ಹುತಾತ್ಮ ಯೋಧರಿಗೆ ನೀಡಲು ನಿರ್ಧರಿಸಿದ್ದೇವೆ ಎಂದು ಡಿಡಿಸಿಎ ಅಧ್ಯಕ್ಷ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪುಲ್ವಾಮ ದುರಂತದ ಬಳಿಕ ಬಿಸಿಸಿಐ ಕೂಡ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿ, ಆ ಹಣವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡುವುದಾಗಿ ಘೋಷಿಸಿತ್ತು. ಇದೀಗ ದಿಲ್ಲಿ ಕ್ರಿಕೆಟ್ ಸಂಸ್ಥೆ ಕೂಡ ಬಿಸಿಸಿಐ ಹಾದಿ ತುಳಿದಿದೆ.